ಕರೋನಾದ ಹೊಸ ತಳಿ ಇದೀಗ ಮತ್ತೆ ಬಲಾಢ್ಯ ರಾಷ್ಟಗಳನ್ನ ಗಢಗಢ ನಡಿಗುಸುವಂತೆ ಮಾಡಿದೆ. 14 ರಾಷ್ಟಗಳಿಗೆ ಒಮಿಕ್ರಾನ್ ವೈರಸ್ ವಕ್ಕರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಒಂದು ಕಡೆ ಚಿಂತೆಗೆ ಬಿದ್ದಿದ್ದರೆ ಇತ್ತ ಬಿಬಿಎಂಪಿ ಆಗಲೇ ಫಿಲ್ಡಿಗಿಳಿದು ಮೂರನೇ ಅಲೆ ಬರದಂತೆ ತಡೆಯಲು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ನಾಳೆ ಆರೋಗ್ಯ ಸಚಿವ ಸುಧಾಕರ್ ಇಂದು ಮಂಗಳವಾರ ಮಹತ್ವದ ಮಹತ್ವದ ಸಭೆಯನ್ನೂ ನಡೆಸಲಿದ್ದಾರೆ.
ಹೊಸ ಅವತಾರದಲ್ಲಿ ವಕ್ಕರಿಸಿದ ಕರೋನಾ.. ಒಮಿಕ್ರಾನ್ ಕಂಟಕ!
ಇಡೀ ಮನುಕುಲದಲ್ಲೇ ಇದೀಗ ಹೊಸ ತಳಿ ವೈರಸ್ ಸದ್ದು ಶುರುವಾಗಿದೆ. ದಿನೇ ದಿನೇ ಹೊಸ ತಳಿ ಒಮಿಕ್ರಾನ್ ವೈರಸ್ ತನ್ನ ಕಬಂಧಬಾಹುಗಳನ್ನ ಚಾಚತೊಡಗಿದೆ. ಒಟ್ಟು 14 ದೇಶಗಳಿಗೆ ಈಗಾಗಲೇ ವಕ್ಕರಿಸಿದ್ದು, ಇದೀಗ ಗಾರ್ಡನ್ ಸಿಟಿಗೆ ಕಂಟವಾಗಲಿದೆಯಾ ಅನ್ನೋ ಭೀತಿ ಎಲ್ಲರಲ್ಲೂ ಶುರುವಾಗಿದೆ. ದಕ್ಷಿಣ ಆಫ್ರಿಕಾದಿಂದ 95 ಪ್ರಯಾಣಿಕರು ರಾಜಧಾನಿಗೆ ಕಾಲಿರಿಸಿದ್ದು, ಅವರುಗಳಲ್ಲಿ ಇಬ್ಬರಿಗೆ ಕರೋನಾ ಪಾಸಿಟಿವ್ ಎಂದು ದೃಢವಾಗಿದೆ. ಈ ಮೂಲಕ ಸರ್ಕಾರಗಳಿಗೂ ತಲೆ ನೋವು ಶುರುವಾಗಿದೆ. ಪಾಸಿಟಿವ್ ಬಂದಿರುವ ಪ್ರವಾಸಿಗರಿಗೆ ಕರೊನಾ ಟೆಸ್ಟ್ ಮಾಡಲಾಗಿದ್ದು, ಸ್ಯಾಂಪಲ್ಗಳನ್ನ ಜೆನೆಮಿಕ್ ಸೀಕ್ವೆನ್ಸಿಂಗ್ಗೆ ಕಳಸಲಾಗಿದೆ. ಇನ್ನೂ ಇವ್ರ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳ ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ತಜ್ಞರ ಜೊತೆ ಆರೋಗ್ಯ ಸಚಿವರು ಮಹತ್ವದ ಸಭೆ!
ಹೊಸ ತಳಿ ಬಗ್ಗೆ ತಲೆ ಕೆಡಸಿಕೊಂಡಿರೋ ರಾಜ್ಯ ಸರ್ಕಾರ ಇದನ್ನ ಹೇಗಾದ್ರು ಮಾಡಿ ರಾಜ್ಯದ ಗಡಿಯಿಂದಾಚೆಗೆ ಇಡಬೇಕೆಂದು ಸರ್ಕಾರ ಕಸರತ್ತು ನಡೆಸುತ್ತಿದೆ. ಹೀಗಾಗಿ ಆರೋಗ್ಯ ಸಚಿವರು ತಾಂತ್ರಿಕ ಸಲಹಾ ಸಮಿತಿ ಜೊತೆ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು, ನಾಳೆ ಅಧಿಕಾರಿಗಳ ಜೊತೆ ಸುಧಿರ್ಘವಾಗಿ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಮಾತನಾಡಿದ್ದಾರೆ. ಅವರನ್ನು ಕೂಡ ನಾಳೆ ಸಭೆಗೆ ಕರೆದಿದ್ದೇನೆ ಎಂದರು. ಜೊತೆಗೆ ಹೊಸ ತಳಿ ಹೇಗೆ ಕೆಲಸ ಮಾಡುತ್ತೆ ಅಂತ ಡಿಸೆಂಬರ್ 1ಕ್ಕೆ ಗೊತ್ತಾಗಲಿದೆ. ಅಲ್ದೆ ಅಂತರಾಷ್ಟ್ರೀಯ ವಿಮಾನಗಳು ರಾಜ್ಯಕ್ಕೂ ಬರ್ತಿವೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನುಳಿದಂತೆ ಲಾಕ್ಡೌನ್ ಬಗ್ಗೆ ಸರ್ಕಾರ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಈಗಾಗಲೇ ಜನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಇದಿರಿಂದ ಚೇತರಿಕೆ ಕಂಡಿಲ್ಲ. ಜೊತೆಗೆ ಉದ್ಯೋಗ ಕಳೆದುಕೊಂಡಿದ್ದು, ಇನ್ನೂ ಉದ್ಯೋಗ ಸಿಗದೆ ಪರದಾಟದಲ್ಲಿದ್ದಾರೆ. ಸದ್ಯಕ್ಕೆ ಲಾಕ್ಡೌನ್ ಇಲ್ಲ ಎಂದು ತಿಳಿಸಿದರು.
ಒಮಿಕ್ರಾನ್ ಬಡಿದೋಡಿಸಲು ಬಿಬಿಎಂಪಿ ಕಸರತ್ತು!
ಇನ್ನು ಈ ಡೆಡ್ಲಿ ಒಮಿಕ್ರಾನ್ನ ಕೆಂಗಣ್ಣು ಬೆಂಗಳೂರಿನ ಮೇಲೆ ಬೀಳದಿರಲಿ ಎಂಬ ಆಶಯದಿಂದ ಬಿಬಿಎಂಪಿ ಈಗೀಂದೀಗಲೇ ಫೀಲ್ಡಿಗಿಳಿದಿದೆ. ಎರಡನೇ ಅಲೆಯಲ್ಲಿ ನಡೆಸುತ್ತಿದ್ದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ.
- ಮೊಬೈಲ್ ಟೆಸ್ಟಿಂಗ್ ಸೆಂಟರ್ ಪುನರಾರಂಭ
- ಮೊಬೈಲ್ ಲಸಿಕಾ ಕೇಂದ್ರಗಳ ಹೆಚ್ಚಳ
- ಕೇರಳ ವಿಧ್ಯಾರ್ಥಿಗಳಿರುವ ಹಾಸ್ಟೆಲ್, ಪಿಜಿಗಳ ಮೇಲೆ ನಿಗಾ
- ಬೆಂಗಳೂರು ಗಡಿಭಾಗದಲ್ಲಿ 24*7 ಕಟ್ಟೆಚ್ಚರ
- ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್ಸ್ ನಿಯೋಜನೆ
- ಸೋಂಕು ಪತ್ತೆಯಾದ ಮನೆ ಹಾಗೂ ವಠಾರ ತಕ್ಷಣವೇ ಸ್ಯಾನಿಟೈಸ್
- ಮನೆ ಮನೆಗೆ ತೆರಳಿ ಲಸಿಕೆ ಅಭಿಯಾನ
- ಹೋಟೇಲು, ರೆಸ್ಟೋರೆಂಟ್ಗಳು, ಚಿತ್ರಮಂದಿರಗಳ ಸಿಬ್ಬಂದಿಗಳ ಸಂಪೂರ್ಣ ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸುವುದು
- ನಗರದ ರೈಲ್ವೇ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ಪಾಲಿಕೆ ಆರೋಗ್ಯ ಸಿಬ್ಬಂದಿಗಳು
- ವಾರ್ಡ್ ಮಟ್ಟದಲ್ಲಿ ಆಟೋಗಳಿಗೆ ಧ್ವನಿ ವರ್ಧಕ ಕಟ್ಟಿ ಒಮಿಕ್ರಾನ್ ಬಗ್ಗೆ ತಿಳುವಳಿಕೆ
ಒಟ್ಟಾರೆ ದಕ್ಷಿಣ ಆಫ್ರಿಕಾದ ಈ ವೈಸರ್ ಮತ್ತೆ ಎರಡು ವರ್ಷದ ಕಹಿ ಘಟನೆ ನೆನಪು ಮಾಡ್ತಿದ್ದು, ನೊಂದು ಬೆಂದ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ನಾಳೆ ಸಭೆ ಬಳಿಕ ಮತ್ತೆ ಒಮಿಕ್ರಾನ್ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡುವ ಸಾಧ್ಯತೆಯೂ ಇದೆ.