
ದಾವಣಗೆರೆ: ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಡಾ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಬೆಂಬಲ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ದಿನ ಕಳೆದಂತೆ ಗ್ರಾಮ ಗ್ರಾಮಗಳಲ್ಲಿಯೂ ಸ್ವತಃ ಮುಖಂಡರೇ ಸ್ವಯಂಪ್ರೇರಿತರಾಗಿ ಸಭೆ ನಡೆಸಿ ನಿರ್ಣಯ ಅಂಗೀಕರಿಸುತ್ತಿದ್ದಾರೆ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೇ ಪೀಠಾಧಿಪತಿಯಾಗಿ ಮುಂದುವರಿಯಬೇಕೆಂಬ ತೀರ್ಮಾನ ಮಾಡಿ ಶ್ರೀಗಳಿಗೆ ನಿರ್ಣಯ ಪತ್ರ ಕಳುಹಿಸಿಕೊಡುತ್ತಿದ್ದಾರೆ,ಗ್ರಾಮದಲ್ಲಿ ಸಭೆ ನಡೆಸಿ ಸಿರಿಗೆರೆ ಶ್ರೀಗಳ ವಿರುದ್ಧ ರೆಸಾರ್ಟ್ ನಲ್ಲಿ ಸಭೆ ನಡೆಸಿದವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇಷ್ಟು ದಿನ ಇಲ್ಲದ ಕಾರಣ ಈಗ ಯಾಕೆ ನೀಡುತ್ತಿದ್ದಾರೆ. ಗುರುಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಸಮಾಜದ ಕೆಲವರು ಈ ರೀತಿ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂಬ ಖಂಡನಾ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.ಡಾ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳವರ ಪಾದಾರವಿಂದಗಳಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇವೆ.
ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಬೆಳಿಯೂರು ಗ್ರಾಮದ ಶ್ರೀ ಮಠದ ಸದ್ಭಕ್ತರಾದ ನಾವುಗಳು ಭಾನುವಾರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಮಾಜದ ಬಂಧುಗಳು ಸಭೆ ನಡೆಸಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಈ ನಿರ್ಣಯಗಳನ್ನು ತೆಗೆದುಕೊಂಡಿರುತ್ತೇವೆ. ಪ್ರಶ್ನಾತೀತವಾಗಿ ಆದಂತೆ ಸಭೆಯಲ್ಲಿ ನಡೆದ ತೀರ್ಮಾನಗಳು, ನಿರ್ಣಯಗಳ ನಡಾವಳಿಯನ್ನು
ಈ ಮೂಲಕ ತಮ್ಮ ಪಾದಗಳಿಗೆ ಅರ್ಪಿಸುತ್ತಿದ್ದೇವೆ.ಸಂಸ್ಥಾನದ ಅಧಿಪತಿಗಳ ಮೇಲೆ ಕೆಲ ಪಟ್ಟಭದ್ರಾ ಅಧಿಕಾರಶಾಹಿ, ಬಂಡವಾಳಾಹಿ ಜನರ ಮಿಥ್ಯಾರೋಪ ಮಾಡುತ್ತಿರುವುದನ್ನು ಜನರು ಒಕ್ಕೊರಲಿನಿಂದ ಖಂಡಿಸಿರುತ್ತೇವೆ. ಆಪಾದನೆ ಮಾಡುತ್ತಿರುವ ಗುಂಪಿನ ವಿರುದ್ಧ ಬಲವಾದ ಪ್ರತಿರೋಧವನ್ನು ಹೊಂದಿರುತ್ತೇವೆ.