2024 ರ ಲೋಕಸಭಾ ಚುನಾವಣೆಗೆ (LOKASABHA ELECTION 2024) ಬಿಜೆಪಿ ತೆರೆಮರೆಯಲ್ಲಿ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಒಂದು ಕಡೆ ಈಗಾಗಲೇ ಕ್ಷೇತ್ರವಾರು ಹಾಲಿ ಸಂಸದರನ್ನು ಕರೆದು ಸಭೆ ಮಾಡಿ, ಸ್ಥಳೀಯ ನಾಯಕರನ್ನು ಪರಿಗಣಿಸಿ ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ ಆಗುತ್ತಿದೆ. ಇನ್ನೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B Y VIJAYENDRA) ಸದ್ದಿಲ್ಲದೆ, ತಮ್ಮ ತಂಡದ ಮೂಲಕ ಪ್ರತಿ ಕ್ಷೇತ್ರದ ಹಾಲಿ ಸಂಸದರ ಮೌಲ್ಯಮಾಪನಕ್ಕೆ (Evaluation) ಮುಂದಾಗಿದ್ದಾರೆ.
ಅಷ್ಟಕ್ಕೂ ಏನಿದು ಮೌಲ್ಯಮಾಪನ ಪ್ರಕ್ರಿಯೆ? (Evaluation Process)
ಪ್ರತಿಧ್ವನಿಗೆ ಬಿಜೆಪಿಯ ಉನ್ನತ ಮೂಲಗಳಿಂದಲೇ ನಿಖರ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y VIJAYENDRA) 2024 ರ ಲೋಕಸಭಾ ಚುನಾವಣೆಗೆ (LOKASABHA ELECTION 2024) ಪಕ್ಷದಿಂದ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಒಂದು ಕಡೆ ಕಳೆದ 2019 ರ ಲೋಕಸಭಾ ಚುನಾವಣೆಯ ಹೊಣೆ ಹೊತ್ತಿದ್ದ ಬಿ. ಎಸ್.ಯಡಿಯೂರಪ್ಪ (B S YEDIYURAPPA), ರಾಜ್ಯದಲ್ಲಿ ಪ್ರವಾಸ ಮಾಡಿ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರವನ್ನು ಬಿಜೆಪಿಯ ತೆಕ್ಕೆಗೆ ತಂದು ಕೊಟ್ಟಿದ್ರು. ಇದು ರಾಜ್ಯ ಬಿಜೆಪಿಯ ಪಾಲಿಗೆ ಅತಿ ದೊಡ್ಡ ಸಾಧನೆಯೇ. ಈಗ ಬಿಜೆಪಿಯ ಸಾರಥಿಯಾಗಿರುವ ಬಿ.ವೈ.ವಿಜಯೇಂದ್ರ (B Y VIJAYENDRA), ಆ ದಾಖಲೆಯನ್ನು ಬದಿಗಟ್ಟಿ ಮುಂದೆ ನಡೆಯಬೇಕು. ಆ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತ, ಹೈಕಮಾಂಡ್ ನಾಯಕರ ಬಳಿ ತಾನೊಬ್ಬ Obedient Student ಎಂದು Prove ಮಾಡಿಕೊಳ್ಳಬೇಕು. ಹೀಗಾಗಿ, ಬಿ.ವೈ.ವಿಜಯೇಂದ್ರ Master Plan ಒಂದನ್ನ ಮಾಡಿದ್ದಾರೆ. ಅದೇ ಈ ಮೌಲ್ಯಮಾಪನ (Evaluation) ಪ್ರಕ್ರಿಯೆ.
ಈಗಾಗಲೇ ಕಳೆದ ಎರಡ್ಮೂರು ದಿನಗಳಿಂದ ಕ್ಷೇತ್ರವಾರು ಬಿ.ವೈ. ವಿಜಯೇಂದ್ರ (B Y VIJAYENDRA) ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಾ, 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಯಾರಾಗಬೇಕೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ಜೊತೆಗೆ ತಮ್ಮ ಪದಾಧಿಕಾರಿಗಳ ತಂಡದ ಮೂಲಕ ಪ್ರತಿ ಕ್ಷೇತ್ರದಲ್ಲೂ ಹಾಲಿ ಸಂಸದರು ಕಳೆದ ನಾಲ್ಕುವರೆ ವರ್ಷದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸ್ಥಳೀಯ ನಾಯಕರಿಂದ ಆಯಾ ಕ್ಷೇತ್ರದ ಸಂಸದರ ವರ್ಚಸ್ಸು, ಕೆಲಸ ಕಾರ್ಯಗಳು, ಕಾಮಗಾರಿಗಳನ್ನು ನಡೆಸಿರುವುದು, ಕೊರೊನಾ ಸಂದರ್ಭದಲ್ಲಿ ಸಂಸದರ ಪಾಲ್ಗೊಳ್ಳುವಿಕೆ (MP’S Participation), ಜನರೊಂದಿಗೆ ಹೊಂದಾಣಿಕೆ, ಹೀಗೆ ಹಲವು ಮಾಹಿತಿಯನ್ನು ವಿಜಯೇಂದ್ರ ಕಲೆ ಹಾಕುತ್ತಿದ್ದಾರೆ. ಯಾವ ಸಂಸದರು ನಿರೀಕ್ಷಿಸಿದ ಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡಿಲ್ಲ, ಅಂತಹವರಿಗೆ ಕೊಕ್ ಕೊಡುವುದು ವಿಜಯೇಂದ್ರರ One Line Agenda.
ಹೀಗಾಗಿ, ಒಂದು ಕಡೆ ಸಭೆ, ಇನ್ನೊಂದು ಕಡೆ ಮೌಲ್ಯಮಾಪನ. ಎರಡನ್ನು ಒಟ್ಟೊಟ್ಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B Y VIJAYENDRA) ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಪ್ರತಿಧ್ವನಿಗೆ ಬಿಜೆಪಿಯ ಮೂಲಗಳಿಂದಲೇ ಲಭ್ಯವಾಗಿದೆ.