ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಡಿ.ಕೆ (Dcm Dk Shivakumar) ಶಿವಕುಮಾರ್ ಹೇಳಿಕೆಯಿಂದ ಹೊಸ ಸಂಚಲನ ಸೃಷಿಯಾಗಿದೆ. ಮುಖ್ಯಮಂತ್ರಿ ಕುರ್ಚಿಯ (Cm fight) ಕುರಿತು ನಮ್ಮಲ್ಲಿ ಒಪ್ಪಂದವಾಗಿದೆ ಎಂಬ ಡಿಕೆ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Parameshwar) ಅಸಮಾಧಾನ ಹೊರಹಾಕಿದ್ದಾರೆ.
ಇಂದು ಈ ಬಗ್ಗೆ ಪ್ರತಿಕ್ರಿಯಿಸಿರೋ ಗೃಹ ಸಚಿವ ಜಿ.ಪರಮೇಶ್ವರ್, ಯಾವ ಒಪ್ಪಂದದ ಬಗ್ಗೆಯೂ ನಮಗೆ ತಿಳಿದಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೋ ನಮಗೆ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದು, ಯಾವುದೇ ಒಪ್ಪಂದ ಆಗಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.ಆ ರೀತಿ ಒಪ್ಪಂದ ಆಗಿದೆ ಅಂದ್ರೆ ನಾವೆಲ್ಲ ಏಕೆ ಇರ್ಬೇಕು. ಅವರಿಬ್ಬರೇ ರಾಜಕಾರಣ ಮಾಡ್ಲಿ, ಅವರಿಬ್ಬರೇ ನಡೆಸಲಿ ಬಿಡಿ, ಅವರನ್ನು ಬಿಟ್ಟು ಬೇರೆಯವರು ಇರೋದೇ ಬೇಡ್ವಾ ಅಂತ ಪರೋಕ್ಷವಾಗಿ ಕಿಡಿಕಾರಿದ್ದಾರೆ.