ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಓಮಿಕ್ರಾನ್ ರೂಪಾಂತರಿ ಮೂರನೇ ಅಲೆಯ ಮುನ್ಸೂಚನೆ ನೀಡಿದೆ. ಇತ್ತ ದೈನಂದಿನ ಸೋಂಕಿನ ಪ್ರಕರಣಗಳಲ್ಲಿ ತೀವ್ರ ಗತಿಯ ಏರಿಕೆ ಕಂಡಿದ್ದು, ಜನರನ್ನು ಆತಂಕಕ್ಕೆ ದೂಡಿದೆ.
ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರಿಯ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಂದು ದೆಹಲಿಯಲ್ಲಿ ಕೋವಿಡ್-19 ಮಾದರಿಗಳಲ್ಲಿ ಶೇ.84 ರಷ್ಟು ಜನರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ.
ಸೋಮವಾರ ಸಂಜೆ ಬಿಡುಗಡೆಯಾಗಲಿರುವ ಹೆಲ್ತ್ ಬುಲೆಟಿನ್ ನಲ್ಲಿ ದೆಹಲಿಯಲ್ಲಿ ಇಂದು ಸುಮಾರು 4,000 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿನ ದರವು ಶೇ.6.5%ಗೆ ಏರಿಕೆಯಾಗಿದೆ.
