ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿಢೀರ್ ಹೆಚ್ಚಳ ಆಗಲು ಒಮಿಕ್ರಾನ್ ನ 9 ರೂಪಾಂತರಿ ಪ್ರಭೇದಗಳು ಪತ್ತೆಯಾಗಿವೆ ಎಂದು ಸರಕಾರದ ಮೂಲಗಳು ಹೇಳಿವೆ.
ದೆಹಲಿಯಲ್ಲಿ ಕಂಡು ಬಂದಿರುವ ಒಮಿಕ್ರಾನ್ ರೂಪಾಂತರಿಯ 9 ತಳಿಗಳನ್ನು ಹೆಚ್ಚಿನ ಸಂಶೋಧನೆಗೆ ಕಳುಹಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಮಿಕ್ರಾನ್ ರೂಪಾಂತರ ಬಗ್ಗೆ ಎಚ್ಚರಿಕೆ ನೀಡಿದೆ. ಆದರೆ ಹೊಸ ತಳಿಗಳು ಹೆಚ್ಚು ಅಪಾಯಕಾರಿ ಅಲ್ಲ ಎಂದು ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ 5 ಹೊಸ ತಳಿಗಳನ್ನು ಜಗತ್ತಿನಾದ್ಯಂತ ಪತ್ತೆ ಹಚ್ಚಿದೆ. ಆದರೆ ದೆಹಲಿಯಲ್ಲಿ 9 ತಳಿಗಳು ಪತ್ತೆಯಾಗಿರುವುದರ ಬಗ್ಗೆ ಪರಿಶೀಲನೆ ನಡೆಸಲಿದೆ.