ಸಂಸತ್ ಕಲಾಪದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಬ್ಬರಿಸಿದ್ದಾರೆ (Opposition Leader Rahul Gandhi). ಲೋಕಸಭಾ ಸದನದಲ್ಲಿ(Parliment Session) RSS, BJPಯನ್ನ ತರಾಟೆಗೆ ತೆಗೆದುಕೊಂಡಿರುವ ರಾಹುಲ್‌ಗಾಂಧಿ(Rahul Gandhi), ಹಿಂಸೆ, ದ್ವೇಷ ಅನ್ನೋರು ಹಿಂದೂಗಳೇ ಅಲ್ಲ ಎಂದಿದ್ದಾರೆ.. ಮುಸ್ಲಿಂ(Muslim), ಕ್ರೈಸ್ತ(Christian), ಜೈನ(jain), ಬೌದ್ಧ(Buddhist) ಧರ್ಮವನ್ನೂ ಪ್ರಸ್ತಾಪಿಸಿ ಮಾತನಾಡಿದ ರಾಹುಲ್ ಗಾಂಧಿ, ಯಾರಿಗೂ ಹೆದರುವ ಮಾತೇ ಇಲ್ಲ ಎಂದು ಗುಡುಗಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳಾದ NEET, ಅಗ್ನಿವೀರ್, ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಮಾತನ್ನು ಮೌನವಾಗಿಯೇ ಕೇಳಿಸಿಕೊಳ್ತಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹಸಚಿವ ಅಮಿತ್‌ಷಾ (Home Minister Amith Sha) ಎದ್ದುನಿಂತು ಮಾತನಾಡುವಂತೆ ಮಾಡಿದ್ದಾರೆ.
ರಾಹುಲ್ ಗಾಂಧಿ ಮಾತನಾಡಿದರೆ ಪಪ್ಪು(Pappu) ಎಂದು ಆಡಿಕೊಳ್ತಿದ್ದವರು ಮೂಗಿನ ಮೇಲೆ ಬೆರಳಿಡುವಂತೆ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಅಕ್ಷರಶಃ ಸದನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Lok Sabha Leader of Opposition Rahul Gandhi), ಸ್ಪೀಕರ್ ಓಂ ಬಿರ್ಲಾ(Speaker Om Birla Invited to Rahul Gandhi) ರಾಹುಲ್ ಗಾಂಧಿಗೆ ಮಾತನಾಡಲು ಕರೆಯುತ್ತಿದ್ದ ಹಾಗೆ ಆಕ್ರೋಶಭರಿತ ಮಾತನಾಡಿದ್ರು. ರಾಹುಲ್‌ಗಾಂಧಿ ಹೇಳುತ್ತಾ ಹೋದ ಒಂದೊಂದು ಮಾತುಗಳು ಕೇಂದ್ರ ಸರ್ಕಾರಕ್ಕೆ ಚಾಟಿ ಏಟಿನಂತಿದ್ದವು. ಚುನಾವಣೆ ಸಮಯದಲ್ಲಿ ಬಿಜೆಪಿ ನಾಯಕರು ನೀಡಿದ್ಧ ಹೇಳಿಕೆಗಳನ್ನೆ ಅಸ್ತ್ರ ಮಾಡ್ಕೊಂಡು ವಾಗ್ದಾಳಿ ಮಾಡಿದ್ರು. ಕೊನೆಗೆ, ಮೋದಿ, ಅಮಿತ್‌ಷಾ ಕೂಡ ಕಳೆದ 10 ವರ್ಷದಲ್ಲಿ ಸದನದಲ್ಲಿ ಬೇರೊಬ್ಬರ ಮಾತಿಗೆ ಎದ್ದುನಿಂತು ಪ್ರತಿಕ್ರಿಯೆ ನೀಡುವಂತಾಯ್ತು.
ಪ್ರಧಾನಮಂತ್ರಿಗಳಿಗೆ ದೇವರ ಜೊತೆ ನೇರ ಸಂಪರ್ಕವಿದೆ. ಅದಕ್ಕೆ ದೇವರ ಜೊತೆ ಪ್ರಧಾನಿಗಳು ಮಾತಾಡ್ತಾ ಇರ್ತಾರೆ. ಪರಮಾತ್ಮ ಪ್ರಧಾನಿಯವರ ಆತ್ಮದ ಜೊತೆ ಮಾತಾಡ್ತಾರೆ. ನಾವು-ನಾವೆಲ್ಲಾ ಜೈವಿಕವಾಗಿ ಜನಿಸಿದ ಜೀವಿಗಳು. ಆದರೆ ಪ್ರಧಾನಿ ಮೋದಿ ಅವರು ಜೈವಿಕ ಜೀವಿ ಅಲ್ಲ, ದೇವರ ಮಗ ಅಂದಿದ್ರು ಎಂದು ವ್ಯಂಗ್ಯವಾಡಿದ್ರು. ಈ ವೇಳೆ ರಾಹುಲ್ ಮಾತಿಗೆ ಸ್ಪೀಕರ್ ಓಂ ಬಿರ್ಲಾ ಅಡ್ಡಿಪಡಿಸಿದಾಗ ರಾಹುಲ್‌ಗಾಂಧಿ ಮತ್ತೊಂದು ಅಸ್ತ್ರ ಬಿಟ್ರು. ದೇವರ ಜೊತೆ ಮೋದಿ ಮಾತಾಡ್ತಾರೆ. ಇದನ್ನ ಪ್ರಧಾನಮಂತ್ರಿಗಳೇ ಹೇಳಿದ್ದು ಸ್ಪೀಕರ್ ಸರ್. ನಾನ್ ಹೇಳಿದ್ದಲ್ಲ ಅಂದ್ರು.
ಈ ವೇಳೆ ಪ್ರಧಾನಮಂತ್ರಿಗಳನ್ನ ಗೌರವಿಸಿ ಎಂದು ರಾಹುಲ್ ಗಾಂಧಿಗೆ ಸ್ಪೀಕರ್ ಹೇಳಿದ್ರು. ಈ ವೇಳೆ ಮತ್ತೆ ತಿರುಗೇಟು ಕೊಟ್ಟ ರಾಹುಲ್ ಗಾಂಧಿ, ಸ್ಪೀಕರ್ ಸರ್, ಪ್ರಧಾನಿ ಬಗ್ಗೆ ಗೌರವವಿದೆ. ಅದಕ್ಕೆ ಪ್ರಧಾನಿಗಳ ಮಾತನ್ನೇ ಹೇಳ್ತಿದ್ದೀನಿ.. ನಾನು ಜೈವಿಕಜೀವಿಯಾಗಿ ಜನಿಸಿಲ್ಲ ಎಂದು ದೇಶದ ಜನರ ಎದುರೇ ಮೋದಿ ಹೇಳಿದ್ದು ಅಂತಾ ಕುಟುಕಿದ್ರು. ಈ ನಡುವೆ ಶಿವನ ಫೋಟೋ ಹಿಡಿದು ಮಾತು ಶುರುಮಾಡಿದ ರಾಹುಲ್ ಗಾಂಧಿಗೆ ಸ್ಪೀಕರ್ ಅಡ್ಡಿ ಮಾಡಿದ್ರು. ಸಂಸತ್ ನಿಯಾಮವಳಿ ಪಾಲಿಸಿ, ಯಾವುದೇ ಧರ್ಮ, ಚಿಹ್ನೆಗಳನ್ನ ಪ್ರದರ್ಶಿಸಬಾರದು ಅಂದಾಗ ಸಣ್ಣ ಗಲಾಟೆಯೂ ನಡೀತು.
ಈ ವೇಳೆ ರಾಹುಲ್ ಗಾಂಧಿ ಇಷ್ಟಕ್ಕೆ ಸುಮ್ಮನಾಗದೆ, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್ ಧರ್ಮಗಳನ್ನೆಲ್ಲಾ ಉಲ್ಲೇಖಿಸಿದ್ರು. ಹಿಂದೂಗಳು ಅಂತ ಹೇಳೋ ಬಿಜೆಪಿ, RSS ಅವರದ್ದು ಬರೀ ಹಿಂಸೆ, ದ್ವೇಷ, ಹೆದರಿಸೋ ಕೆಲಸ.. ಆದ್ರೆ ಎಲ್ಲಾ ಧರ್ಮಗಳ ಸಂದೇಶವೂ ಒಂದೇ. ಅದು ಹೆದರಬೇಡ.. ಯಾರನ್ನೂ ಹೆದರಿಸಬೇಡ ಅಂತ. ಅಭಯ ಮುದ್ರೆ ಹೇಳಿದೆ ಹೆದರಬೇಡ ಅಂತ. ಮಹಾಶಿವನೂ ಹೇಳಿದ್ದು ಒಂದೇ ಹೆದರಬೇಡ.. ಯಾರನ್ನೂ ಹೆದರಿಸಬೇಡ. ಇಸ್ಲಾಂನಲ್ಲೂ ಹೇಳಿದೆ ಯಾರಿಗೂ ಹೆದರಬೇಡ. ಸಿಖ್ ಧರ್ಮದ ಮೇಲೆ ಆಕ್ರಮಣ ಆಯ್ತು. ಆಗ ಗುರುನಾನಕ್ ಕೂಡ ಹೇಳಿದ್ದು ಹೆದರಬೇಡ. ಯಾರನ್ನೂ ಹೆದರಿಸಬೇಡ ಅಂತ ಸಂದೇಶ ಕೊಟ್ರು. ಕ್ರೈಸ್ತ ಧರ್ಮದ ಜೀಸಸ್ ಮುದ್ರೆ ಏನ್ ಹೇಳುತ್ತೆ, ಯಾರಿಗೂ ಹೆದರಬೇಡ.. ಯಾರನ್ನೂ ಹೆದರಿಸಬೇಡ. ಒಂದ್ ಕೆನ್ನೆಗೆ ಹೊಡೆದ್ರೆ ಇನ್ನೊಂದು ಕೆನ್ನೆ ಕೊಡು ಅಂತ. ಬೌದ್ಧ ಧರ್ಮ, ಜೈನ ಧರ್ಮವೂ ಅದನ್ನೇ ಹೇಳಿದೆ ಎಂದು ಧರ್ಮದ ನೀತಿಯನ್ನು ಬೋಧಿಸಿದ್ರು.
ರಾಹುಲ್ ಗಾಂಧಿ ಭಾಷಣ ಮಾಡುತ್ತಾ ನೇರವಾಗೇ ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸಿದ್ರು. ಹಿಂದೂಗಳು ಅಂತ ಹೇಳಿಕೊಳ್ತಾ ಬರೀ ಹಿಂಸೆ, ದ್ವೇಷ ಮೈಗೂಡಿಸಿಕೊಂಡಿದ್ದಾರೆ ಎಂದಾಗ ಪ್ರಧಾನಿ ಮೋದಿಯೇ ಎದ್ದು ಆಕ್ರೋಶ ಹೊರಹಾಕಿದ್ರು. ನಾವು ಹಿಂದೂಗಳ ಅಂತ ಹೇಳಿಕೊಳ್ತಾರೆ, ಆದ್ರೆ ಅವ್ರ ಆಲೋಚನೆ ಬರೀ ಹಿಂಸೆ.. ಹಿಂಸೆ.. ಅವರ ಆಲೋಚನೆ ಬರೀ ದ್ವೇಷ.. ದ್ವೇಷ.. ದ್ವೇಷ.. ಇದೇ ಸತ್ಯ.. ಸತ್ಯ.. ಸತ್ಯ… ದ್ವೇಷ ಕಾರುವ ನೀವುಗಳು ಹಿಂದೂಗಳೇ ಅಲ್ಲ ಎಂದ್ರು. ಈ ವೇಳೆ ಎದ್ದು ನಿಂತ ಪ್ರಧಾನಿ, ಇದು ತುಂಬಾ ಗಂಭೀರವಾದ ವಿಷಯ ಆಗ್ತಿದೆ. ಇಡೀ ಹಿಂದೂ ಸಮಾಜ ಹಿಂಸಿಸುವರು ಅಂತಿದ್ದಾರೆ. ಹಿಂದೂ ಸಮಾಜಕ್ಕೆ ಅವಮಾನಿಸ್ತಿದ್ದಾರೆ ಎಂದು ಮಾತನ್ನು ತಿರುಗಿಸುವ ಪ್ರಯತ್ನ ಮಾಡಿದ್ರು. ಆದರೆ ರಾಹುಲ್ ಗಾಂಧಿ ಆಸ್ಪದ ಕೊಡಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ. ನಾನು ಹೇಳಿದ್ದು ಬಿಜೆಪಿ-ಆರ್‌ಎಸ್‌ಎಸ್‌ಗೆ ಎಂದು ಸ್ಪಷ್ಟನೆ ನೀಡಿದ್ರು. ಈ ವೇಳೆ ವಿಪಕ್ಷ ನಾಯಕರಿಂದ ಹಿಂದೂಗಳಿಗೆ ಅವಮಾನ. ಹಿಂದೂಗಳು ಹಿಂಸೆ ಮಾಡ್ತಾರೆ ಅಂತಿದ್ದಾರೆ. ಕೋಟ್ಯಾಂತರ ಹಿಂದೂಗಳಿಗೆ ಇದು ಅವಮಾನ. ಸಂವಿಧಾನ ಸ್ಥಾನದಲ್ಲಿ ಕೂತು ಮಾತಾಡಿದ್ದಾರೆ. ತಕ್ಷಣ ಅವರು ಈ ಸಂಸತ್‌ನಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ರು.
ಇಷ್ಟೊಂದು ಮಾತಿನ ಚಕಮಕಿ ನಡೆದರೂ ರಾಹುಲ್‌ಗಾಂಧಿ ವಿಪಕ್ಷ ನಾಯಕರಾಗಿ ಸದನದಲ್ಲಿ ಅಬ್ಬರಿಸೋದನ್ನ ಮುಂದುವರಿಸಿದ್ರು. ಬಿಜೆಪಿಯವರಿಗೆ, ಮೋದಿಯವ್ರಿಗೆ ಬಹಿರಂಗವಾಗೇ ಲೋಕಸಭೆ ಕಲಾಪದಲ್ಲಿ ಸವಾಲ್ ಹಾಕಿದ ಪ್ರಸಂಗವೂ ನಡೀತು. ಬಿಜೆಪಿಯನ್ನ ವಿರೋಧಿಸಿದಕ್ಕೆ ದಾಳಿ ಮಾಡಿದ್ರು. ವೈಯಕ್ತಿಕವಾಗಿ ನಮ್ಮ ಮೇಲೆ ದಾಳಿ ನಡೆಸಿದ್ರು. ಈಗಲೂ ನಮ್ಮವರು ಜೈಲಲ್ಲಿ ಇದ್ದಾರೆ ಎನ್ನುವ ಮೂಲಕ ಕೇಜ್ರಿವಾಲ್ ನೆನಪು ಮಾಡಿಕೊಂಡ್ರು. ಮೊನ್ನೆ ಒಬ್ಬರು ರಿಲೀಸ್ ಆದ್ರು ಎನ್ನುವ ಮೂಲಕ ಹೇಮಂತ್ ಸೊರೆನ್ ಅವರನ್ನು ನೆನಪು ಮಾಡಿಕೊಂಡ್ರು. ಅಧಿಕಾರ, ಸಂಪತ್ತಿನ ದುರ್ಬಳಕೆ ಮಾಡಿಕೊಂಡ್ರು. ಬಡವರು, ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದ ಮೇಲೆ ಆಕ್ರಮಣ ಮಾಡಿದ್ರು. ವಿರೋಧಿಸಿದವರನ್ನೆಲ್ಲಾ ಹತ್ತಿಕ್ಕುವ ಕೆಲಸ ಮಾಡಿದ್ರು. ಜೈಲಿಗೆ ಕಳಿಸಿದ್ರು. ಬೆದರಿಕೆ ಹಾಕಲಾಯಿತು. ನನ್ನನ್ನೂ ಸೇರಿ ಅನೇಕರ ಮೇಲೆ ದಾಳಿ ಆಯ್ತು ಎಂದು ಪ್ರಶ್ನಿಸಿದ್ರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಚುನಾವಣೆಗೆ ನಿಲ್ಬೇಕಿತ್ತು . ಆದರೆ ಬಿಜೆಪಿ ಆಂತರಿಕ ಸರ್ವೇ ಬೇಡ ಅಂತು. ಅಯೋಧ್ಯೆ ಜನ ಸೋಲಿಸ್ತಾರೆ ಅಂದ್ರು. ಅದಕ್ಕೆ ಮೋದಿಜೀ ವಾರಾಣಸಿಗೇ ಹೋದ್ರು. ವಾರಾಣಸಿಯಲ್ಲಿ ಮೋದಿ ಕಷ್ಟಪಟ್ಟು ಗೆಲ್ಬೇಕಾಯ್ತು ಎಂದು ಕಾಲೆಳೆದ್ರು. ಇನ್ನು ಗುಜರಾತ್‌ನಲ್ಲೇ ಸೋಲಿಸ್ತೀವಿ ಎಂದು ಶಪಥ ಮಾಡಿದ ರಾಹುಲ್, ಮೋದಿಜೀಯವ್ರನ್ನ ಸೋಲಿಸ್ತೀವಿ. ಬೇಕಿದ್ರೆ ಬರೆದಿಟ್ಟುಕೊಳ್ಳಿ.. ಇಂಡಿಯಾ ಘಟಬಂಧನ್ ನಿಮ್ಮನ್ನ ಗುಜರಾತ್‌ನಲ್ಲಿ ಸೋಲಿಸುತ್ತೆ ನೋಡ್ತಿರಿ ಎಂದು ಸವಾಲು ಎಸೆದ್ರು. ಅಗ್ನಿವೀರ್ ಯೋಜನೆ ಬಗ್ಗೆ ಮಾತನಾಡಿ, ಮೋದಿ ಸರ್ಕಾರಕ್ಕೆ ಅಗ್ನಿವೀರರು ಯೂಸ್ ಅಂಡ್ ಥ್ರೋ ಕಾರ್ಮಿಕರು ಅಂತ ಗುಡುಗಿದ್ರು.
ಅಗ್ನಿವೀರರು ಬಾಂಬ್ ಸ್ಫೋಟದಲ್ಲಿ ದೇಶಕ್ಕಾಗಿ ಮಡಿದ್ರು ಆದರೆ ಅವರನ್ನ ಪ್ರಧಾನಿ ಮೋದಿ ಹುತಾತ್ಮರು ಅಂತ ಪರಿಗಣಿಸಲಿಲ್ಲ. ಮೋದಿ ಸರ್ಕಾರಕ್ಕೆ ಅಗ್ನಿವೀರರು ‘ಯೂಸ್& ಥ್ರೋ’ ಕಾರ್ಮಿಕರು. ಅಗ್ನಿವೀರ್ ಸೇನಾ ಯೋಜನೆಯಲ್ಲ, ಇದು ಪಿಎಂಒ ಯೋಜನೆ. ನಮ್ಮ ಸರ್ಕಾರಕ್ಕೆ ಬಂದರೆ, ಅಗ್ನಿವೀರ್ ತೆಗೆದು ಹಾಕ್ತೀವಿ. ಅಗ್ನಿವೀರ್ ಸೈನ್ಯ, ಸೈನಿಕರು, ದೇಶಭಕ್ತರ ವಿರುದ್ಧವಾಗಿದೆ ಎಂದ್ರು. ಇಷ್ಟೆಲ್ಲಾ ಆದ್ಮೇಲೆ ಸ್ಪೀಕರ್ ಓಂ ಬಿರ್ಲಾ ಅವ್ರನ್ನೂ ಮಾತಿಗೆ ಎಳೆದು ತಂದ್ರು. ನೀವು ನಮ್ಮ ಹತ್ರ ಎದೆಯುಬ್ಬಿಸಿ ಮಾತಾಡ್ತೀರಾ.. ಆದರೆ ಮೋದಿಯವ್ರ ಹತ್ತಿರ ಬೆನ್ನುಬಗ್ಗಿಸಿ ಮಾತಾಡ್ತೀರಾ ಅಂತನೂ ಲೇವಡಿ ಮಾಡಿದ್ರು.. ನೀವು ಸ್ಪೀಕರ್ ಆಗಿ ಆಯ್ಕೆಯಾದ ದಿನ, ಅವತ್ತು ನಿಮ್ಮ ಜೊತೆ ಇಬ್ಬರು ವೇದಿಕೆಯಲ್ಲಿದ್ದೆವು. ಮೋದಿಜೀ, ನಾನು ಕೈ ಕುಲುಕಿದಾಗ 2 ವಿಷ್ಯ ಗಮನಿಸಿದೆ. ನಾನು ನಿಮ್ಮ ಕೈ ಕುಲುಕಿದಾಗ, ನೀವು ನೇರವಾಗಿ ನಿಂತಿದ್ರಿ. ಮೋದಿಜೀ ನಿಮ್ಮ ಕೈ ಕುಲುಕಿದಾಗ ಬಗ್ಗಿ ನಮಸ್ಕರಿಸಿದ್ದೀರಿ ಎಂದು ಏಕ್ರಚಕ್ರಾಧಿಪತ್ಯ ಹೇಗಿದೆ ಅನ್ನೋದನ್ನು ಎಳೆ ಎಳೆಯಾಗಿ ಬಿಚ್ಚಿಟ್ರು ರಾಹುಲ್ ಗಾಂಧಿ.
ಒಟ್ಟಾರೆ, ರಾಹುಲ್ ಗಾಂಧಿ ಭಾಷಣ, ಮಾತಿನ ಬಗ್ಗೆ ಇಷ್ಟು ದಿನಗಳ ಕಾಲ ಮೂಗು ಮುರಿಯುತ್ತಿದ್ದವರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ರಾಹುಲ್ ಭಾಷಣ ಮಾಡಿದ್ರು. ಲೋಕಸಭಾ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಭಾಷಣ ತೀಕ್ಷ್ಣತೆಯಿಂದ ಕೂಡಿದ್ದು, ಆ ಭಾಷಣವನ್ನು ಕಡತದಿಂದ ತೆಗೆಸಲು ಬಿಜೆಪಿ ಸರ್ಕಾರ ತೆರೆ ಮರೆಯಲ್ಲಿ ಸ್ಪೀಕರ್ ಭೇಟಿ ಮಾಡಿ ಯತ್ನಿಸಿದೆ ಎನ್ನಲಾಗಿದೆ. ಆದರೆ ಸದನದಲ್ಲಿ ನಡೆದ ವಿಚಾರವನ್ನು ಹಿಂಬಾಗಿಲ ಮೂಲಕ ಕಡತದಿಂದ ತೆಗೆಸಲು ಸಾಧ್ಯವಿದೆಯಾ ಅನ್ನೋ ಬಗ್ಗೆ ಸ್ಪೀಕರ್ ನಿರ್ಧಾರ ಮಾಡಲಿದ್ದಾರೆ. ಆದರೂ ರಾಹುಲ್ ಭಾಷಣ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುವುದರಲ್ಲಿ ಅನುಮಾನವಿಲ್ಲ.
ಕೃಷ್ಣಮಣಿ