ಹುಬ್ಬಳ್ಳಿಯಲ್ಲಿ (Hubli) ನಡೆದ ಅಂಜಲಿ (Anjali)ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಅಂಜಲಿ ಅಂಬಿಗೇರ (Anjali ambigera) ಆರೋಪಿ ಗಿರೀಶ್ (Girish) ಜೊತೆಗೆ ಮದುವೆಯಾಗಿದ್ದಳು ನಂತರ ಆತನನ್ನು ತೊರೆದು ಊರಿಗೆ ಬಂದು ನೆಲೆಸಿದ್ದಳು ಎಂದು ಈ ಹಿಂದೆ ಹೇಳಲಾಗಿತ್ತು .ಇದೀಗ ಈ ಪ್ರಕರಣದಲ್ಲಿ ಹೊಸದೊಂದು ವಿಚಾರ ಬೆಳಕಿಗೆ ಬಂದಿದೆ.
ಅಂಜಲಿ ಅಂಬಿಗೇರ ಇತರೆ ಯುವಕರ ಜೊತೆ ಫೋನ್ (Phone) ನಲ್ಲಿ ಮಾತನಾಡುತ್ತಿದ್ದಳು ಎಂಬುದು ಆರೋಪಿ ಗಿರೀಶನ ಕೋಪಕ್ಕೆ ಕಾರಣವಾಗಿತ್ತಂತೆ. ಹೀಗಾಗಿ ರೊಚ್ಚಿಗೆದ್ದ ಆತ ಒಂದೆರಡು ಬಾರಿ ವಾರ್ನಿಂಗ್ (Warning) ಕೂಡ ಮಾಡಿದ್ದನಂತೆ ಅಂತಿಮವಾಗಿ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ಗೆ (CID) ವಹಿಸಿದ್ದು ತನಿಖೆ ಚುರುಕುಗೊಂಡಿದೆ ಕರ್ತವ್ಯ ಲೋಕದ ಆರೋಪದಡಿ ಪೊಲೀಸ್ (Police) ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದ್ದು ತನಿಕೆ ಗಂಭೀರ ಸ್ವರೂಪ ಪಡೆದುಕೊಂಡಿದೆ ಸಿಐಡಿ ತನಿಕೆಯಿಂದ ಇನ್ನೂ ಯಾವೆಲ್ಲ ವಿಚಾರಗಳು ಬೆಳಕಿಗೆ ಬರಲಿದೆಯೋ ಕಾದು ನೋಡಬೇಕಿದೆ.