Latest Post

ಉತ್ತರ ಪ್ರದೇಶ: ದಲಿತ ವಿದ್ಯಾರ್ಥಿಯ ಮೀಸೆಯನ್ನು ಬಲವಂತವಾಗಿ ತೆಗೆಸಿದ ಮೇಲ್ವರ್ಗದ ಯುವಕರು

ಉತ್ತರ ಪ್ರದೇಶದ ಶರಣ್ ಪುರ್ ಜಿಲ್ಲೆಯಲ್ಲಿ ಮೇಲ್ವರ್ಗದ ಜನರು ವಿಕೃತಿ ಮೆರೆದಿದ್ದಾರೆ. ದಲಿತ ವಿದ್ಯಾರ್ಥಿಯೊಬ್ಬ ಮೀಸೆ ಇಟ್ಟುಕೊಂಡ ಕಾರಣಕ್ಕೆ ಬಲವಂತವಾಗಿ ಅವನ ಮೀಸೆಯನ್ನು ತೆಗೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಸತತವಾಗಿ ದಲಿತರ ವಿರುದ್ದ ದೌರ್ಜನ್ಯಗಳು ಮುಂದುವರೆದಿದ್ದು, ಈ ಘಟನೆ ಅವುಗಳಲ್ಲಿ ಒಂದು ಎಂಬಂತಾಗಿದೆ.  ದಲಿತ ಯುವತಿಯರ ಮೇಲೆ ಅತ್ಯಾಚಾರ, ಕೊಲೆ, ಹಲ್ಲೆ ಮುಂತಾದ ಘಟನೆಗಳು ವ್ಯಾಪಕವಾಗಿ ವರದಿಯಾಗುತ್ತಿದ್ದರೂ, ಸರ್ಕಾರ ಮಾತ್ರ ಮುಗಮ್ಮಾಗಿ ಕುಳಿತಿದೆ. ಮೇಲ್ಜಾತಿಯವರ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾನೂನುಗಳು ಗಾಳಿಗೆ ತೂರಲಾಗಿವೆ.  ವಿದ್ಯಾರ್ಥಿಯ ವಿರುದ್ದ ದೌರ್ಜನ್ಯವೆಸಗಿದ ಕಾರಣಕ್ಕೆ ಎಫ್ಐಆರ್ ಕೂಡಾ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ನಡೆದಿದ್ದೇನೆಂದರೆ, ಜುಲೈ 18ರಂದು ಶಿಮ್ಲಾನಾ ಎಂಬ ಗ್ರಾಮದಲ್ಲಿ ಆರು ‘ಮೇಲ್ವರ್ಗ’ದ ಜನರು ಇಪ್ಪತ್ತರ ಆಸುಪಾಸಿನ ವಿದ್ಯಾರ್ಥಿಯನ್ನು ಹಿಡಿದು ಅವಾಚ್ಯವಾಗಿ ನಿಂದಿಸಿದ್ದಾರೆ. ಆಯುಧದಾರಿಗಳಾಗಿದ್ದ ಗುಂಪು, ನಂತರ ಯುವಕನನ್ನು ಹತ್ತಿರದ ಕ್ಷೌರಿಕನ ಅಂಗಡಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅವನ ಮೀಸೆಯನ್ನು ತೆಗೆಸಿದ್ದಾರೆ.  ಈ ಎಲ್ಲಾ ಘಟನೆಗಳನ್ನು ವೀಡಿಯೋ ಚಿತ್ರೀಕರಿಸಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮೀಸೆ ತೆಗೆದ ಕ್ಷೌರಿಕ ಸೇರಿದಂತೆ ಏಳು ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಗಲಭೆ ಉಂಟು ಮಾಡುವ ಯತ್ನ, ಸ್ವಯಂಪ್ರೇರಣೆಯಿಂದ ದಾಳಿ ನಡೆಸುವ ಯತ್ನ, ಶಾಂತಿ ಕದಡುವ ಯತ್ನ ಸೇರಿದಂತೆ ಎಸ್ ಟಿ, ಎಸ್ ಸಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಅತುಲ್ ಶರ್ಮಾ ಅವರು, “ಘಟನೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,” ಎಂದು ಹೇಳಿದ್ದಾರೆ. ಇದರೊಂದಿಗೆ, ಘಟನೆಯಲ್ಲಿ ಭಾಗಿಯಾಗಿದ್ದ ಯುವಕರ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ. 

Read moreDetails

ಜುಲೈ 26ರಿಂದ ಪದವಿ, ಸ್ನಾತಕೋತ್ತರ ಪದವಿ ಭೌತಿಕ ತರಗತಿಗಳು ಆರಂಭ

ಜುಲೈ 26ರಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕನಿಷ್ಠ ಪ್ರಥಮ ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ...

Read moreDetails

ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮಠೀಯ ವ್ಯವಸ್ಥೆಯ ಸವಾರಿ?

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ಯದ ಲಿಂಗಾಯತ ಮಠಾಧೀಶರು ಯಡಿಯೂರಪ್ಪ ಪರ ಸಮರೋಪಾದಿಯಲ್ಲಿ ವಕಾಲತು ವಹಿಸುತ್ತಿರುವ...

Read moreDetails

2 ವರ್ಷ ಮಾತ್ರ ಸಿಎಂ; ಹೈಕಮಾಂಡ್ ಜೊತೆ ಬಿಎಸ್‌ವೈ ಒಪ್ಪಂದ: ರಾಜಿನಾಮೆ ಪಕ್ಕ!

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಾರೆ ಎಂಬ ವಿಚಾರ ದಿನದಿಂದ ದಿನಕ್ಕೆ ಕಾವೇರಿರುತ್ತಿದೆ. ಈ ಕುರಿತು ಈಗ ಚಾಮರಾಜನಗರ...

Read moreDetails

ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸಿ: ಸಚಿವ ಸಿಪಿವೈ’ಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮನವಿ

ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರು ನಗರದ ತ್ಯಾಜ್ಯ ನೀರಿಂದ ಸ್ಥಳೀಯ ಜನರಿಗೆ ಹೆಚ್ಚಿನ ಆತಂಕ ಶುರುವಾಗಿದೆ. ಈ ಕುರಿತು...

Read moreDetails
Page 7809 of 9110 1 7,808 7,809 7,810 9,110

Welcome Back!

Login to your account below

Retrieve your password

Please enter your username or email address to reset your password.

error: Content is protected !!