ಕೋವಿಡಾತಂಕ, ಸಾವು, ಜನರಲ್ಲಿ ಭಯ ಹೀಗೆ ಈ ವೈರಸ್ ಅಬ್ಬರ ಜೋರಾಗಿರುವ ಸಂದರ್ಭದಲ್ಲಿ ಗದಗ್ ಶಾಸಕರು ಸರ್ಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಆಕ್ಸಿಜನ್‌ಕೊರತೆಯಿಂದ ಜನರು ಮೃತಪಡುತ್ತಿರುವ ಪ್ರಕರಣ ಹಿನ್ನೆಲೆಯಲ್ಲಿಕಾಂಗ್ರೆಸ್ ಶಾಸಕ ಹೆಚ್ ಕೆ ಪಾಟೀಲ್ ಗದಗದಲ್ಲಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಚಾಮರಾಜನಗರ, ಕಲರ್ಬುಗಿ ಹಾಗೂ ಬೆಳಗಾವಿಯಲ್ಲಿ ಆಕ್ಸಿಜನ್ ಕೊರತೆಯಿಂದ ಮತ್ತೆ ಜನರು ಸಾಯುತ್ತಿದ್ದಾರೆ. ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ಸರ್ಕಾರಕ್ಕೆ ಎಷ್ಟೆಲ್ಲ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷ್ಯ ತೋರುತ್ತಿದೆ. ಕೆಲಸ ಮಾಡುವ ವಿಚಾರದಲ್ಲಿ ಅಯೋಗ್ಯತೆ ತೋರಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಜನ್ರು ಮೃತ ಪಡುತ್ತಿದ್ದಾರೆ. ಇನ್ನು ಚುನಾವಣಾ ರಾಜಕರಣ ಮಾಡಲು ಕಾಲ ಕಳೇದ್ರೇ ಹೊರತು ಜನ್ರ ಬಗ್ಗೆ ಕಾಳಜಿ ತೊರಲ್ಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಗ್ಗೆ ಎಷ್ಟಂತ ಟೀಕೆ ಮಾಡಬೇಕು. ಜನ್ರು ಸಾಯಿತ್ತಿರೋದು ಕಣ್ಣಿಗೆ ಕಾಣುತ್ತಿಲ್ವಾ ನಿಮಗೆ..! ಎಂದು ಪ್ರಶ್ನಿಸಿದ್ದಾರೆ.
ಜನರ ಸಲುವಾಗಿ ನಮ್ಮ ಆಕ್ರೋಶ ನಮ್ಮ ತಾಪ ಅದುಮಿಟ್ಟು ಸರ್ಕಾರಕ್ಕೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ… ದಯಮಾಡಿ ಆಕ್ಸಿಜನ್ವಿಚಾರದಲ್ಲಿ ಲಘುವಾಗಿ ಕುಳಿತುಕೊಳ್ಳ ಬೇಡಿ ದೊಡ್ಡ ಹೆಜ್ಜೆಗಳನ್ನು ಇಡೀ ಇಲ್ವಾದ್ರೆ ಕೇಂದ್ರ ಸರ್ಕಾರದ ಮೊರೆ ಹೋಗ್ರಿ ನಿಮ್ಮ ಹತ್ತಿರವಿರುವ ರಿಸೋರ್ಸ್ ಗಳನ್ನು ಉಪಯೋಗಿಸಿ ಆಕ್ಸಿಜನ್ ಎಲ್ಲಾ ಆಸ್ಪತ್ರೆಗಳಿಗೆ ಸಿಗುವಂತೆ ಮಾಡ್ರಿ. ಇಲ್ವಾದ್ರೆ ಜನರ ಶಾಪಕ್ಕೆ ಗುರಿಯಾಗುತ್ತಿರೀ ಜನರ ಆಕ್ರೋಶ ಅರ್ಥ ಮಾಡಿಕೊಳ್ಳುತ್ತಿದ್ದಿರೀ. ಆದ್ರೆ ನೀವು ದುರಾಡಳಿತ ಮಾಡಿದ್ರೆ ಇದು ಅಮಾನವೀಯ, ಇದನ್ನು ಸಹನೆ ಮಾಡಲು ಆಗೋದಿಲ್ಲ ಎಚ್ಚೆತ್ತುಕೊಂಡ ನಾಗರಿಕರ ಸರ್ಕಾರ ಮಾಡಿದಂತೆ ಕೆಲಸ ಮಾಡಿ ಎಂದಿದ್ದಾರೆ.
ರೋಗಿಗಳಿಗೆ ಬೆಡ್ ಗಳ ಕೊರತೆ ಎದುರಾಗಿದೆ ಅದೇ ರೀತಿ ಗದಗ ಜಿಲ್ಲೆಯಲ್ಲಿಯು ಕೊರತೆಯಾಗುವ ಸಂಭವಿದೆ. ಈಗಾಗಲೇ ಜಿಲ್ಲೆಯಲ್ಲಿ ದಿನಕ್ಕೆ 190 ರಿಂದ 200ಜನ್ರಿಗೆ ಕರೋನಾ ಸೋಂಕು ಬರುತ್ತಿದೆ. ಹೀಗಾಗಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ 30 ಬೆಡ್ ಗಳು ಮಾತ್ರ ಖಾಲಿ ಇವೆ. ಇನ್ನು ಮುಂದೆ ಬೆಡ್ ಗಳು ಸಿಗದೆ ರೋಗಿಗಳು ಪರದಾಡುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಏಳು ತಿಂಗಳ ಹಿಂದೇ ರೈಲ್ವೆ ಆಸ್ಪತ್ರೆ ಹಾಗೂ ರೈಲ್ವೆ ಕೋಚ್ ರೆಡಿಮಾಡಲಾಗಿದೆ. ರಾಜ್ಯದಲ್ಲಿ 93 ರೈಲ್ವೆ ಹಾಸ್ಪಿಟ್ ಹಾಗೂ ರೈಲ್ವೆ ಕೋಚ್ ರೆಡಿಯಾಗಿವೆ. ಆದ್ರೆ ಯಾವುದೇ ರೈಲ್ವೆ ಕೋಚ್ಗಳ ಬಳಕೆಗೆ ಚಕಾರ ಎತ್ತಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರೈಲ್ವೆ ಕೋಚ್ ರಡಿಯಾಗಿದ್ರು ಯಾರು ಕೆಳುವವರೆ ಇಲ್ಲ.. ಹೇಳುವವರೆ ಇಲ್ಲ. ಇನ್ನು ಬೆಡ್ ಸಮಸ್ಯೆ ಎದುರಿಸುವ ಮುನ್ನ ಗದಗ ಜಿಲ್ಲೆಗೆ ನಾಲ್ಕರಿಂದ ಐದು ಕೋಚ್ ಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್‌ಗೆ ತಿಳಿಸಿದ್ದೇನೆ. ಏಳು ತಿಂಗಳ ಹಿಂದೇ ರೈಲ್ವೆ ಕೋಚ್ ರೆಡಿಯಾದ್ರೆ ಯಾಕೆ ತರಿಸುತ್ತಿಲ್ಲ. ಯಾಕೆ ಜಿಲ್ಲಾಡಳಿತ ತರಿಸಿಕೊಂಡಿಲ್ಲ ಏನಾಗಿದೆ ನಿಮಗೆಎಂದ್ರು. ಇದ್ದ ವ್ಯವಸ್ಥೆಯ ಒದಗಿಸುವ ನಿಮ್ಮಗೆ ಮುಜುಗರ ನಾ ಎಂದು ಪ್ರಶ್ನಿಸಿದರು. ತಕ್ಷಣ ರೈಲ್ವೆ ಆಸ್ಪತ್ರೆಗಳು ಹಾಗೂ ರೈಲ್ವೆ ಕೋಚ್ ಗಳು ತರಿಸಿಕೊಂಡು ಬೆಡ್ ವ್ಯವಸ್ಥೆ ಒದಗಿಸುವ ಕಾರ್ಯ ಮಾಡಿ ಎಂದು ತಿಳಿಸಿದರು.