• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದೆಹಲಿಯ ಎರಡು ಆಸ್ಪತ್ರೆಗಳಲ್ಲಿ 3000 ಜನರಿಗೆ ಸ್ಪುಟ್ನಿಕ್-ವಿ ಲಸಿಕೆ: UAE ನಲ್ಲಿ 97.8% ರಷ್ಟು ಪರಿಣಾಮಕಾರಿ.!

Any Mind by Any Mind
July 2, 2021
in ಕರ್ನಾಟಕ, ದೇಶ, ರಾಜಕೀಯ
0
ದೆಹಲಿಯ ಎರಡು ಆಸ್ಪತ್ರೆಗಳಲ್ಲಿ 3000 ಜನರಿಗೆ ಸ್ಪುಟ್ನಿಕ್-ವಿ ಲಸಿಕೆ: UAE ನಲ್ಲಿ 97.8% ರಷ್ಟು ಪರಿಣಾಮಕಾರಿ.!
Share on WhatsAppShare on FacebookShare on Telegram

ದೆಹಲಿ-ಎನ್‌ಸಿಆರ್‌ನ ಖಾಸಗಿ ಆಸ್ಪತ್ರೆಗಳಾದ ಫೋರ್ಟಿಸ್ ಹೆಲ್ತ್‌ಕೇರ್ ಮತ್ತು ಅಪೊಲೊ ಈ ಎರಡು ಆಸ್ಪತ್ರೆಗಳಲ್ಲಿ ರಷ್ಯಾ ಮೂಲದ ಕೋವಿಡ್ -19 ಲಸಿಕೆ ಸ್ಪುಟ್ನಿಕ್-ವಿ ನೀಡಲು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ದೆಹಲಿಯ ಇಂದ್ರಪ್ರಸ್ಥ ಅಪೊಲೊ ಜೂನ್ 30 ರಿಂದ ಸ್ಪುಟ್ನಿಕ್ ವಿ ಅನ್ನು ಹಂತ ಹಂತವಾಗಿ ನೀಡಲು ಪ್ರಾರಂಭಿಸಿದ್ದು ಇಲ್ಲಿಯವರೆಗೆ ಸುಮಾರು 1,000 ಜನರಿಗೆ ಲಸಿಕೆ ನೀಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

“ಸ್ಪುಟ್ನಿಕ್-ವಿ ಲಸಿಕೆ ಹಾಕಿಸಿಕೊಳ್ಳುವವರಿಗೆ ಆನ್-ಸ್ಪಾಟ್ ನೋಂದಣಿ ಮತ್ತು ವಾಕ್-ಇನ್ (ನೇರ ಹೋಗಿ ವಾಕ್ಸಿನ್ ತೆಗೆದುಕೊಳ್ಳುವ) ಸೌಲಭ್ಯವನ್ನು ಪ್ರಸ್ತುತ ನಿರ್ಬಂಧಿಸಲಾಗಿದ್ದು ಕೋವಿನ್ ಆ್ಯಪ್ ಮೂಲಕ ಮೊದಲೇ ರಿಜಿಸ್ಟರ್ ಮಾಡಿಸಲು ನಾವು ಫಲಾನುಭವಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.

ಫೋರ್ಟಿಸ್ ಹೆಲ್ತ್‌ಕೇರ್ ಅಧಿಕಾರಿಯೊಬ್ಬರ ಪ್ರಕಾರ, ಖಾಸಗಿ ಆಸ್ಪತ್ರೆಗಳಾದ ಗುರುಗಾಂವ್‌ನ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆ ಮತ್ತು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ವಾರ ಸ್ಪುಟ್ನಿಕ್-ವಿ ಜಬ್‌ಗಳನ್ನು ಒದಗಿಸಲು ಪ್ರಾರಂಭಿಸಿತು.

“ವ್ಯಾಕ್ಸಿನೇಷನ್ ಡ್ರೈವ್ ಅನ್ನು ವೇಗಗೊಳಿಸುವ ಸಲುವಾಗಿ, ನಾವು ಶುಕ್ರವಾರದಿಂದ ಜೈಪುರದ ಫೋರ್ಟಿಸ್ ಎಸ್ಕೋರ್ಟ್ಸ್ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪರಿಚಯಿಸುತ್ತಿದ್ದೇವೆ. ನಮಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಮತ್ತು ಒಟ್ಟು 2,193 ಜನರಿಗೆ ಲಸಿಕೆ ನೀಡಲಾಗಿದೆ” ಎಂದು ಪೋರ್ಟಿಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು TOI ವರದಿ ಮಾಡಿದೆ.

ಫೋರ್ಟಿಸ್ ಹೆಲ್ತ್‌ಕೇರ್ ಸ್ಪುಟ್ನಿಕ್-ವಿ ಯ ಹೊಸ ಸರಬರಾಜುಗಳನ್ನು ಪಡೆದುಕೊಂಡಿದ್ದು ಈ ಇನಾಕ್ಯುಲೇಷನ್ ಡ್ರೈವ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು.

ಲಸಿಕೆ ಪೂರೈಕೆಯಲ್ಲಿ ವಿಳಂಬವಾಗಲು ರಷ್ಯಾದಲ್ಲಿ ಪ್ರಕರಣಗಳ ಹೆಚ್ಚಳವಾಗಿದ್ದೆ ಕಾರಣ ಇರಬಹುದು ಎಂದು ಆಸ್ಪತ್ರೆಯ ಮೂಲವೊಂದು ತಿಳಿಸಿದೆ, ರಷ್ಯಾ ತನ್ನ ಜನಸಂಖ್ಯೆಗೆ ದೊಡ್ಡ ಪ್ರಮಾಣದ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿದೆ ಎನ್ನಲಾಗಿದೆ.

ದೆಹಲಿಯ ಮಧುಕರ್ ರೇನ್ಬೋ ಮಕ್ಕಳ ಆಸ್ಪತ್ರೆಯ ಅಧಿಕಾರಿಯೊಬ್ಬರು, ದೇಶದಲ್ಲಿ ಸ್ಪಟ್ನಿಕ್-ವಿ ಲಸಿಕೆಯ ಮಾರುಕಟ್ಟೆ ಪಾಲುದಾರರಾದ ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ವಹಿಸಿಕೊಂಡಿದ್ದು ಲಸಿಕಾ ಪ್ರಮಾಣವನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಸ್ವೀಕರಿಸಲಿದೆ ಎಂದು TOI ವರದಿ ಮಾಡಿದೆ.

ಸ್ಪುಟ್ನಿಕ್-ವಿ ಮನುಷ್ಯನ ನೆಗಡಿ (ಅಡೆನೊವೈರಸ್) ಗೆ ಕಾರಣವಾಗುವ ಎರಡು ವಿಭಿನ್ನ ವೈರಸ್‌ಗಳನ್ನು ಬಳಸುತ್ತದೆ. 21 ದಿನಗಳ ಅಂತರದಲ್ಲಿ ನೀಡಲಾದ ಎರಡು ಲಸಿಕೆ ವಿಭಿನ್ನವಾಗಿವೆ ಮತ್ತು ಪರಸ್ಪರ ಬದಲಾಯಿಸಲಾಗುವುದಿಲ್ಲ.

ಖಾಸಗಿ ಕೋವಿಡ್ -19 ವ್ಯಾಕ್ಸಿನೇಷನ್ ಕೇಂದ್ರಗಳಿಗೆ (ಸಿವಿಸಿ) ಲಸಿಕಾ ದರ ನಿಗದಿ ಮಾಡಿದ್ದು, ಸ್ಪಟ್ನಿಕ್ – ವಿ ಲಸಿಕೆಯ ಬೆಲೆಯನ್ನು ಕೇಂದ್ರವು ಪ್ರತಿ ಡೋಸ್‌ಗೆ 1,145 ರೂ ನಿಗದಿ ಮಾಡಿದ್ದಾರೆ. ಕೋವಿಶೀಲ್ಡ್ ಪ್ರತಿ ಡೋಸ್‌ಗೆ 780 ರೂ ನಿಗದಿಪಡಿಸಲಾಗಿದೆ, ಆದರೆ ಕೊವಾಕ್ಸಿನ್ ಪ್ರತಿ ಡೋಸ್‌ಗೆ 1,410 ರೂ ನಿಗದಿಪಡಿಸಿದೆ.

ರಷ್ಯಾದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಇದನ್ನು ಜಾಗತಿಕವಾಗಿ ಮಾರಾಟ ಮಾಡುತ್ತಿದೆ.

ಡಾ. ರೆಡ್ಡಿಸ್ ಅವರ ಲ್ಯಾಬೋರೇಟರಿ ರಷ್ಯಾದಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಕಾಲಕ್ರಮೇಣ, ಲಸಿಕೆ ಭಾರತದಲ್ಲಿಯೂ ತಯಾರಾಗಲಿದೆ ಎನ್ನಲಾಗಿದೆ.

UAE ರಿಸರ್ಚ್ ಪ್ರಕಾರ ಸ್ಪುಟ್ನಿಕ್-ವಿ ಕರೋನ ವಿರುದ್ಧ ಶೇಕಡಾ 97.8 % ಪರಿಣಾಮಕಾರಿತ್ವ ಇರುವುದು ತಿಳಿದು ಬಂದಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ತನ್ನ ಕೋವಿಡ್ -19 ಲಸಿಕೆ ಸ್ಪುಟ್ನಿಕ್-ವಿ 81,000 ಜನರಲ್ಲಿ 97.8% ರಷ್ಟು ಪರಿಣಾಮಕಾರಿತ್ವ ಹೊಂದಿದೆ ಎಂಬುದು ದೃಢಪಟ್ಟಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಮಂಗಳವಾರ ಪ್ರಕಟಿಸಿದೆ.

ವ್ಯಾಕ್ಸಿನೇಷನ್ ಅಭಿಯಾನದ ಸಮಯದಲ್ಲಿ ಯುಎಇಯ ಆರೋಗ್ಯ ಸಚಿವಾಲಯವು ಸುರಕ್ಷತೆ ಮತ್ತು ಹೆಚ್ಚಿನ ಪರಿಣಾಮಕಾರಿತ್ವವನ್ನು ದೃಢಪಡಿಸಿದೆ ಎಂದು ಆರ್‌ಡಿಐಎಫ್ ಹೇಳಿಕೆಯಲ್ಲಿ ತಿಳಿಸಿದೆ. “ಸ್ಪುಟ್ನಿಕ್-ವಿ ಯ ಎರಡೂ ಡೋಸ್ ಪಡೆದ 81,000 ಕ್ಕೂ ಹೆಚ್ಚಿನ ಜನರಲ್ಲಿ 97.8% ಪರಿಣಾಮಕಾರುತ್ವ ಕಂಡುಬಂದಿದೆ. 2021 ರ ಜೂನ್ 8 ರ ಹೊತ್ತಿಗೆ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ” ಎಂದು ಆರ್ ಡಿ ಐ ಎಫ್ ಹೇಳಿದೆ.

Tags: covid-19 vaccine
Previous Post

ದೇಶಾದ್ಯಂತ ಸಮಸ್ಯೆ ಇದ್ದರೂ ಬಗೆಹರಿಸುವ ಮನಸ್ಸು ಮಾಡದ ಕಾಂಗ್ರೆಸ್!

Next Post

ಮೂರನೇ ಅಲೆಯ ಮುಂದೆ ದೇಶದ ಜನರ ಜೀವ ಉಳಿಸುವುದೇ ಲಸಿಕಾ ವ್ಯವಸ್ಥೆ?

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಮೂರನೇ ಅಲೆಯ ಮುಂದೆ ದೇಶದ ಜನರ ಜೀವ ಉಳಿಸುವುದೇ ಲಸಿಕಾ ವ್ಯವಸ್ಥೆ?

ಮೂರನೇ ಅಲೆಯ ಮುಂದೆ ದೇಶದ ಜನರ ಜೀವ ಉಳಿಸುವುದೇ ಲಸಿಕಾ ವ್ಯವಸ್ಥೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada