
ಅಮೇರಿಕಾದ ರಾಷ್ಟ್ರಾ ಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೇರಿಕೆಯನ್ನು ಮತ್ತೊಮ್ಮೆ ಮಾಡಲು ಸಜ್ಜಾಗಿದ್ದು, ಈ ಮೂಲಕ ಇತರೆ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಿಲು ಸರ್ವಪ್ರಯತ್ನವನ್ನು ಮಾಡುತ್ತಿರುವುದು ಹೊಸ ತೆರಿಗೆ ನೀತಿಯಿಂದ ನಿಶ್ಚಳವಾಗಿ ಕಂಡುವಬರುತ್ತಿದೆ.
ಟ್ರಂಪ್ ನಿರಂಕುಶಮತಿಯಾಗಲೂ ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ತಿಳಿಯಲು ಸಾಧ್ಯವಾಗಿದೆ.
ಇದರ ಮುಂದುವರಿದ ಭಾಗವೇ ತೆರಿಗೆ ಸುಂಕ ಹೆಚ್ಚಳ !
ಶುಕ್ರವಾರದಂದು ಡೊನಾಲ್ಡ್ ಟ್ರಂಪ್ ಅಮೇರಿಕವು Branded ಅಥವಾ Patents ಹೊಂದಿರುವ ಔಷಧಿಗಳ ಮೇಲೆ 100% ಸುಂಕ ವಿಧಿಸಲಾಗುವುದೆಂದು ತಿಳಿಸಿದ್ದು. ಹಾಗೂ Kitchen Cabinets ಗಳು Bath Rooms ಗೆ ಸಂಬಂಧಿಸಿದ ವಸ್ತುಗಳ ಮೇಲೆ 50%
ಹಾಗೂ Heavy Trucks ಮೇಲೆ 25% ನಷ್ಟು ತೆರಿಗೆ ಹೆಚ್ಚಿಸಿಲಾಗುವುದೆಂದು “ White House “ಆದೇಶಿಸಿ, ಈ ಹೊಸ ತೆರಿಗೆ ನೀತಿ ಅಕ್ಟೋಬರ್ 1ರಿಂದ ಜಾರಿಗೆ ತರಲಾಗುವುದೆಂದು ತಿಳಿಸಿದೆ.
ರಾಷ್ಟ್ರೀಯ ಭದ್ರತೆಯ ನೆಪದಲ್ಲಿ “Trade Expansion Act 1962” Section 232ರ ಅನಯ್ವ ಈ ಹೊಸ ತೆರಿಗೆ ನಿಯಮ ಜಾರಿಗೊಳಿಸಲಾಗುವುದೆಂದು “ White House “ನಿರ್ಧಿರಿಸಿದೆ.
ಇನ್ನೂ ಹೊಸ ತೆರಿಗೆ ವಿಚಾರವು International Emergency Economic Powers Act (IEEPA) ಹೊಸ ತೆರಿಗೆ ಮುಂದಿನ ತಿಂಗಳಿನಿಂದಲೇ ಜಾರಿಯಾಗಲಿದೆ.
ಇನ್ನೂ ಅಮೇರಿಕಾದ ಸುಪ್ರೀಂಕೋರ್ಟ್ ಏನಾದರು ತೆರಿಗೆ ನೀತಿ ವಿರುದ್ಧ ಆದೇಶ ಹೊರಡಿಸಿದರೆ, ಟ್ರಂಪ್ ಗೆ ದೊಡ್ಡ ಮುಖಭಂಗವಾಗಲ್ಲಿದ್ದು, ಈ ಮೂಲಕ ಟ್ರಂಪ್ ನಿರಂಕುಶಮತಿಯಾಗುವ ಕನಸು ಕೂಡ ನುಚ್ಚು ನೂರಾಗಲಿದೆ.
ಸದ್ಯದ ಮಟ್ಟಿಗೆ ಭಾರತವು 50% ತೆರಿಗೆಯ ಭೀತಿಯನ್ನು ಎದುರಿಸುತ್ತಿದ್ದು, ಅದರ ಜೊತೆಗೆ
ಭಾರತೀಯರು ಹೆಚ್ಚಾಗಿ ತೊಡಗಿಸಿಕೊಂಡಿರುವ ವಲಯಗಳ ಮೇಲೆ ಬಾರಿ ಪರಿಣಾಮ ಭೀರಲ್ಲಿದ್ದು ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಅದರಲ್ಲೂ ಮುಖ್ಯವಾಗಿ ಜವಳಿ, ಪಾದರಕ್ಷೆಗಳು ಹಾಗೂ ಸಾಗರ ಉತ್ಪನಗಳ ಸಾಕಷ್ಟು ಹೊಡೆತ ಬೀಳಲಿದೆ.
ಒಂದು ಕಡೆ ಹೆಚ್ 1ಬಿ ವಿಸಾ ಸುಂಕ ಹೆಚ್ಚಳದಿಂದ ಭಯದಲ್ಲಿರುವ ಅನಿವಾಸಿ ಭಾರತೀಯರೀಗ ಹೊಸ
ತೆರಿಗೆ ಜಾರಿಗೊಂಡರೆ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಭಾರತವು ಸಾಕಷ್ಟು ಔಷಧಿಗಳನ್ನು ಅಮೇರಿಕಾ ಸೇರಿದಂತೆ ಇತರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಒಂದು ವೇಳೆ ಅಮೇರಿಕ ಔಷಧಿಗಳ ಮೇಲೆ 100 ರಷ್ಟು ತೆರಿಗೆ ಹೇರಿದರೆ ಭಾರತ ಖಂಡಿತವಾಗಲೂ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಒಂದು ಕಡೆ ಭಾರತದ ರೂಪಾಯಿ ಮೌಲ್ಯವು America dollar ಎದುರು ಸಾರ್ವತ್ರಿಕ ಕನಿಷ್ಟ ಬೆಲೆಗ ತಲುಪಿದರೆ, ಮತ್ತೊಂದು ಕಡೆ ಈ ಹೊಸ ತೆರಿಗೆ ನೀತಿಯಿಂದ ಭಾರತ ಮತ್ತಷ್ಟು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಆದರೇ ಕೇಂದ್ರ ಸರ್ಕಾರವು ಪ್ರಮುಖ ವಿಚಾರಗಳ ಮತ್ತು ಜ್ವಲಂತ ಸಮಸ್ಯೆಗಳ ಬಗ್ಗೆ ಆಲಿಸದಿರುವುದು ದೊಡ್ಡ ದುರುಂತವೇ ಸರಿ?

ಸದ್ಯದ ಮಟ್ಟಿಗೆ ದೇಶದ ಪ್ರಧಾನಿಗೆ ಮತ್ತು BJP /NDA ಸದ್ಯದಲ್ಲೇ ನಡೆಯಲಿರುವ ಬಿಹಾರ, ಹಾಗೂ ಇತರೆ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ತೀವ್ರವಾದ ಆಸಕ್ತಿಹೊಂದಿದೆ ಹೊರೆತು, ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳ ಮೇಲೆ ಗಮನಹರಿಸದಿರುವುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತದೆ.
ನಿರುದ್ಯೋಗವು ಕಳೆದ 80ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಬಾರೀ ಪ್ರಮಾಣದ ನಿರುದ್ಯೋಗ ಹೆಚ್ಚಾಗಿದೆ, ಇದರ ಜೊತೆಗೆ ಭಾರತವು ಸ್ವಾತಂತ್ರ್ಯದ ಪೂರ್ವದಲ್ಲಿ ಎದುರಿಸುತ್ತಿದ್ದ ಬೆಲೆ ಏರಿಕೆಯ ಪ್ರಮಾಣವನ್ನು ಮತ್ತೆ ಮೋದಿ ಆಡಳಿತದಲ್ಲಿ ಮರುಕಳಿಸಿರುವ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಗಳು ಖಚಿತ ಪಡಿಸಿವೆ.
ಒಟ್ಟಾರೆ ಹೇಳುವುದಾದರೆ ಆಡಳಿತದಲ್ಲಿರುವ ಪಕ್ಷಕ್ಕೆ ದೂರದೃಷ್ಟಿಯ ಕೊರತೆ ಮತ್ತು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಶಕ್ತಿಹೀನ ಪಕ್ಷವೊಂದು, ಅಧಿಕಾರಕ್ಕೆ ಹಪಹಪಿಸುತ್ತಿರುವುದು ದೊಡ್ಡ ದರುಂತ ಅಲ್ಲವೇ?
ವಿಶ್ವಮಟ್ಟದಲ್ಲಿ ವಿಷಯದಲ್ಲಿ ಮಾನ್ಯತೆ ಪಡೆದ ಡಾ! ಮನಮೋಹನ್ ಸಿಂಗ್ ಅವರ ಹುಟ್ಟು ಹಬ್ಬದ ದಿನದಂದಾದರು ಕೇಂದ್ರ ಸರ್ಕಾರವು ಡಾ. ಮನಮೋಹನ್ ಸಿಂಗ್ ಅವರ ರೂಪರೇಷೆಗಳ ಆಧಾರದ ಮೇಲಾದರು ಸೂಕ್ತ ರೀತಿಯಲ್ಲಿ ಅಮೇರಿಕಾ, ಚೀನಾ, ಹಾಗೂ ಇನ್ನಿತರೆ ದೇಶಗಳು ಒಡ್ಡುವ ಸವಾಲುಗಳನ್ನು ಎದುರಿಸಲು ತಂತ್ರರೂಪಿಸವುದನ್ನು ಬಿಟ್ಟು, ಮಂದಿರ, ಮಸೀದಿ, ಬಟ್ಟೆ, ಭಾಷೆ ಹೀಗೆ ಕ್ಷುಲ್ಲಕ ವಿಚಾರಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತಿರುವುದು ದೇಶಕ್ಕೆ ಮಾಡುವ ಅಪಮಾನವಲ್ಲದೇ ಮತ್ತೆನೂ?
ಪತ್ರಿಧ್ವನಿ ಸ್ಪಷಲ್ ಡೆಸ್ಕ್