ನ್ಯಾಯಮೂರ್ತಿ ಎನ್ ವಿ ರಮಣ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದಲ್ಲಿ ಹಾಗೂ ನ್ಯಾಯಿಕ ಸಮುದಾಯದಲ್ಲಿ ಹೊಸ ಶಕ್ತಿ ಬಂದಿದೆ ಎಂದು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಾ. ಎಸ್ ಮುರಳೀಧರ್ ಶನಿವಾರ ಹೇಳಿದ್ದಾರೆ.
ಒಡಿಶಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನೆಯ ಸಮಾರಂಭದಲ್ಲಿ ನ್ಯಾ. ಮುರಳೀಧರ್ ಮಾತನಾಡಿ, ರಮಣ ಅವರು ಅಧಿಕಾರವಹಿಸಿಕೊಂಡ ನಂತರ ಗುರುತರ ಬದಲಾವಣೆಗಳು ಕಂಡಿದೆ ನ್ಯಾಯಾಲಯದ ಬುನಾದಿಯು ಮತ್ತಷ್ಟು ಭದ್ರವಾಗಿದೆ ಎಂದು ಅವರು ಹೇಳಿದ್ದಾರೆ.
“ಸಿಜೆಐ ರಮಣ ಅವರು ಅಧಿಕಾರವಹಿಸಿಕೊಂಡು ಐದು ತಿಂಗಳಾಗಿದ್ದು (ಇದೇ ವರ್ಷ ಏಪ್ರಿಲ್‌ನಲ್ಲಿ) ಅವರ ಬಗ್ಗೆ ನಾನು ಕೆಲ ಮಾತುಗಳನ್ನು ಹೇಳಬೇಕಿದೆ. ಸಿಜೆಐ ರಮಣ ಅಧೀಕಾರ ವಹಿಸಿಕೊಂಡ ನಂತರ ನ್ಯಾಯಿಕ ಸಮುದಾಯದಲ್ಲಿ ಹೊಸ ಶಕ್ತಿಯ ಬಂದಿದೆ. ನ್ಯಾಯಾಲಯದ ಅಡಿಪಾಯ/ ಬುನಾದಿಯು ಮತ್ತಷ್ಟು ಭದ್ರವಾಗಿದೆ ಎನ್ನಬಹುದು. ನಾವು ಕಾಣುತ್ತಿರುವ ಬದಲಾವಣೆಗಳು ಗುರುತರವಾಗಿವೆ. ಈ ಬದಲಾಔಣೆ ಒಳ್ಳೆಯದಕ್ಕಾಗಿ ಆಗಿರುವ ಬದಲಾವಣೆಗಳು. ಜನರು ಇದನ್ನು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ” ಎಂದು ನ್ಯಾ. ಮುರಳೀಧರ್ ಸಂತೋಷ ವ್ಯಕ್ತಪಡಿಸಿದ್ದಾರೆ.
“ನ್ಯಾಯಾಂಗದ ಸ್ವರೂಪದಲ್ಲಿಯೂ ಬದಲಾವಣೆ ಕಂಡುಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಎಲ್ಲ ಹಂತದಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದುವೇ ಅತ್ಯಂತ ಪಾಸಿಟಿವ್ ಅಂಶವಾಗಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರು ಶನಿವಾರ12 ನೇ ಶತಮಾನದ ದೇಗುಲವಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.