ಪಂಚಮಸಾಲಿ ಮೀಸಲಾತಿ ಆಗ್ರಹಿಸಿ ಬಿಜೆಪಿ ಸರ್ಕಾರದಲ್ಲಿ ಹೋರಾಟ ಶುರುವಾಗಿತ್ತು. ಕಾಂಗ್ರೆಸ್ – ಬಿಜೆಪಿ ಒಟ್ಟಾಗಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲೂ ಹೋರಾಟ ಮುಂದುವರಿದಿದೆ. ಆದರೆ ಲಿಂಗಾಯತರ ನಡುವಿನ ಒಗ್ಗಟ್ಟು ಮಾತ್ರ ಛಿದ್ರ ಛಿದ್ರವಾಗಿದೆ. ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಪಗ್ಗಟ್ಟು ಮುರಿಯುವ ಕೆಲಸ ಮಾಡಿತೋ ಅಥವಾ ಸಮಯ ಸಂದರ್ಭ ಆ ರೀತಿ ಆಗುವಂತೆ ಮಾಡಿತೋ ಅನ್ನೋದು ಕಗ್ಗಂಟಾಗಿದೆ.
ಬೆಳಗಾವಿಯಲ್ಲಿ ಶಾಸಕ ವಿಜಯಯಾನಂದ ಕಾಶಪ್ಪನವರ್ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಸಮಾಜಕ್ಕೆ ಸಮಸ್ಯೆ ಆಗ್ತಿದೆ ಅನ್ನೋ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿದ್ದು, ಸ್ವಾಮೀಜಿಯನ್ನ ಪೀಠಕ್ಕೆ ಕುಳ್ಳಿರಿಸಿದ್ದು ಯಾರು..? ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ತಂದೆಯವರು 1990ರಿಂದ ಮೀಸಲಾತಿ ಕೇಳಿದ್ರು. ಸ್ವಾಮೀಜಿಗೆ ಬಿಜೆಪಿಯ ಗಾಳಿ ತಾಕಿದ್ದಕ್ಕೆ ಹೀಗೆ ಮಾಡಿದ್ದಾರೆ. ನಮ್ಮ ಸಮಾಜದ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡೋ ಹಾಗೆ ಆಯ್ತು. ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು ಆರ್‌ಎಸ್‌ಎಸ್‌ನವರು. ಪೊಲೀಸರ ಮೇಲೆ ಕಲ್ಲು ತೂರಲು ಪ್ರವೋಕ್ ಮಾಡಿದ್ದು ಸ್ವಾಮೀಜಿ ಎಂದಿದ್ದಾರೆ.
ಸಮಾಜವನ್ನ ಕಟ್ಟುವ ಕೆಲಸ ನಮಗೆ ಗೊತ್ತಿದೆ ಎಂದಿರುವ ವಿಜಯಾನಂದ ಕಾಶಪ್ಪನವರ್, ಚುನಾವಣೆಗೆ ನಾನು ಮುಂದೆಯೂ ನಿಲ್ತೇನೆ ಗೆಲ್ತೇನೆ, ತಾಖತ್ ಇದ್ದರೆ ಯಾರು ಬರ್ತಿರೋ ಬನ್ನಿ ಎಂದಿದ್ದಾರೆ. ಸ್ವಾಮೀಜಿಗ ಗೌರವ ಕೊಡ್ತೇನೆ. 712 ಕಿಮೀ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ವೇಳೆ ಒಂದಾದರೂ ಗಲಾಟೆ ಆಯ್ತಾ..? ಉದ್ದೇಶ ಪೂರ್ವಕವಾಗಿ ಈಗ ಗಲಾಟೆ ಮಾಡಿಸಿದ್ದಾರೆ. ಗಾಯಾಳುಗಳನ್ನ ಯಾರು ನೋಡ್ಕೊತ್ತಾರೆ ಎಂದು ಪ್ರಶ್ನಿಸಿದ್ದಾರೆ. ಸ್ವಾಮೀಜಿ ನೋಡ್ಕೋತಾರ..? ಮುಖಂಡರು ನೋಡ್ಕೊತಾರ..? ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ, ಅದನ್ನ ತೆಗಿಯಬೇಕು. ಸ್ವಾಮೀಜಿ ತೀರ್ಮಾನ ಒಂದೇ ಅಲ್ಲ, ಸಮಾಜ ಇದೆ, ನಾವು 12 ಜನ ಶಾಸಕರು ಇದ್ದೇವೆ ಎಂದಿದ್ದಾರೆ.
ಬಿಜೆಪಿ ಪಾರ್ಟಿಯ ವೇದಿಕೆಗೆ ಹೋಗಿ ಸ್ವಾಮೀಜಿ ಭಾಷಣ ಮಾಡ್ತಾರೆ ಎಂದು ಕಿಡಿಕಾರಿರುವ ಕಾಶಪ್ಪನವರ್, ನಾವು ಮೀಸಲಾತಿ ಕೊಡಿಸೇ ಕೊಡ್ತೇವೆ. ಸಂವಿಧಾನ ವಿರೋಧಿ ಆಗುತ್ತೆ ಎನ್ನುವ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇದೆ.
ಹೇಗೆ ಸಿಎಂ ಕೊಡೊದಕ್ಕೆ ಆಗುತ್ತೆ..? ಸಿಎಂ ಸುಗ್ರಿವಾಜ್ಞೆ ಹೊರಡಿಸಲು ಆಗಲ್ಲ.ನಾನು ಸದನದಲ್ಲಿ ಮಾತಾಡಿದರೆ, ಸಭಾಪತಿಗಳ ಮೇಲೆ ಹಲ್ಲೆ ಮಾಡಲು ಬಿಜೆಪಿಯವರು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಇದೇ ವಿಜಯಾನಂದ ಕಾಶಪ್ಪನವರ್ ಬಿಜೆಪಿ ಸರ್ಕಾರದಲ್ಲಿ ಮುಂದಾಳತ್ವ ವಹಿಸಿಕೊಂಡು ಹೋರಾಟ ರೂಪಿಸಿದ್ದರು.
ಆಗ ಬಿಜೆಪಿ ನಾಯಕರಾಗಿದ್ದ ಯತ್ನಾಳ್ ಸೇರಿದಂತೆ ಹಲವರು ಬೆಂಬಲಿಸಿದ್ದರು.ಇದೀಗ ವಿಜಯಾನಂದ ಕಾಶೃಪ್ಪನವರ್, ಯೂ ಟರ್ನ್ ತೆಗೆದುಕೊಂಡಿದ್ದಾರೆ. ಒಗ್ಗಟ್ಟು ಮುರಿದಿದ್ದು ಯಾರು..? ಸರ್ಕಾರವಾ..? ಅನ್ನೋ ಬಗ್ಗೆ ಪ್ರಶ್ನೆ ಎದ್ದಿದೆ.