ಸುಮಾರು ೨೦ ಬೀದಿನಾಯಿಗಳು ನಡೆಸಿದ ದಾಳಿಗೆ 8 ವರ್ಷದ ಗಂಡು ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಲಕ್ನೊದ ಥಾಕೂರ್ ಘಂಜ್ ನ ಮುಸಾಹಿಬ್ ಘಂಜ್ ಬಡಾವಣೆಯಲ್ಲಿ ಮನೆಯ ಹೊರಗೆ ಆಡುತ್ತಿದ್ದ ಅಣ್ಣ-ತಂಗಿ ಆಡುತ್ತಿದ್ದಾಗ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ.
ನಾಯಿಗಳ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದ ೮ ವರ್ಷದ ಮಗು ಮೊಹಮದ್ ಹೈದರ್ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿರುವ ೫ ವರ್ಷದ ತಂಗಿ ಜನ್ನತ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಬೀದಿ ನಾಯಿಗಳ ಹಾವಾಳಿ ಕುರಿತು ಹಲವಾರು ಬಾರಿ ಸ್ಥಳೀಯ ಆಡಳಿತ ಸಂಸ್ಥೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.