ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಬಾರತ ಜೋಡೋ ಪಾದಯಾತ್ರೆ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಬಣ್ಣಿಸಿದ್ದಾರೆ.
ಸದ್ಯ ಪಾದಯಾತ್ರೆ ಕರ್ನಾಟಕ ಪ್ರವೇಶಿಸಿದ್ದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಳಿಕೆ ಟ್ವೀಟ್ ಮಾಡಿದುವ ಚಿದಂಬರಂ ಭಾರತ ಜೋಡೋ ಯಾತ್ರೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಲ್ಲೇ ಇದೆ. ನಾನು ರಾಹುಲ್ ಗಾಂಧಿ ಒಟ್ಟಿಗೆ ಮೈಸೂರಿನಿಂದ 5.5ಕಿ,ಮೀ ದೂರ ನಡೆದೆ ಪಾದಯಾತ್ರೆಯಲ್ಲಿ ಮಹಿಳೆಯರು ಹಾಗೂ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಿದೆ. ರಸ್ತೆಯ ಬದಿಯಲ್ಲಿ ಸಾವಿರಾರು ಜನರ ಹರ್ಷೋದ್ಗಾರ ಮುಗಿಲು ಮುಟ್ಟಿದೆ ಎಂದು ಪಾದಯಾತ್ರೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಪಾದಯಾತ್ರೆಯೂ ಶ್ರೀರಂಗಪಟ್ಟಣದ ಕಳಸ್ತವಾಡಿ ಮೂಲಕ ಮಂಡ್ಯ ಜಿಲ್ಲೆ ಪ್ರವೇಶಿಸಲಿದೆ. ಮಧ್ಯಾಹ್ನ 12:30ಕ್ಕೆ ಸೋನಿಯಾ ಗಾಂಧಿ ಮೈಸೂರು ತಲುಪಲಿದ್ದು ರಾಹುಲ್ ಹಾಗೂ ಸೋನಿಯಾ ಇಬ್ಬರು ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.