ಮಂಗಳೂರಿನ ಸುರತ್ಕಲ್ನಲ್ಲಿ ಗುರುವಾರ ನಡೆದ ಮೊಹಮ್ಮದ್ ಫಾಝಿಲ್ (22) ಹತ್ಯೆಗೆ ಬಳಸಿದ್ದ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೆಎ – 19 ಎಂಜೆ – 8496 ನೋಂದಣಿಯಿರುವ ಹುಂಡೈ ಇಯಾನ್ ಕಾರು ಉಡುಪಿ ಜಿಲ್ಲೆಯ ಇನ್ನ ಗ್ರಾಮದ ಕಡೆಕುಂಜದಲ್ಲಿ ಕಾರು ಪತ್ತೆಯಾಗಿದೆ.
ಈ ಕುರಿತು ಈಗಾಗಲೇ ಪ್ರಕರಣದ ಮುಖ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಸಹಕರಿಸಿದ ಕಾರಿನ ಮಾಲೀಕ ಅಜಿತ್ನ್ನು ಪೊಲೀಸರು ಮಂಗಳಪೇಟೆಯಲ್ಲಿ ಬಂಧಿಸಿದ್ದಾರೆ.







