ಓಮಿಕ್ರಾನ್ ಈ ಬಾರಿಯ ಹೊಸ ವರ್ಷಾಚರಣೆಗೂ ಕೊಳ್ಳಿ ಇಡಲಿದೆ. ಈಗಾಗಲೇ ಯಾವುದೇ ಕಾರಣಕ್ಕೂ ಹೊಸ ವರ್ಷಾಚರಣೆಗೆ ಅನುಮತಿ ಕೊಡಬಾರದು ಎಂದು ತಜ್ಞರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಎರಡಿದ್ದ ಓಮೈಕ್ರಾನ್ ಸೋಂಕು ಈಗ 14ಕ್ಕೆ ಬಂದು ನಿಂತಿದೆ. ಇನ್ನೂ ಹಲವರ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿ ಬರುವುದಿದ್ದು ರಾಜ್ಯ ಆರೋಗ್ಯ ಇಲಾಖೆ ವರದಿ ಎದುರು ನೋಡುತ್ತಿದ್ದೆ. ಇದರ ಮಧ್ಯೆ ಅವಕಾಶ ಕೊಡಲೇ ಬಾರದು ಎಂದಿರುವ ರಾಜ್ಯ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆದಾಯ ನೆಲೆಗಟ್ಟಿನಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಕೊಡುವುದೇ ಆದಲ್ಲಿ ಕೆಲವೊಂದು ಷರತ್ತು ವಿಧಿಸಿ ಎಂದು ಹೇಳಿದೆ.
ಈ ಬಾರಿಯೂ ಇಲ್ಲ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬಹುತೇಕ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಅವಕಾಶ ಕೊಡಲೇ ಬಾರದು ಒಂದು ವೇಳೆ ಅನುಮತಿ ಕೊಡುವುದೇ ಆದರೆ ಪೂರ್ಣಪ್ರಮಾಣದ ಆಚರಣೆಗೆ ಅವಕಾಶ ಕೊಡ ಬೇಡಿ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಚಳಿಗಾಲ ಅಧಿವೇಶನ ಮುಗಿದ ಬೆನ್ನಲ್ಲೇ ಸರ್ಕಾರ ಈ ಬಗ್ಗೆ ತೀರ್ಮಾನ ಅಗಲಿದೆ. ಹೆಚ್ಚು ಕಮ್ಮಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕಂಡೀಷನ್ಸ್ ಅಪ್ಲೈ ಆಗುವಂತ ಸಾಧ್ಯತೆ ಇದೆ.
ಬಿಬಿಎಂಪಿ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿಯಿಂದಲೂ ನಿರ್ಬಂಧಕ್ಕೆ ಸಲಹೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಬಗ್ಗೆ ಸಭೆ ಮೇಲೆ ಸಭೆ ನಡೆಸಿ ಪಬ್ ಬಾರ್ ಸಂಘಗಳ ಜೊತೆಗೂ ಪಾಲಿಕೆ ಮೀಟಿಂಗ್ ಮಾಡಿದೆ. ಸಭೆಯಲ್ಲಿ ಈಗಷ್ಟೇ ವ್ಯಾಪಾರ ಚೇತರಿಕೆಯಲ್ಲಿದೆ, ಅನುಮತಿ ಕೊಡಿ ಎಂದು ಸಂಘಗಳು ಮನವಿ ಮಾಡಿಕೊಂಡಿದೆ.

ಸರ್ಕಾರಕ್ಕೆ TAC ಕೊಟ್ಟಿರು ಸಲಹೆಗಳೇನೇನು.!?
– ಹೊಸ ವರ್ಷದಂದು ಪಬ್ ಬಾರ್ ಓಪನ್ ಅವಧಿ ಕಡಿತಗೊಳಿಸಲು ಸಲಹೆ
– ರಾತ್ರಿ 9 ಗಂಟೆ ವರೆಗೆ ಮಾತ್ರ ಅವಕಾಶ ಕೊಟ್ಟರೆ ಸಾಕು
– 50-50 ಮಾದರಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು
– ಒಂದೇ ಕಡೆ ಗುಂಪು ಸೇರಿಸಿ ಆಚರಣೆಗೆ ಅವಕಾಶ ನೀಡಬಾರದು
– ಬೆಂಗಳೂರು ಮಾತ್ರವಲ್ಲ, ಬೆಂಗಳೂರು ಅಕ್ಕ ಪಕ್ಕದ ಜಿಲ್ಲೆಗಳಿಗೂ ಇದೇ ಮಾದರಿಯ ನಿಯಮ ಜಾರಿ ಮಾಡಬೇಕು
– 500ರ ಬದಲು 200 ಮಂದಿಗೆ ಮಾತ್ರ ತೆರೆದ ಜಾಗದಲ್ಲಿ ಅವಕಾಶ ಕಲ್ಪಿಸಬೇಕು
– ಓಪನ್ ನ್ಯೂ ಇಯರ್ ಪಾರ್ಟಿಗೆ ಬಿಬಿಎಂಪಿ ಅವಕಾಶ ಕೊಡಬಾರದು
– ಹೊಸ ವರ್ಷ ಆಚರಣೆಗೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಗದಂತೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು
– ರಾಜ್ಯದ ಟೂರಿಸ್ಟ್ ಸ್ಪಾಟ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಕ್ರಮಕ್ಕೆ ಸೂಚಿಸಬೇಕು
– ಕೊಡಗು, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನಿಗಾ ಹೆಚ್ಚಿಸಬೇಕು
– ಸಾಧ್ಯವಾದರೆ ಮದ್ಯ ಮಾರಾಟಕ್ಕೆ ಸಮಯ ನಿಗದಿ ಮಾಡಬೇಕು
ಆದರೆ ಅಂತಿಮ ನಿರ್ಧಾರವನ್ನು ಸರ್ಕಾವೇ ತೆಗೆದುಕೊಳ್ಳಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೂ ತೆರೆ ಬೀಳಲಿದೆ. ಇದಾದ ಬಳಿಕ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜೊತೆ ಸಭೆ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಕಳೆದರಡು ವರ್ಷವೂ ಕೊರೋನಾ ಕಾರಣದಿಂದ ಹೊಸ ವರ್ಷ ಆಚರಣೆಗೆ ತಡೆಯೊಡ್ಡಲಾಗಿತ್ತು. ಆದರೆ ಡಿಸೆಂಬರ್‌ಗೂ ಮೊದಲು ಈ ಬಾರಿಯಾದರೂ ಕೊರೋನಾ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಆಚರಣೆಗೆ ಅವಕಾಶ ಸಿಗುತ್ತೆ ಎಂದುಕೊಳ್ಳಲಾಗಿತ್ತು. ಆದರೆ ಕೊರೋನಾ ಹೊಸ ಅವತಾರದಲ್ಲಿ ಓಮೈಕ್ರಾನ್ ರೂಪದಲ್ಲಿ ಎಂಟ್ರಿ ಕೊಟ್ಟು ಮತ್ತೊಮ್ಮೆ ನ್ಯೂ ಇಯರ್ ಸೆಲೆಬ್ರೇಷನ್ ಗೆ ಅಡ್ಡಗಾಲಾಕಿದೆ. ಸದ್ಯ ಇಡೀ ರಾಜ್ಯದಲ್ಲಿ ಒಟ್ಟು 14 ಪ್ರಕರಣಗಳಿವೆ. ಇದರ ನಡುವೆ ಸರ್ಕಾರ ಯಾವ ನಿರ್ಧಾರ ತಾಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ.