90 ವರ್ಷದ ಹಿರಿಯ ಒಡಿಸ್ಸಿ ನೃತ್ಯ ಕಲಾವಿದ, ಪದ್ಮಶ್ರೀ ಪುರಸ್ಕೃತ ಗುರು ಮಾಯಾಧರ್ ರಾವುತ್ರ ಅವರನ್ನು ಸರ್ಕಾರ ಏಕಾಏಕಿ ಮನೆಯಿಂದ ಹೊರಹಾಕಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಎಂಟು ಪ್ರತ್ಯೇಕ ಕಲಾವಿದರಿಗೆ ಸರ್ಕಾರದಿಂದ ನೀಡಿರುವ ಸೌಲಭ್ಯಗಳನ್ನು ಹಿಂತಿರುಗಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ವಸತಿ ಇಲಾಖೆಯ ಅಧಿಕಾರಿಯೊಬ್ಬರು, 28 ಕಲಾವಿದರ ಪೈಕಿ ಇನ್ನು 8 ಜನರು ಸರ್ಕಾರ ಹಲವು ಸೂಚನೆಗಳನ್ನು ನೀಡಿರುವ ಹೊರತಾಗಿಯೂ ತಮ್ಮ ಸರ್ಕಾರಿ ವಸತಿಗಳನ್ನು ಖಾಲಿ ಮಾಡಿಲ್ಲ ಎಂದು ಹೇಳಿದ್ದಾರೆ.
ಆದರೆ, ಆ ಎಂಟು ಜನ ಕಲಾವಿದರು ಮೇ2ರ ಒಳಗಾಗಿ ಮನೆಯನ್ನು ಖಾಲಿ ಮಾಡುವುದಾಗಿ ಹೇಳಿದ್ದಾರೆ ಮತ್ತು ಲಿಖಿತ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ, ರಾವುತ್ ಮನೆ ಖಾಲಿ ಮಾಡಿಸಿರುವ ಕುರಿತು ಸ್ಪಷ್ಟಪಡಿಸಿದ ಅಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಬಲವಂತವಾಗಿ ಮನೆಯಿಂದ ಹೊರದಬ್ಬಿದ ಹಾಗೆ ತೋರಿಸಲಾಗುತ್ತಿದೆ. ಅದರೆ, ಅವರ ನಿವಾಸದಲ್ಲಿರುವ ವಸ್ತುಗಳನ್ನು ಬೇರೆಡೆಗೆ ಸಾಗಿಸಲು ಅಧಿಕಾರಿಗಳ ತಂಡವೊಂದನ್ನು ಕಳಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ನೀತಿಯ ಪ್ರಕಾರ 40 ಕಲಾವಿದರು ತಿಂಗಳಿಗೆ 20 ಸಾವಿರಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ್ದರೆ ಅಂತಹವರಿಗೆ ವಸತಿ ಇಲಾಖೆಯಡಿ ಮನೆಗಳನ್ನು ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಮೊದಲು ದೆಹಲಿ ಹೈಕೋರ್ಟ್ ಕಲಾವಿದೆ ರೀಟಾ ಗಂಗೂಲಿ ಮನೆ ಖಾಲಿ ಮಾಡಲು ಹೆಚ್ಚಿನ ಸಮಾಯವಕಾಶವನ್ನು ನೀಡಲಾಗುವುದಿಲ್ಲ ಆದಷ್ಟು ಬೇಗ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡುವಂತೆ ಆದೇಶಿಸಿತ್ತು.