ಆಪರೇಷನ್ ಗಂಗಾ ಒಂದು ದೊಡ್ಡ ಕಾರ್ಯಾಚರಣೆ, ಸರ್ಕಾರ ವ್ಯವಸ್ಥೆ ಮಾಡದಿದೇ ಇದಿದ್ದರೇ ಯಾರೂ ಮರಳಿ ವಾಪಸ್ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ, ಮೋದಿಯವರ ಈ ಕೆಲಸ ಸಹಿಸಲು ಆಗದವರು ರಾಜಕೀಯ ಮಾಡ್ತಿದ್ದಾರೆ’ ಎಂದು ಖಾಸಗಿ ಚಾನಲ್ವೊಂದರಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಅಮೆರಿಕಾ ನಮ್ಮ ಕೈಯಲ್ಲಾಗಲ್ಲ ಅಂತ ಕೈ ಚೆಲ್ಲಿದೆ. ಚೀನಾ ಇಂದು ಮೊದಲ ವಿಮಾನವನ್ನು ಇಂದು ಕರೆಸಿಕೊಂಡಿದೆ. ಆದರೆ ಕಳೆದ 7-8 ದಿನಗಳಲ್ಲಿ 13 ಸಾವಿರ ವಿದ್ಯಾರ್ಥಿಗಳನ್ನು ಭಾರತ ಕರೆ ತಂದಿದೆ. ಹೀಗಿರುವಾಗ ನಮ್ಮ ಸರ್ಕಾರದ ಕಾರ್ಯಾಚರಣೆ ಬಗ್ಗೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.