• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಮಾಜವಾದಿ ಈಗ ಸಂಘದ ಸೇವಕ: ಅವಕಾಶವಾದಿ ಬೊಮ್ಮಾಯಿವರ ಕಂಪ್ಲೀಟ್ ಸ್ಟೋರಿ

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 17, 2021
in ಕರ್ನಾಟಕ, ರಾಜಕೀಯ
0
ಉಪಚುನಾವಣೆ ಸೋಲು : ಸಿಎಂ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ಕೇಳಿದ ಐದು ಪ್ರಶ್ನೆಗಳೇನು?
Share on WhatsAppShare on FacebookShare on Telegram

ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಬಸವರಾಜ್ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾದಾಗ, ಆಪ್ತ ಬಿಎಸ್‌ವೈ ಅವರಂತೆ ಅವರು ಕೂಡ ಪಕ್ಷದಲ್ಲಿನ ಕಟ್ಟರ್‌ಗಳಿಗೆ ಮಣಿಯುವುದಿಲ್ಲ ಎಂದು ಹಲವರು ನಂಬಿದ್ದರು. ಆದರೆ ಗೃಹ ಸಚಿವರಾಗಿದ್ದಾಗಲೇ ಅವರು ಸಂಘ ಪರಿವಾರದ ಸೇವಕರಾಗಿದ್ದರು. ಆಗ ಯಡಿಯೂರಪ್ಪರ ನಿಯಂತ್ರಣ ಇದ್ದ ಕಾರಣ ಬೊಮ್ಮಾಯಿ ಸಂಪೂರ್ಣವಾಗಿ ಆರ್ಎಸ್ಎಸ್ ಸೇವಕರಾಗಿರಲಿಲ್ಲ, ಆದರೆ, ಈಗ ಅವರ ಅಧಿಕಾರ ಭದ್ರವಾಗಿರಲು ಆರ್ಎಸ್ಎಸ್ ಮತ್ತು ಬಿಜೆಪಿಯ ಕಟ್ಟರ್ ಶಾಸಕರ ಅಣತಿಯಂತೆ ನಡೆಯುತ್ತಿದ್ದಾರೆ.

ADVERTISEMENT

ಸಿಎಂ ಆದ ಕೇವಲ ನಾಲ್ಕೇ ತಿಂಗಳಲ್ಲಿ ಬೊಮ್ಮಾಯಿ ಅವರು ಆರ್‌ಎಸ್‌ಎಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸದಿದ್ದರೂ, ಇತರ ಅನೇಕ ಬಿಜೆಪಿ ನಾಯಕರಂತೆ ಹಿಂದುತ್ವದ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ಹಿಂದೆ ಸರಿಯುವುದಿಲ್ಲ ಎಂದು ತೋರಿಸಿದರು.

ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌ಆರ್ ಬೊಮ್ಮಾಯಿ ಅವರ ರಾಜಕೀಯ ಇದಕ್ಕೆ ತದ್ವಿರುದ್ಧವಾಗಿತ್ತು. ಜನತಾ ಪಕ್ಷದ ನಾಯಕರಾಗಿದ್ದ ಅವರು 1988-89ರಲ್ಲಿ ಕರ್ನಾಟಕದ ಸಿಎಂ ಆಗಿದ್ದರು. ಸೀನಿಯರ್ಬೊಮ್ಮಾಯಿಯ ರಾಜಕೀಯ ಸಿದ್ಧಾಂತವು ಸಮಾಜವಾದ ಮತ್ತು ಜಾತ್ಯತೀತ ವಾದದಲ್ಲಿ ಬೇರೂರಿತ್ತು. ಕ್ರಾಂತಿಕಾರಿ ಎಡಪಂಥೀಯ ಎಂಎನ್ ರಾಯ್ ಅವರ ತತ್ವಗಳ ಅನುಯಾಯಿ ಆಗಿದ್ದ ಅವರು ರಾಯ್ ಅವರ ರಾಡಿಕಲ್ ಡೆಮಾಕ್ರಟಿಕ್ ಪಕ್ಷದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಕೇಂದ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ, ಎಸ್‌.ಆರ್ ಬೊಮ್ಮಾಯಿ ಶಿಕ್ಷಣದ ಪರಿಕಲ್ಪನೆಯನ್ನು ಮೂಲಭೂತ ಹಕ್ಕಾಗಿ ಪರಿಚಯಿಸಿದರು. ಇದು ಹಲವು ವರ್ಷಗಳ ನಂತರ, ಶಿಕ್ಷಣ ಹಕ್ಕು ಕಾಯಿದೆ, 2010 ಆಗಿ ಸಾಕಾರಗೊಂಡಿತು.

ಬಸವರಾಜ ಬೊಮ್ಮಾಯಿ ಅವರು ಯುವ ರಾಜಕಾರಣಿಯಾಗಿ ತಮ್ಮ ತಂದೆಯ ಹಾದಿಯನ್ನು ಅನುಸರಿಸಿದರು ಮತ್ತು ಸಮಾಜವಾದಿ ತತ್ವಗಳನ್ನು ಪ್ರತಿಪಾದಿಸಿದರು. ಜನತಾ ಪಕ್ಷದಲ್ಲಿದ್ದ ಅವಧಿಯಲ್ಲಿ ಬೊಮ್ಮಾಯಿ ಅವರು 1998ರಲ್ಲಿ ಹಾಗೂ 2004ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಅವರು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಬೊಮ್ಮಾಯಿ ಅವರು ಕಟ್ಟಾ ಸಮಾಜವಾದಿಯಾಗಿದ್ದರು ಮತ್ತು ಅನೇಕ ಪ್ರಮುಖ ವಿಷಯಗಳಲ್ಲಿ ಬಿಜೆಪಿಯೊಂದಿಗೆ ಬಲವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಆದರೆ, ಇವತ್ತು ಅವರು ಸಂಘ ಪರಿವಾರದ ಸದಸ್ಯರಂತೆ ಬಹಿರಂಗವಾಗಿ ಹಿಂದುತ್ವವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದಾಗ ಕೋಮುವಾದಿಯಾಗಿರಲಿಲ್ಲ. ಜಾತ್ಯತೀತ ವಿಷಯಗಳಲ್ಲಿ ಕೆಲಸ ಮಾಡಿದ್ದರು. ದೇವೇಗೌಡರು, ಸಿದ್ದರಾಮಯ್ಯ, ಸುರೇಂದ್ರ ಮೋಹನ್, ಮಧು ದಂಡವತೆ, ಎಸ್‌ಆರ್ ಬೊಮ್ಮಾಯಿ ಅವರು ಬಹುತೇಕ ಸಮಾಜವಾದಿ ನಿಲುವಿನವರೇ ಆಗಿದ್ದರು. ಬಸವರಾಜ ಬೊಮ್ಮಾಯಿ ಕೂಡ ತಂದೆಯ ಬೆಂಬಲಕ್ಕೆ ನಿಂತಿದ್ದರು.
ಬಸವರಾಜ ಬೊಮ್ಮಾಯಿ ವಿಧಾನಪರಿಷತ್ ಸದಸ್ಯರಾಗಿದ್ದಾಗ ಬಿಜೆಪಿಯನ್ನು ಹಲವು ವಿಷಯಗಳಲ್ಲಿ ಟೀಕಿಸಿದ್ದರು. ಗೋಹತ್ಯೆ ನೆಪದ ಗಲಾಟೆ ಮತ್ತು ನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಮ್ಮಾಯಿ ಅವರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಬಲವಾಗಿ ಮಾತನಾಡಿದ್ದರು.
ಜನತಾ ಪಕ್ಷದ ಯುವ ಮುಖಂಡರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಬಲ್ಲ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು, ʼʻ2008ಕ್ಕೂ ಮುನ್ನ ಬೊಮ್ಮಾಯಿ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರಬೇಕೆ ಎಂಬ ಭಾರೀ ಸಂದಿಗ್ಧ ಸ್ಥಿತಿಯಲ್ಲಿದ್ದರು. ಅವರು ಕಾಂಗ್ರೆಸ್ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಜೆಪಿ ಸೇರಿದರು ಮತ್ತು ಶಿಗ್ಗಾಂವಿಯಿಂದ ಸ್ಪರ್ಧಿಸಲು ಟಿಕೆಟ್ ಪಡೆದರು” ಎಂದು ಇಂಗ್ಲಿಷ್ ಪೋರ್ಟಲ್ ಒಂದಕ್ಕೆ ಈ ಹಿಂದೆ ತಿಳಿಸಿದ್ದರು.

ಮುಂದಿನ ಕೆಲವು ವರ್ಷಗಳಲ್ಲಿ, ಬೊಮ್ಮಾಯಿ ಅವರು ಬಿಜೆಪಿ ಪಕ್ಷ ಮತ್ತು ಸರ್ಕಾರದೊಳಗೆ ಹಲವಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದರು. ಕಡಿಮೆ ಪ್ರೊಫೈಲ್ ಅನ್ನು ನಿರ್ವಹಿಸುವಾಗ, ಅನೇಕ ಕಷ್ಟಕರ ಸಂದರ್ಭಗಳಲ್ಲಿ ಅವರು ವಿಶ್ವಾಸಾರ್ಹ ಎಂದು ಸಾಬೀತಾಯಿತು.

2008 ರಲ್ಲಿ ಯಡಿಯೂರಪ್ಪ ಬಿಜೆಪಿಯ ಮೊದಲ ಸ್ವತಂತ್ರ ಸರ್ಕಾರವನ್ನು ರಚಿಸಿದಾಗ, ಬೊಮ್ಮಾಯಿ ಅವರಿಗೆ ಪ್ರಮುಖ ಜಲಸಂಪನ್ಮೂಲ ಸಚಿವಾಲಯವನ್ನು ನೀಡಲಾಯಿತು. ಅದೇ ಅವಧಿಯಲ್ಲಿ ಪಕ್ಷವು ಮೂರು ವಿಭಿನ್ನ ಸಿಎಂಗಳನ್ನು ಕಂಡರೂ ಐದು ವರ್ಷಗಳ ಕಾಲ ಬೊಮ್ಮಾಯಿ ಜಲ ಸಂಪನ್ಮೂಲ ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಶಿಗ್ಗಾವಿ-ಸವಣೂರು ಕ್ಷೇತ್ರದಿಂದ ಸತತ ಮೂರು ಸಲ ಬೊಮ್ಮಾಯಿ ಗೆಲುವು ಸಾಧಿಸಿದ್ದರು. ಆದರೂ ಅವರು ಧಾರವಾಡ ವಲಯ ಅಥವಾ ಹಾವೇರಿ ಜಿಲ್ಲೆಯ ಪ್ರಮುಖ ನಾಯಕ ಅನಿಸಿಕೊಳ್ಳಲಿಲ್ಲ. ಬೊಮ್ಮಾಯಿ ಅವರು ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಮತ್ತು ವಿಧಾನಸಭೆಯ ಕಲಾಪಗಳಲ್ಲಿ ಪಕ್ಷವನ್ನು ಸಮರ್ಥಿಸುವ ಪರಿಣಾಮಕಾರಿ ವಾಗ್ಮಿ ಎಂದು ಖ್ಯಾತಿ ಗಳಿಸಿದರು.

ಬೊಮ್ಮಾಯಿ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ, ಪಕ್ಷವು, ವಿಶೇಷವಾಗಿ ಯಡಿಯೂರಪ್ಪನವರು, ಪ್ರತಿಪಕ್ಷಗಳನ್ನು ಎದುರಿಸಲು ಮತ್ತು ಶಾಸಕಾಂಗದ ನಿಲುವುಗಳನ್ನು ಪರಿಹರಿಸಲು ಬೊಮ್ಮಾಯಿ ಅವರ ಮಧ್ಯಸ್ಥಿಕೆಯನ್ನು ಅವಲಂಬಿಸಿದ್ದರು.
ಸುಗತ ಶ್ರೀನಿವಾಸರಾಜು, “ಅವರಿಗೆ ಹಿಂದುತ್ವ ಅಥವಾ ಸಮಾಜವಾದ ಅಥವಾ ಅವರ ತಂದೆ ಪ್ರತಿಪಾದಿಸಿದ ಎಂಎನ್ ರಾಯ್ ಅವರ ತತ್ವಗಳ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಅವರು ಕೇವಲ ಹರಿವಿನೊಂದಿಗೆ ಹೋಗುತ್ತಿದ್ದಾರೆ. ತಮ್ಮ ನಿಲುವಿನ ಬಗ್ಗೆ ಸ್ಥಿರವಾಗಿಲ್ಲದ ಕಾರಣ, ಅವರ ಪಕ್ಷದ ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿಲ್ಲ. ಅವರನ್ನು ಇನ್ನೂ ಅವಕಾಶವಾದಿಯಾಗಿ ನೋಡಲಾಗುತ್ತಿದೆ” ಎಂದು ಇಂಗ್ಲೀಷ್ ಪೋರ್ಟಲ್ ಒಂದಕ್ಕೆ ತಿಳಿಸಿದ್ದಾರೆ.

ಹೋಂ ಮಿನಿಸ್ಟರ್? ʼಓಂʼ ಮಿನಿಸ್ಟರ್?

ಗೃಹ ಸಚಿವರಾಗಿ, ಬೊಮ್ಮಾಯಿ ಅವರು ಹೈಕಮಾಂಡ್‌ನ ಹಿಂದುತ್ವದ ಪಾಲಿಸಿಯನ್ನು ಅನುಸರಿಸಲು ಆಸಕ್ತಿ ತೋರಿಸಿದರು. ಮೂಲ ಆರ್‌ಎಸ್‌ಎಸ್‌ನವರಾದ ಯಡಿಯೂರಪ್ಪ ಅವರು ಕೆಲವು ಹಿಂದೂತ್ವವಾದಿ ಯೋಜನೆಗಳನ್ನು ಹಿಂದಕ್ಕೆ ತಳ್ಳುತ್ತಿದ್ದರು. ಆದರೆ ಬೊಮ್ಮಾಯಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ‘ಅಕ್ರಮ ವಲಸಿಗರ’ ಮೇಲೆ ನಿಗಾ ಇಡಲು ಕರ್ನಾಟಕವೂ ವಿವಾದಾತ್ಮಕ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ನಂತರ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿ, ರಾಜ್ಯದಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಡಿಸೆಂಬರ್ 2019 ರಲ್ಲಿ, ಮಂಗಳೂರಿನಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆಯಿತು. ಇದರ ಪರಿಣಾಮವಾಗಿ ಪೋಲಿಸ್ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು. ಬೊಮ್ಮಾಯಿ ಆಗ ಪ್ರತಿಭಟನಾಕಾರರನ್ನೇ ದೂಷಿಸಿದರು.

ಆಗಸ್ಟ್ 2020 ರಲ್ಲಿ, ಮುಸ್ಲಿಮರನ್ನು ಅವಹೇಳನ ಮಾಡುವ ಫೇಸ್‌ಬುಕ್ ಪೋಸ್ಟ್ ಅನ್ನು ವಿರೋಧಿಸಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಪ್ರತಿಭಟನೆ ನಡೆದು, ಪೊಲೀಸರು ಅದಕ್ಕೆ ಸ್ಪಂದಿಸದೇ ಇದ್ದಾಗ, ಬೆಂಗಳೂರು ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಕಾಲಾವಕಾಶ ಕೋರಿದ್ದರಿಂದ ಆಕ್ರೋಶಗೊಂಡ ಗುಂಪು, ನಂತರ ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿಯ ಪೊಲೀಸ್ ಠಾಣೆಗಳು ಹಾಗೂ ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ನಿವಾಸದ ಮೇಲೆ ದಾಳಿ ನಡೆಸಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಪೊಲೀಸರಿಂದಾದ ಕಿರುಕುಳದ ಬಗ್ಗೆ ಪ್ರದೇಶದ ನಿವಾಸಿಗಳು ಆರೋಪಿಸಿದ್ದರು. ಈ ಪ್ರಕರಣದಲ್ಲೂ ಗೃಹ ಸಚಿವರಾಗಿ ಬೊಮ್ಮಾಯಿ ಸಂಘ ಪರಿವಾರದ ಸೇವಕನಂತೆ ವರ್ತಿಸಿದ್ದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಅವರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ತಂದೆಯ ಸಮಾಜವಾದಿ ರಾಜಕಾರಣದ ಬಗ್ಗೆ ಮಾತನಾಡಿದರು. ಆದರೆ ಮುಂದಿನ ದಿನಗಳಲ್ಲಿ ಅವರ ನಡೆ ಪೂರ್ಣ ವ್ಯತಿರಿಕ್ತವಾಗಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾದಾಗ, ಕರ್ನಾಟಕದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳು ಮತ್ತು ಚರ್ಚ್‌ಗಳ ಮೇಲೆ ದಾಳಿಗಳ ಸಂಖ್ಯೆ ಹೆಚ್ಚಾಯಿತು. ಉಡುಪಿಯಿಂದ ಬೆಳಗಾವಿವರೆಗೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಕ್ರೈಸ್ತ ಪ್ರಾರ್ಥನಾ ಮಂದಿರಗಳಿಗೆ ನುಗ್ಗಿ, ‘ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸಿ’ ಎಂದು ಪ್ರತಿಭಟನೆ ನಡೆಸಿ, ಪ್ರಬಲ ಮತಾಂತರ ವಿರೋಧಿ ಕಾನೂನಿಗೆ ಒತ್ತಾಯಿಸಿದರು. ಈಗ ಬೊಮ್ಮಾಯಿ ಸರ್ಕಾರ ಅದನ್ನು ಮಾಡಲು ಹೊರಟಿದೆ.

ರಾಜ್ಯವು ‘ಲವ್ ಜಿಹಾದ್’ ಅನ್ನು ನಿಗ್ರಹಿಸಲು ‘ನೈತಿಕ ಪೊಲೀಸ್ಗಿರಿ’ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. ಪುಂಡರ ಗುಂಪುಗಳು ಅಂತರ್ಧರ್ಮೀಯ ಸ್ನೇಹಿತರು, ಪ್ರೇಮಿಗಳ ಮೇಲೆ ದಾಳಿ ಮಾಡುತ್ತವೆ. “ನೈತಿಕತೆ ಇಲ್ಲದಿದ್ದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಸಂಭವಿಸುತ್ತದೆ” ಎಂದು ಹೇಳಿದ್ದ ಸಿಎಂ ಬೊಮ್ಮಾಯಿ ‘ನೈತಿಕ ಪೊಲೀಸ್ಗಿರಿʼ ಅನ್ನು ಸಮರ್ಥಿಸಿಕೊಂಡಿದ್ದರು. ಇದು ಪುಂಡ ಗುಂಪುಗಳಿಗೆ ಇನ್ನಷ್ಟು ಬಲ ತಂದಿತು. ಬೊಮ್ಮಾಯಿಯವರ ಹಿಂದುತ್ವದ ಗಟ್ಟಿಯಾದ ಪ್ರತಿಪಾದನೆಯು ಅನೇಕ ರಾಜಕೀಯ ವೀಕ್ಷಕರನ್ನು ಆಶ್ಚರ್ಯಗೊಳಿಸಿದೆ ಆದರೆ ಅವರ ಸ್ವಂತ ಪಕ್ಷದ ಸಹೋದ್ಯೋಗಿಗಳು ಸೇರಿದಂತೆ ಅನೇಕರು ಅವರ ಕಾರ್ಯಗಳು ಸಿದ್ಧಾಂತದ ಸಂಪೂರ್ಣ ತಿಳುವಳಿಕೆಯಿಂದ ಹುಟ್ಟಿಕೊಂಡಿವೆ ಎಂದು ನಂಬುವುದಿಲ್ಲ.

2023 ರ ವಿಧಾನಸಭಾ ಚುನಾವಣೆಗೆ ಬೊಮ್ಮಾಯಿ ಬಿಜೆಪಿಯ ಸಿಎಂ ಮುಖ ಎಂದು ಅಮಿತ್ ಶಾ ಘೋಷಿಸಿದ ನಂತರ, ತಮ್ಮ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದ ಅನೇಕ ಹಿರಿಯ ನಾಯಕರು ನಿರಾಶರಾದರು. ಆರಂಭದಲ್ಲಿ ಅವರನ್ನು ದೀರ್ಘಾವಧಿಯ ಸ್ಪರ್ಧಿ ಎಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಮಿತ್ ಶಾ ಅವರ ಅನುಮೋದನೆಯ ನಂತರ, ಬೊಮ್ಮಾಯಿ ಅವರು ಕೇವಲ ಸ್ಟಾಪ್-ಗ್ಯಾಪ್ ಸಿಎಂ ಆಗಿರಬಹುದು ಎಂದು ನಂಬಿದ್ದ ಹಿರಿಯ ಬಿಜೆಪಿ ನಾಯಕರಿಗೆ ತಳಮಳ ಶುರುವಾಗಿದೆ.

ಬೊಮ್ಮಾಯಿ ಅವರ ಹಿಂದುತ್ವದ ಉತ್ಕಟವಾದ ಅಪ್ಪುಗೆಯು ಆರ್‌ಎಸ್‌ಎಸ್ ಮತ್ತು ಹೈಕಮಾಂಡ್‌ ಓಲೈಕೆಯ ಪ್ರಯತ್ನವಾಗಿದೆ ಎಂದು ಬಿಜೆಪಿಯ ಕೆಲವು ನಾಯಕರು ಅಭಿಪ್ರಾಯ ಪಡುತ್ತಾರೆ.

ಬೊಮ್ಮಾಯಿ ಈಗ ಹಿಂದುತ್ವದತ್ತ ವಾಲುತ್ತಿರುವುದು ಕೇವಲ ಉಳಿವಿಗಾಗಿ ಎಂದು ಸುಗತ ಹೇಳುತ್ತಾರೆ, “ಅವರು ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ನ ಒಂದು ನಿರ್ದಿಷ್ಟ ವರ್ಗವನ್ನು ಸಂತುಷ್ಟಗೊಳಿಸಿದ್ದಾರೆ. ಹೀಗಾಗಿಯೇ ಅವರು ಸಿಎಂ ಆದರುʼ ಎಂದು ಅವರು ಹೇಳುತ್ತಾರೆ. ʼಅವರು ಆರ್‌ಎಸ್‌ಎಸ್‌ಗೆ ಸಂಪೂರ್ಣವಾಗಿ ಸ್ವೀಕಾರಾರ್ಹರಲ್ಲ. ಆರ್‌ಎಸ್‌ಎಸ್‌ನಲ್ಲಿರುವ ಕೆಲವು ವ್ಯಕ್ತಿಗಳು ಮಾತ್ರ ಅವರನ್ನು ಇಷ್ಟಪಡುತ್ತಾರೆ, ಆದ್ದರಿಂದ ಅವರು ಆರ್‌ಎಸ್‌ಎಸ್‌ನೊಳಗಿನ ಹೆಚ್ಚಿನ ಜನರಿಗೆ ಸ್ವೀಕಾರಾರ್ಹವಾಗಲು ಪ್ರಯತ್ನಿಸುತ್ತಿದ್ದಾರೆ. ಅವರು ಜನಪ್ರಿಯ ಅಥವಾ ಮಾಸ್ ಲೀಡರ್ ಅಲ್ಲ. ಯಡಿಯೂರಪ್ಪನವರ ಖ್ಯಾತಿಯ ಮೇಲೆ ಸವಾರಿ ಮಾಡಿದ್ದಾರೆ. ಸ್ವೀಕಾರಾರ್ಹತೆ ಪಡೆಯಲು ಹಿಂದುತ್ವ ಅವರಿಗೆ ಸುಲಭವಾದ ಶಾರ್ಟ್‌ಕಟ್ ಆಗಿದೆ” ಎಂದು ಸುಗತ ಹೇಳುತ್ತಾರೆ. ʼಪ್ರತಿಧ್ವನಿʼ ಜೊತೆ ಮಾತನಾಡಿದಾಗ ಸುಗತ ಇದನ್ನು ಸ್ಪಷ್ಟವಾಗಿ ತಿಳಿಸಿದರು.

ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ನಿರ್ಧಾರ ತೆಗೆದುಕೊಳ್ಳುವವರ ನಿರೀಕ್ಷೆಗೆ ತಕ್ಕಂತೆ ಯಶಸ್ಸನ್ನು ಕಂಡಿರುವ ಬೊಮ್ಮಾಯಿ ಈಗ ಯಡಿಯೂರಪ್ಪನವರ ನೆರಳಿನಿಂದ ಹೊರಬಂದು ಸ್ವಂತ ನಾಯಕನಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅವಲಂಬಿಸಲು ಯಾವುದೇ ಸಮೂಹದ ಹಿಂಬಾಲಕರಿಲ್ಲದ ಕಾರಣ, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹಿಂದುತ್ವ ಸಿದ್ಧಾಂತದ ಮೇಲೆ ಸವಾರಿ ಮಾಡುವುದು ಅವರ ಯೋಜನೆಯಾಗಿದೆ.

ʼದಿ ಹಿಂದೂʼ ಪತ್ರಿಕೆಯ ಹಿರಿಯ ವರದಿಗಾರ ಋಷಿಕೇಶ್ ಬಹದ್ದೂರ್ದೇಸಾಯಿ ʼಪ್ರತಿಧ್ವನಿʼಯೊಂದಿಗೆ ಮಾತನಾಡುತ್ತ,ʼಜನತಾ ಪರಿವಾರ ವಿಭಜನೆಯಾದಾಗ, ಉತ್ತರ ಕರ್ನಾಟಕದ ಜನತಾ ಪರಿವಾರದ ಬಹುತೇಕ ನಾಯಕರು ರಾಮಕೃಷ್ಣ ಹೆಗಡೆ ಜೊತೆ ಗುರುತಿಸಿಕೊಂಡರು. ಮುಂದೆ ಹೆಗಡೆ ಬಿಜೆಪಿ ಸೇರಿದ ನಂತರ, ಉತ್ತರ ಕರ್ನಾಟಕದ ಅವರ ಹಿಂಬಾಲಕರು ಬಿಜೆಪಿಗೆ ಸೇರಿದರು. ಬೊಮ್ಮಾಯಿ 2008ರವರೆಗೂ ಜೆಡಿಯು ಎಂದು ಗುರುತಿಸಿಕೊಂಡಿದ್ದರು. ಚುನಾವಣೆ ಸಮೀಪಿಸಿದಾಗ ಅವರು ಬಿಜೆಪಿ ಸೇರಿಕೊಂಡರು. ಆರ್ಎಸ್ಎಸ್ಗೆ ಕ್ರಮೇಣ ಹತ್ತಿರವಾಗುತ್ತ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರೆʼ ಎಂದು ಅಭಿಪ್ರಾಯ ಪಡುತ್ತಾರೆ.
ʼಪ್ರತಿಧ್ವನಿʼಗೆ ಪ್ರತಿಕ್ರಿಯಿಸಿದ ಇನ್ನೊಬ್ಬ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ, ʼಬೊಮ್ಮಾಯಿ ಆರ್ಎಸ್ಎಸ್ ಮೂಲದವರು ಅಲ್ಲದಿರುವುದೇ ಅವರ ಸಮಸ್ಯೆಯಾಗಿದೆ. ಪ್ರತಿದಿನವೂ ಅದನ್ನು ಪ್ರೂವ್ ಮಾಡಲು ಅವರು ಹೆಣಗಾಡುತ್ತಿದ್ದಾರೆ. ಹೀಗಾಗಿ ಅಪ್ಪಟ ಹಿಂದೂತ್ವವಾದಿ ಎಂದು ತೋರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಈ ಸಮಸ್ಯೆ ಇರಲಿಲ್ಲ. ಅವರು ಆರ್ಎಸ್ಎಸ್ ಮೂಲದಿಂದ ಬಂದವರುʼ ಎಂದು ತಿಳಿಸಿದರು.

ʼರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ನಾಗ್ಪುರದಿಂದ ಬಂದರೆ ಒಳ್ಳೆಯದುʼ ಎಂದು ಬೊಮ್ಮಾಯಿ ಹೇಳುತ್ತಾರೆ. ಯೋಗಿ ಆದಿತ್ಯನಾಥ್ ಸೇರಿದಂತೆ ಯಾವ ಬಿಜೆಪಿ ಸಿಎಂ ಕೂಡ ಹೀಗೆ ಹೇಳಿರಲಿಲ್ಲ! ಅಂದರೆ, ಬೊಮ್ಮಾಯಿ ಸಂಘ ಪರಿವಾರದ ವಿಶ್ವಾಸ ಪಡೆಯಲು ಇಂತಹ ಆಕ್ರಮಣಕಾರಿ ಹೇಳಿಕೆಗಳ ಮೊರೆ ಹೋಗುತ್ತಿದ್ದಾರೆ.
ʼಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಯಶಸ್ಸು ಹೆಚ್ಚುತ್ತಿರುವ ಕಾರಣ, ಬೊಮ್ಮಾಯಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಮುಂದುವರಿಸಲು ಹಿಂದೂತ್ವವನ್ನೇ ಬಂಡವಾಳ ಮಾಡಿಕೊಂಡಿದ್ದಾರೆʼ ಎಂದು ಜೆಡಿಎಸ್ನ ವೈಎಸ್ವಿ ದತ್ತಾ ಮೀಡಿಯಾವೊಂದಕ್ಕೆ ಹೇಳಿದ್ದು ಗಮನಾರ್ಹವಾಗಿದೆ.
ಒಟ್ಟಿನಲ್ಲಿ, ಅಧಿಕಾರ, ರಾಜಕೀಯ ಕೆರಿಯರ್ಗಾಗಿ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಲೇ ಬಂದ ಬೊಮ್ಮಾಯಿ ಪಕ್ಕಾ ಅವಕಾಶವಾದಿ ಎಂಬುದರಲ್ಲಿ ಎರಡು ಮಾತಿಲ್ಲ.

ನವೆಂಬರ್ 13 ರಂದು, ‘ಬಲವಂತದ ಮತಾಂತರ’ದ ವಿರುದ್ಧ ಕಾನೂನು ಜಾರಿಗೆ ತನ್ನಿ ಎಂದು ಹಿಂದೂತ್ವವಾದಿ ನಿಯೋಗವೊಂದು ಸಿ.ಎಂ.ಬೊಮ್ಮಾಯಿ ಅವರನ್ನು ಭೇಟಿ ಮಾಡಿತ್ತು. ಸಿಎಂ ಪಕ್ಕದಲ್ಲಿಯೇ ಕುಳಿತಿದ್ದ ಪ್ರಮೋದ್ ಮುತಾಲಿಕ್ ಕುಖ್ಯಾತ ಮಂಗಳೂರು ಪಬ್ ದಾಳಿಯ ಹಿಂದಿನ ಸಂಘಟನೆಯ ಮುಖ್ಯಸ್ಥರು!

ಹಿಂದೊಮ್ಮೆ ಅಪ್ಪನ ನೆರಳಲ್ಲಿ ಜನತಾ ಪರಿವಾರದಲ್ಲಿ ಸಮಾಜವಾದಿ ನಿಲುವುಗಳನ್ನು ಅನಸರಿಸುತ್ತಿದ್ದ ಬೊಮ್ಮಾಯಿ, ವಿಧಾನ ಪರಿಷತ್ನಲ್ಲಿ ಬಿಜೆಪಿ, ಸಂಘ ಪರಿವಾರದ ಸಿದ್ದಾಂತಗಳ ವಿರುದ್ಧ ಪ್ರಖರವಾಗಿ ಮಾತನಾಡಿದ್ದ ಬೊಮ್ಮಾಯಿ…..ಈಗ ಅದೇ ಸಂಘ ಪರಿವಾರದ ಸೇವಕ, ಅವರೀಗ ಹಿಂದುತ್ವದ ಪ್ರಖರ ಪ್ರತಿಪಾದಕ. ಹಿಂದಿನ ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಆರ್ಎಸ್ಎಸ್ ಮೂಲದವರಾಗಿದ್ದರೂ, ಬೊಮ್ಮಾಯಿಯಷ್ಟು ಪ್ರಖರವಾಗಿ ಹಿಂದೂತ್ವದ ಕುರಿತು ಬಹಿರಂಗ ಹೇಳಿಕೆ ನೀಡಿರಲಿಲ್ಲ!

Tags: Basavaraj BommaiBJPಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

CAAಗೆ ಎರಡು ವರ್ಷ: ಬೀದಿಗಳಿಂದ ನ್ಯಾಯಾಲಯಕ್ಕೆ ಸ್ಥಳಾಂತರಗೊಂಡ ಹಲವು ಪ್ರತಿಭಟನಾಕಾರರ ಹೋರಾಟ

Next Post

ಶಿವಮೊಗ್ಗ ಘಟನೆ : ಕರಾವಳಿಯಿಂದ ಮಲೆನಾಡಿಗೆ ವಿಸ್ತರಿಸಿದ ನೈತಿಕ ಪೊಲೀಸ್ ಗಿರಿ!

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಶಿವಮೊಗ್ಗ ಘಟನೆ : ಕರಾವಳಿಯಿಂದ ಮಲೆನಾಡಿಗೆ ವಿಸ್ತರಿಸಿದ ನೈತಿಕ ಪೊಲೀಸ್ ಗಿರಿ!

ಶಿವಮೊಗ್ಗ ಘಟನೆ : ಕರಾವಳಿಯಿಂದ ಮಲೆನಾಡಿಗೆ ವಿಸ್ತರಿಸಿದ ನೈತಿಕ ಪೊಲೀಸ್ ಗಿರಿ!

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada