ಮೂರನೇ ಅಲೆ ಆರಂಭವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ದೃಢವಾಗುತ್ತಿದೆ. ಈ ನಡುವೆ ದೇಶದಲ್ಲಿ ಸಮುದಾಯಕ್ಕೆ ಕೊರೋನಾ ಭೀಕರವಾಗಿ ಹರಡಿದೆ ಎಂದು ಅಧ್ಯಯನ ವರದಿಯೊಂದು ದೃಢ ಪಡಿಸಿದೆ.
ಕೊರೋನಾ ಭಾರತದಲ್ಲಿ ಕಮ್ಯೂನಿಟಿ ಲೆವೆಲ್ ಗೆ ಹರಡಿದ್ಯಾ? ಇಲ್ವಾ? ಎನ್ನುವ ಸಂಶಯ ಗಾಢವಾಗಿತ್ತು. ಕೊರೋನಾ ಜೊತೆಗೆ ಓಮೈಕ್ರಾನ್ ಕೂಡ ಹೆಚ್ಚೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ವೈರಾಣುವಿನ ಈ ಎರಡು ಪ್ರಭೇದಗಳು ಸಮುದಾಯಕ್ಕೆ ಎಲ್ಲೆ ಮೀರಿ ಹಬ್ಬಿದೆ ಎಂಬ ಅನುಮಾನವಿತ್ತು. ಆದರೆ ದೇಶದಲ್ಲಿ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿರಲಿಲ್ಲ. ಇದೀಗ ದೇಶದಲ್ಲಿ ಕೊರೋನಾದ ಡೆಲ್ಟಾ ಹಾಗೂ ಓಮೈಕ್ರಾನ್ ಪ್ರಭೇದಗಳು ಸಮುದಾಯಕ್ಕೆ ಹರಡಿದೆ ಎಂದು ಅಧ್ಯಯನವೊಂದು ನಿಚ್ಚಳವಾಗಿಸಿದೆ.
ಸಮುದಾಯಕ್ಕೆ ಹರಡಿರುವುದು ಖಚಿತವಾಗಿದ್ದು ಹೇಗೆ?
ಸಮುದಾಯಕ್ಕೆ ಹರಡಿದ್ಯಾ ಎನ್ನುವ ಬಗ್ಗೆ ಮೊದಲ ಅಧ್ಯಯನ ವರದಿ ಇದಾಗಿದ್ದು, ಅಧ್ಯಯನ ವರದಿಯಲ್ಲಿ ಓಮೈಕ್ರಾನ್ ಹಾಗೂ ಡೆಲ್ಟಾ ಎಷ್ಟರ ಪ್ರಮಾಣದಲ್ಲಿ ಸಮುದಾಯಕ್ಕೆ ಹರಡಿದೆ ಗೊತ್ತಾಗಿದೆ. ನವದೆಹಲಿಯ ಕ್ಲಿನಿಕಲ್ ಡಿಪಾರ್ಟ್ಮೆಂಟ್ ಆಫ್ ವೈರಾಲಜಿಯಿಂದ ಅಧ್ಯಯನ ನಡೆದಿದ್ದು, ಸೋಂಕಿತರ ಟ್ರಾವೆಲ್ ಹಿಸ್ಟರಿ ಆಧರಿಸಿ ಸಮುದಾಯಕ್ಕೆ ಹರಡಿದ್ಯಾ..? ಇಲ್ವಾ..? ಎಂಬುದನ್ನು ನಿರ್ಧರಿಸಿ ಪತ್ತೆ ಮಾಡಿದ್ದಾರೆ.
ನವೆಂಬರ್ 25 ರಿಂದ ಡಿಸೆಂಬರ್ 23ರ ವರೆಗೆ 262 ಕೇಸ್ ಗಳನ್ನ ಅಧ್ಯಯನ ಮಾಡಿ ವರದಿ ತಯಾರು ಮಾಡಲಾಗಿದೆ ಎಂದು ವರದಿಯಾಗಿದೆ. ಆರಂಭದಲ್ಲಿ 262 ಕೇಸ್ ಗಳ ಸ್ಯಾಂಪಲ್ಸ್ ಅನ್ನು ಜಿನೋಮಿಕ್ಸ್ ಸೀಕ್ವೆನ್ಸ್ ಟೆಸ್ಟ್ಗೆ ಒಳಪಡಿಸಲಾಯ್ತು. ಈ ವೇಳೆ 262 ಪ್ರಕರಣಗಳಲ್ಲಿ 182 ಡೆಲ್ಟಾ ವೇರಿಯಂಟ್ ಸೋಂಕು ಇರುವುದು ದೃಢವಾಯಿತು. ಅಲ್ಲದೆ 80 ಮಂದಿಯ ಸ್ಯಾಂಪಲ್ಸ್ ಓಮೈಕ್ರಾನ್ ಪಾಸಿಟಿವ್ ಎಂದು ಬಂದಿತ್ತು.
ದೆಹಲಿಯಲ್ಲಿ ಮೊದಲು, ನಂತರ ತೀಕ್ಷ್ಣವಾಗಿ ಹರಡಿದ ಸೋಂಕು.!!
ಈ 262 ಕೇಸ್ ಗಳಲ್ಲಿ ಎಷ್ಟು ಜನಕ್ಕೆ ಟ್ರಾವೆಲ್ ಹಿಸ್ಟರಿ ಇತ್ತು ಮತ್ತು ಎಷ್ಟು ಮಂದಿಗೆ ಇರಲಿಲ್ಲ ಎಂಬುವುದನ್ನು ಪತ್ತೆ ಮಾಡಿದಾಗ ಸಮುದಾಯಕ್ಕೆ ಸೋಂಕು ಹರಡಿರುವುದು ದೃಢವಾಗಿದೆ. ಇದರಲ್ಲಿ 30% ಟ್ರಾವೆಲ್ ಹಿಸ್ಟರಿ ಹೊಂದಿದ್ರೇ 70% ಟ್ರಾವೆಲ್ ಹಿಸ್ಟರಿ ಇಲ್ಲದವರೇ ಇರೋದು ಗೊತ್ತಾಗಿದೆ. ದೆಹಲಿಯಲ್ಲಿ ನವೆಂಬರ್ 25 ಡಿಸೆಂಬರ್ 23ರ ಹೊತ್ತಿಗಾಗಲೇ 3 ನೇ ಅಲೆ ಶುರುವಾಗಿತ್ತು ಎಂದು ಇದೇ ವೇಳೆ ಸಂಶೋಧಕರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ದೆಹಲಿಯಲ್ಲಿ ಮೂರನೇ ಅಲೆ ಶುರುವಾಗಿ ಒಂದೂವರೆ ತಿಂಗಳ ನಂತರ ಇಡೀ ದೇಶಕ್ಕೆ ಸೋಂಕು ತೀವ್ರವಾಗಿ ಪಸರಿಸಿದ್ದು, ಕೆಲವೇ ದಿನಗಳ ಅಂತರದಲ್ಲಿ ಸಮುದಾಯಕ್ಕೂ ಕೊರೋನಾ ಹರಡಿ ಎಂಬುದು ನಿಖರವಾಗಿದೆ. ಡಿಸೆಂಬರ್ ಮಧ್ಯಭಾಗದಲ್ಲೇ ಕರ್ನಾಟಕದಲ್ಲೂ ಸಮುದಾಯಕ್ಕೆ ಸೋಂಕು ಹರಡಿ ಕೊರೋನಾ ಮೂರನೇ ಅಲೆ ಟೇಕ್ ಆಫ್ ಆಗಿತ್ತು. ಆದರೆ ಮೂರನೇ ಅಲೆಯಲ್ಲಿ ಸೋಂಕು ಮೈಲ್ಡ್ ಡಿಸೀಸ್ ಆಗಿರೊದ್ರಿಂದ ಓಮೈಕ್ರಾನ್ ಬಗ್ಗೆ ಭಯಪಡೋದು ಬೇಡ ಅಂತಾರೆ ವೈದ್ಯರು. ಆದರೆ ಓಮೈಕ್ರಾನ್ ಸೇರಿದಂತೆ ಹಳೆಯ ರೂಪಾಂತರಿಗಳ ಬಗ್ಗೆ ನಿರ್ಲಕ್ಷ್ಯ ಮಾಡದಂತೆ ವೈದ್ಯಕೀಯ ಸಂಶೋಧಕರು ಸಲಹೆ ನೀಡಿದ್ದಾರೆ.













