• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢ : ಸೋಂಕಿತರ ಹಿನ್ನಲೆ ಏನು ?

ಕರ್ಣ by ಕರ್ಣ
December 2, 2021
in ಕರ್ನಾಟಕ
0
ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢ : ಸೋಂಕಿತರ ಹಿನ್ನಲೆ ಏನು ?
Share on WhatsAppShare on FacebookShare on Telegram

ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿಕೊಂಡ ಕೊರೋನಾ ರೂಪಾಂತರಿ ಒಮಿಕ್ರಾನ್ ಇದೀಗ ನಮ್ಮ ಬೆಂಗಳೂರಲ್ಲೂ ಪತ್ತೆಯಾಗಿದೆ. ಜಗತ್ತಿನ ಯಾವ ಮೂಲೆಯಲ್ಲೂ ಹುಟ್ಟಿಕೊಂಡರೂ ಬೆಂಗಳೂರಿಗೆ ಅಪಾಯ ತಪ್ಪಿದ್ದಲ್ಲ ಎನ್ನಲು ಈಗ ಹೊಸದೊಂದು ಸಾಕ್ಷ್ಯ ಸಿಕ್ಕಿದೆ. ಒಮಿಕ್ರಾನ್ ಪತ್ತೆಯಾಗುತ್ತಿದ್ದಂತೆ ಇತ್ತ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಹೊಸ ತಲೆ ನೋವು ಶುರವಾಗಿದೆ. ಅಷ್ಟಕ್ಕೂ ಒಮಿಕ್ರಾನ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಯಾರಲ್ಲಿ.? ಆ ಸೋಂಕಿತರ ಹಿನ್ನೆಲೆ ಏನು..?

ADVERTISEMENT

ಇಬ್ಬರಿಗೆ ಒಮಿಕ್ರಾನ್ ಸೋಂಕು.. ಹೆಚ್ಚಿದ ಆತಂಕ.!!

ಕೊರೋನಾ ಹೊಸ ಅವತಾರವೆತ್ತಿ ಮತ್ತೆ ದಾಂಗುಡಿ ಇಟ್ಟಿದೆ. ಡೆಲ್ಟಾ ಪ್ಲಸ್ ರೂಪಾಂತರಿ ರೌದ್ರನರ್ತನಕ್ಕೆ ನಲುಗಿ ಹೋಗಿದ್ದ ಜನರು ಇದೀಗ ಕೊರೋನಾದ ಹೊಸಾವತಾರ ಒಮಿಕ್ರಾನ್ ಭೀತಿಯಲ್ಲಿ ಬದುಕುವಂತಾಗಿದೆ.  ನವೆಂಬರ್ 23ರಂದು ಚೊಚ್ಚಲವಾಗಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ B.1.1529 ಹೆಸರಿನ ಒಮಿಕ್ರಾನ್ ವೈರಸ್ ಇದೀಗ ಬೆಂಗಳೂರಿನಲ್ಲೂ ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಇದು ದೇಶದ ಚೊಚ್ಚಲ ಪ್ರಕರಣವಾಗಿದ್ದು, ಇಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ನವೆಂಬರ್ 20ರಂದು ದಕ್ಷಿಣ ಆಫ್ರಿಕಾ ಮೂಲದ 66 ವರ್ಷದ ವ್ಯಕ್ತಿಗೆ ಹಾಗೂ ಬೆಂಗಳೂರು ನಿವಾಸಿಯಾಗಿರುವ 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ಈ ಮೂಲಕ ಕೊರೋನಾ ಮೂರನೇ ಅಲೆಯ ಭೀತಿಯನ್ನು ಇಮ್ಮಡಿ ಮಾಡಿದೆ.

ದಕ್ಷಿಣ ಆಫ್ರಿಕಾ ಮೂಲದ ಒಬ್ಬರಿಗೆ.. ಬೆಂಗಳೂರು ನಿವಾಸಿ ಒಬ್ಬರಿಗೆ ಒಮಿಕ್ರಾನ್ ದೃಢವಾಗಿದೆ. ನವೆಂಬರ್ 20 ರಂದು ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿ ನಗರಕ್ಕೆ ಆಗಮಿಸಿದ್ದು ಕೊರೋನಾ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಿಸಿ ಅವರ ಸ್ಯಾಂಪಲ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ‌ ಕಳುಹಿಸಲಾಗಿತ್ತು. ಆದರೆ ಗುಣಲಕ್ಷಣಗಳು ಗುಣವಾದ ಹಿನ್ನೆಲೆ ಮರು ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕಾರಣ, ಅವರು ದುಬೈಗೆ ತೆರಳಿದ್ದಾರೆ. ಈ ವ್ಯಕ್ತಿಯಲ್ಲಿ 24 ಮಂದಿ ಪ್ರಾಥಮಿಕ ಸಂಪರ್ಕ ಹಾಗೂ 240 ಸೆಕೆಂಡರಿ ಕ್ಯಾಂಟಾಕ್ಟ್ ಗುರುತಿಸಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಬಂದಿದ್ದು ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ 45 ವರ್ಷದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಸೋಂಕು ಈಗ ಆತಂಕ ಇಮ್ಮಡಿ ಮಾಡಿದೆ. 

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಒಮಿಕ್ರಾನ್ ಪತ್ತೆ.!!

ಈ 45 ವರ್ಷದ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಮೂಲತಃ ಬೆಂಗಳೂರಿನವರೇ ಆಗಿರುವ ಈ ಸೋಂಕಿತನಿಗೆ ಪ್ರಯಾಣದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಸೋಂಕು ಕಾಣಿಸಿಕೊಂಡಿದ್ದು ಬಹಳಷ್ಟು ಆತಂಕಕ್ಕೆ ಕಾರಣವಾಗಿದೆ. ನವೆಂಬರ್  22 ರಂದು ಇವರಿಗೆ ಪರೀಕ್ಷೆ ನಡೆಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಸೋಂಕು ದೃಢವಾಗಿದೆ. ಇವರಲ್ಲಿ 13 ಮಂದಿ ಪ್ರೈಮರಿ ಸಂಪರ್ಕ ಹಾಗೂ 205 ಮಂದಿ ಸೆಕೆಂಡರಿ ಸಂಪರ್ಕ ಎಂದು ಒಟ್ಟು 218 ಮಂದಿಯನ್ನು ಪರೀಕ್ಷೆ ಒಳಪಡಿಸಲಾಗಿದೆ. ಈ ವೇಳೆ ಈ ಪೈಕಿ 5 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು, ಇವರ ಸ್ಯಾಂಪಲ್ಸ್ ಅನ್ನೂ ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ. ಈ 45 ವರ್ಷದ ವ್ಯಕ್ತಿ ಹಾಗೂ ಇವರ ಸಂಪರ್ಕ ಎಂದು ಗುರುತಿಸಲಾಗಿರುವ 5 ಮಂದಿ ಇದೀಗ ಬೆಂಗಳೂರಿಗರ ಆತಂಕ ಇಮ್ಮಡಿಯಾಗುವಂತೆ ಮಾಡಿದ್ದಾರೆ.

ಎರಡು ಡೋಸ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್ ದೃಢ.!!

ಇನ್ನು ಈಗ ಒಮಿಕ್ರಾನ್ ದೃಢವಾಗಿರುವ ಇಬ್ಬರು ಸೋಂಕಿತರೂ ಕೂಡ ಎರಡು ಡೋಸ್ ಲಸಿಕೆ ಪಡೆದವರೇ ಆಗಿದ್ದಾರೆ. ಹೀಗಾಗಿ ಲಸಿಕೆ ಸೋಂಕಿನ ತೀವ್ರತೆಯನ್ನಷ್ಟೇ ಕಡಿಮೆ ಮಾಡಬಲ್ಲದು ಎಂದು ಹೇಳಬಹುದು. ಸದ್ಯ ಸ್ಥಳೀಯವಾಗಿದ್ದ 45 ವರ್ಷದ ಸೋಂಕಿತನಿಗೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಅಲ್ಲದೆ ಸದ್ಯಕ್ಕೆ ಬಿಬಿಎಂಪಿ ಒಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಒಟ್ಟಾರೆ ದೂರದ ಆಫ್ರಿಕಾದಲ್ಲಿ ಕಾಣಿಸಿಕೊಂಡ ಒಮಿಕ್ರಾನ್ ಇದೀಗ ನಮ್ಮ ಬೆಂಗಳೂರಿಗೂ ಆಗಮಿಸಿದೆ. ಹೀಗಾಗಿ ಜನರು ಆದಷ್ಟು ತಮ್ಮ ತಮ್ಮ ಎಚ್ಚರಿಕೆಯಲ್ಲಿ ಇರುವುದು ಒಳಿತು. 

Tags: Covid 19Delta plus variantಕರೋನಾಕೋವಿಡ್-19
Previous Post

ನಟಿಯಾದಳು ಗರ್ಭಿಣಿ, ಬಿಟಿವಿಯಲ್ಲಿ ಉಲ್ಲಾಸದ ಹೂಮಳೆ: ಒಂದು ಬಾರ್ಕಿಂಗ್ ನ್ಯೂಸ್ ಕತೆ

Next Post

ಗೋಕಳ್ಳತನ ತಡೆಗಟ್ಟಲು ಸರ್ಕಾರ ವಿಫಲ, ಪೊಲೀಸರೇ ಶಾಮೀಲು ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಗೋಕಳ್ಳತನ ತಡೆಗಟ್ಟಲು ಸರ್ಕಾರ ವಿಫಲ, ಪೊಲೀಸರೇ ಶಾಮೀಲು ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಗೋಕಳ್ಳತನ ತಡೆಗಟ್ಟಲು ಸರ್ಕಾರ ವಿಫಲ, ಪೊಲೀಸರೇ ಶಾಮೀಲು ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

Please login to join discussion

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada