
ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ನುಗ್ಗುವ ಯತ್ನ ನಡೆದಿದೆ. ಬಿಜೆಪಿ ಸದಸ್ಯರ ಈ ಕೃತ್ಯದ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಮಾತನಾಡಿದ್ದು, ಇವತ್ತು ನಮ್ಮ ಫೈನಾನ್ಸ್ ಬಿಲ್ ಪಾಸ್ ಆಗೋದು ಇಂಪಾರ್ಟೆಂಟ್ ಇತ್ತು. ಹಾಗಾಗಿ ನಾವು ಬಿಲ್ ಪಾಸ್ ಮಾಡೋದರ ಕಡೆ ಗಮನ ಹರಿಸಿದ್ವಿ. ಪ್ರತಿಭಟನೆ ಪ್ರಜಾಪ್ರಭುತ್ವದ ಸೌಂದರ್ಯ. ನಾನು ಬಿಲ್ ಪಾಸ್ ಮಾಡಿದ್ದೇನೆ. ವಿಧಾನಪರಿಷತ್ನಲ್ಲಿ ಇಂದು ಪಾಸ್ ಆಗುತ್ತೆ. ಅವರವರ ಸಂಸ್ಕೃತಿಯನ್ನು ಅವರು ಬಿಂಬಿಸುತ್ತಾರೆ. ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡ್ತೇವೆ ಅಂತ ಹೇಳಿದ್ದಾರೆ ಡಿಸಿಎಂ, ಹೋಂ ಮಿನಿಸ್ಟರ್ ಹೇಳಿದ್ದಾರೆ. ಇಷ್ಟೆಲ್ಲಾ ಭರವಸೆ ಕೊಟ್ಟ ಮೇಲೂ ಗದ್ದಲ ಎಬ್ಬಿಸಿದ್ದಾರೆ. ಬಿಲ್ ಪಾಸ್ ಆಗಬಾರದು ಅಂತ ಗಲಭೆ ಎಬ್ಬಿಸಿದ್ದಾರೆ ಎಂದಿದ್ದಾರೆ.
ನಮ್ಮ ಉದ್ದೇಶ ಫೈನಾನ್ಸ್ ಬಿಲ್ ಪಾಸ್ ಆಗಿ ಜನರಿಗೆ ಒಳ್ಳೆಯದಾಗಬೇಕು ಅನ್ನೋದು. ಅದಕ್ಕಾಗಿ ಬಿಲ್ ಪಾಸ್ ಮಾಡಿದ್ದೇವೆ. ಗದ್ದಲ ವೇಳೆ ಸ್ಪೀಕರ್ ಪೀಠ ಹತ್ತಿಳಿದಿದ್ದಾರೆ ವಿಪಕ್ಷ ಸದಸ್ಯರು. ಬಿಜೆಪಿ ಸದಸ್ಯರಿಂದ ಸ್ಪೀಕರ್ ಪೀಠ ಹತ್ತಿ ಅಗೌರವ. ಸದನದ ನಡಾವಳಿ ನಿಯಮಗಳನ್ನು ಉಲ್ಲಂಘಿಸಿ ವಿಪಕ್ಷದವರಿಂದ ಧರಣಿ ಮಾಡಿದ್ದಾರೆ. ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸ್ಪೀಕರ್ ಒತ್ತಾಯ. ಬಿಜೆಪಿ ಸದಸ್ಯರಾದ ಅಶ್ವಥನಾರಾಯಣ, ಎಸ್.ಆರ್ ವಿಶ್ವನಾಥ್, ದೊಡ್ಡನಗೌಡ ಪಾಟೀಲ್, ಶರಣು ಸಲಗಾರ್, ಸಿ ಕೆ ರಾಮಮೂರ್ತಿ, ಸುರೇಶ ಗೌಡ ವಿರುದ್ಧ ಕ್ರಮಕ್ಕೆ ಸ್ಪೀಕರ್ ನೇತೃತ್ವದ ಸಭೆಯಲ್ಲಿ ನಿರ್ಧಾರ. ಒಂದು ಅಧಿವೇಶನದಿಂದ ಸಸ್ಪೆಂಡ್ ಮಾಡಲು ತೀರ್ಮಾನ

ಸದನದಲ್ಲಿ ಹನಿಟ್ರ್ಯಾಪ್ ಗದ್ದಲದ ಬಳಿಕ ನೊಂದುಕೊಂಡ ಶಾಸಕ ಬಿ.ಆರ್ ಪಾಟೀಲ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಘೋಷಣೆ. ಸದನದಲ್ಲಿನ ಘಟನೆ ನನಗೆ ತೀವ್ರ ಬೇಸರ ತಂದಿದೆ. ವಿಪಕ್ಷಗಳು ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದಾರೆ. ಈ ರೀತಿಯ ಘಟನೆ ಆಗಬಾರದು. ರಾಜೀನಾಮೆ ಕೊಡ್ತೇನೆ, ಸಿಎಂ ಬಳಿಯೂ ಮಾತಾಡ್ತೇನೆ ಎಂದ ಶಾಸಕ ಬಿಆರ್ ಪಾಟೀಲ್. ಮಾಧ್ಯಮಗಳ ಜೊತೆಗೆ ಬಿ.ಆರ್ ಪಾಟೀಲ್ ಮಾತಾಡುವಾಗಲೇ ವಿಧಾನ ಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ. ಬಿ.ಆರ್ ಪಾಟೀಲ್ ನೋಡಿ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಸ್ನೇಹಿತ ಬಿ.ಆರ್ ಪಾಟೀಲ್, ಮಾತಾಡ್ತೇನೆ ಎಂದಾಗ ನಾನು ರಾಜೀನಾಮೆ ಕೊಡ್ತೇನೆ ಎಂದು ಸಿಎಂ ಮುಂದೆ ಅಳಲು ತೋಡಿಕೊಂಡ ಶಾಸಕ,

ಹನಿಟ್ರ್ಯಾಪ್ ಪ್ರಕರಣದಲ್ಲಿ 48 ಜನ ರಾಜಕಾರಣಿಗಳು ಸಿಕ್ಕಿ ಬಿದ್ದಿರುವ ಬಗ್ಗೆ ಬಿಜೆಪಿ ಕಾಂಗ್ರೆಸ್ ಶಾಸಕರು ಒಕ್ಕೋರಲಿನಿಂದ ದನಿ ಎತ್ತಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಒತ್ತಾಯ ಮಾಡಿ ಗೃಹಸಚಿವ ಡಾ . ಜಿ ಪರಮೇಶ್ವರ್ಗೆ ಪತ್ರ ಬರೆದಿದ್ದಾರೆ. ಇನ್ನು ಸದನದಲ್ಲೂ ಸಿಬಿಐ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಜೊತೆಗೆ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರ ಕೊಡಬೇಕು ಎನ್ನುವುದು ಕೇಸರಿ ಪಾಳಯದ ಆಗ್ರಹ ಆಗಿತ್ತು. ಆದರೆ ಸರ್ಕಾರ ಫೈನಾನ್ಸ್ ಬಿಲ್ ಪಾಸ್ ಮಾಡಿಕೊಳ್ಳುವ ತರಾತುರಿಯಲ್ಲಿದ್ದಾಗ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮೇಲೆ ಹತ್ತಿ, ಫೈನಾನ್ಸ್ ಬಿಲ್ ಹರಿದು ದಾಂಧಲೆ ನಡೆಸಿದ್ದಾರೆ. ಕ್ರಮದ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶ ಹೊರ ಬೀಳಬೇಕಿದೆ.
