ಸಂಸತ್‌ನಲ್ಲಿ ಸಂಸದ ಓವೈಸಿ ಜೈ ಪ್ಯಾಲೈಸ್ತಾನ್ ಎಂದಿದ್ದಕ್ಕೆ ಎಂಎಲ್‌ಸಿ ಸಿ.ಟಿ ರವಿ (MLC CT Ravi) ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ (Kalaburgi) ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ:ಬಿ ಆರ್ ಅಂಬೇಡ್ಕರ್ (Dr Ambedkar) ವಿಚಾರಗಳಿಗೆ ಓವೈಸಿ ಅಪಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಭಾರತವನ್ನು (India) ಬಲಗೊಳಿಸಲು ಅಂಬೇಡ್ಕರ್ ಅವರು ಸಂವಿಧಾನ ತಂದಿದ್ದಾರೆ. ಎಲ್ಲಿ ಹೋಗುತ್ತೇ ಬ್ಲಡ್, ಓವೈಸಿ ಪೂರ್ವಿಕರು ರಜಾಕಾರ ಚಳುವಳಿಯಲ್ಲಿ ಇದ್ದವರು. ಹಾಗಾಗಿ ಅದೇ ಬ್ಲಡ್ ಈಗ ಜೈ ಪ್ಯಾಲೆಸ್ಟೈನ್ ಅಂತ ಘೋಷಣೆ ಕೂಗಿದೆ ಎಂದು ವಾಗ್ದಾಳಿ ನಡೆಸಿದ್ರು.
ಕೇವಲ ಅವರ ಘೋಷಣೆ ತೆಗೆದುಹಾಕಿದ್ರೆ ಸಾಲದೂ, ಓವೈಸಿ ಸಂಸತ್ ಸದಸ್ಯತ್ವ ತೆಗೆದುಹಾಕಬೇಕು. ಹೊರಗೆ ಈ ರೀತಿ ಇರಬಹುದಾದ್ರೆ ಒಳಗಡೆ ಇನ್ನೇಷ್ಟು ದೇಶ ವಿರೋಧಿ ಭಾವನೆ ಇರಬೇಕು ಅಂತ ವಾಗ್ದಾಳಿ ನಡೆಸಿದರು.