ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ISI ಪರ ಬೇಹುಗಾರಿಕೆ ನಡೆಸಿದ ಪ್ರಕರಣದಲ್ಲಿ ಬ್ರಹ್ಮೋಸ್ನ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್ (Nishanth agarwal) ವಿರುದ್ಧದ ಆರೋಪ ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಿ ನಾಗಪುರದ ಜಿಲ್ಲಾ ನ್ಯಾಯಾಲಯ (District court) ಆದೇಶಿಸಿದೆ.
2018ರಲ್ಲಿ ಬ್ರಹ್ಮೋಸ್ ಏರೋಸ್ಪೇಸ್ (Bramhos airospace) ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್ನನ್ನು ಪಾಕಿಸ್ತಾನದ ಪರ ಬೇಗುಗಾರಿಕೆ ನಡೆಸಿದ ಆರೋಪದಡಿ ಬಂಧಿಸಲಾಗಿತ್ತು. ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ನೀಡಿದ ಆರೋಪವಿತ್ತು.
![](https://pratidhvani.com/wp-content/uploads/2024/06/IMG_8060.jpeg)
ಬ್ರಹ್ಮೋಸ್ ಏರೋಸ್ಪೇಸ್ ಭಾರತದ ಡಿಆರ್ಡಿಒ (DRDO) ಹಾಗೂ ರಷ್ಯಾದ ಎನ್ಪಿಒ ಮಶಿನೊಸ್ಟ್ರೊಯೆನಿಯ( NPO Mashinostroyenia) ಸಹಯೋಗದಲ್ಲಿ ಭಾರತದ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸ್ಥಾಪಿತವಾಗಿತ್ತು.
ಈ ಬಗ್ಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ ಆರೋಪ ನಿಶಾಂತ್ ಅಗರ್ವಾಲ್ ಮೇಲಿದ್ದು, ಸಾಬೀತಾಗಿದೆ. ಹೀಗಾಗಿ ನಾಗಪುರ ಜಿಲ್ಲಾ ನ್ಯಾಯಾಲಯವು ಅಗರ್ವಾಲ್ಗೆ ಜೀವಾವಧಿ ಶಿಕ್ಷೆ ಮತ್ತು 14 ವರ್ಷಗಳ ಕಾಲ ಆರ್ಐ ಮತ್ತು 3,000 ರೂ. ದಂಡ ವಿಧಿಸಿದೆ