
ಕೊಪ್ಪಳದಲ್ಲಿ ಭತ್ತ ಖರೀದಿಸಿ ವಂಚಿಸಿದ್ದ ವರ್ತಕನ ಮನೆ ಮುಂದೆ ರೈತರು ವಿನೂತನ ಪ್ರತಿಭಟನೆ ಮಾಡಿದ್ದಾರೆ. ವರ್ತಕನ ಮನೆ ಮುಂದೆ ಧರಣಿ ಕುಳಿತಿದ್ದಾರೆ ಅನ್ನದಾತರು. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಭತ್ತ ಖರೀದಿ ಬಳಿಕ ರೈತರಿಗೆ ಹಣ ನೀಡದೆ ವಂಚನೆ ಮಾಡಿದ್ದ ವರ್ತಕ ರಾಜುಗೌಡ ಮನೆ ಮುಂದೆ ಪ್ರತಿಭಟನೆ ಮಾಡಲಾಗಿದೆ. ಸಿಂಧನೂರು ರೈತರಿಂದ ಬರೋಬ್ಬರಿ 1310 ಚೀಲ ಭತ್ತ ಖರೀದಿ ಮಾಡಿದ್ದ ರಾಜೂಗೌಡ, ಒಟ್ಟು 16 ಲಕ್ಷ ರೂಪಾಯಿ ಮೌಲ್ಯದ ಭತ್ತ ಖರೀದಿ ಮಾಡಿ ನಾಪತ್ತೆ ಆಗಿದ್ದ.

ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಾಪಾರಿ ರಾಜೂಗೌಡ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮ ಆಗಿರಲಿಲ್ಲ. ಇದೀಗ ವಂಚಕ ವ್ಯಾಪಾರಿ ರಾಜುಗೌಡ ಮನೆ ಮುಂದೆ ಅನ್ನದಾತರು ಆಕ್ರೋಶ ಹೊರ ಹಾಕಿದ್ದಾರೆ. ರಾಜುಗೌಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಿದ್ದಕ್ಕೆ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರೈತರ ಪ್ರತಿಭಟನೆ ಬಳಿಕ ಬಂಧನ ಮಾಡಿದ್ದರು. ಆದರೆ ಕೇವಲ ಎರಡು ದಿನಗಳಲ್ಲಿ ಜೈಲಿನಿಂದ ಹೊರಬಂದಿದ್ದ. ರಾಜುಗೌಡ ಪ್ರಭಾವಿ ಆಗಿದ್ದು, ಆತನಿಂದ ಹಣ ಕೊಡಿಸಿ ಎಂದು ರೈತರು ಪ್ರತಿಭಟನೆ ಮಾಡಿದ್ದಾರೆ. ರಾಜುಗೌಡ ಮನೆ ಮುಂದೆ ತಮಟೆ ಬಾರಿಸುತ್ತಾ ಪ್ರತಿಭಟನೆ ಮಾಡಿದ್ದಾರೆ ರೈತರು.

ಕೃಷ್ಣಮಣಿ