ಭಾರತವು 260,533 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 1,492 ಸಾವುಗಳನ್ನು ದಾಖಲಿಸಿದ ಹಿನ್ನೆಲೆಯಲ್ಲಿ ದೇಶದ ಏಕೈಕ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಹರಿದ್ವಾರ ಕುಂಭಮೇಳವನ್ನು ಮುಂದುವರಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ‘ವೈರಸ್‌ಗೆ ಧರ್ಮಗಳ ನಡುವೆ ತಾರತಮ್ಯವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಗಂಗಾ ನದಿಯಲ್ಲಿ ಸ್ನಾನಮಾಡಲು ಹರಿದ್ವಾರದಲ್ಲಿ ಲಕ್ಷಾಂತರ ಭಕ್ತರು ಸೇರಿರುವುದರಿಂದ ಕುಂಭ ಮೇಳವು ಕರೋನಾ ಹರಡುವಿಕೆಯ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಳ್ಳುತ್ತಿದೆ. ಏಪ್ರಿಲ್ 10 ರಿಂದ 14 ರ ನಡುವಿನ ಅಧಿಕೃತ ಅಂಕಿಅಂಶಗಳು ಸೋಂಕಿತರ ಸಂಖ್ಯೆಯನ್ನು 1,701 ಎಂದು ಸೂಚಿಸುತ್ತಿದೆ. “ಸಾಂಕ್ರಾಮಿಕ ರೋಗವು ಭಾರತದಲ್ಲಿ ಈ ರೀತಿ ಹರಡುತ್ತಿರುವಾಗ ಕುಂಭ ಮೇಳ ನಡೆಸಬೇಕೇ?” ಎಂದು ಕೇಳಿದ್ದಾರೆ. ಒಲಿಪಿಂಕ್ ತಾಮ್ರದ ಪದಕ ವಿಜೇತ ಕುಸ್ತಿಪಟು ಪ್ರಸ್ತುತ ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಯೋಗೇಶ್ವರ ದತ್ ಅವರ ಟ್ವೀಟ್‌ಗೆ ಅವರು ಪ್ರತಿಕ್ರಿಯಿಸುತ್ತಾ ಈ ಪ್ರಶ್ನೆ ಕೇಳಿದ್ದಾರೆ.

ಭಾರತದಾದ್ಯಂತ ಕರೋನ ವೈರಸ್ ಸೋಂಕುಗಳು ತೀವ್ರವಾಗಿ ಏರುತ್ತಿದ್ದರೂ ಕುಂಭಮೇಳವನ್ನು ನಡೆಸಲು ಅವಕಾಶ ನೀಡಿದ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಡೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು ಯೋಗೀಶ್ವರ್ ದತ್.
ಭಕ್ತರನ್ನು ಅವಮಾನಿಸಲಾಗುತ್ತಿದೆ ಮತ್ತು ಅವರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ದತ್ ಹೇಳಿದ್ದಾರೆ.

“ಭದ್ರತೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಯಾರೂ ಉಗುಳುವುತ್ತಿಲ್ಲ, ಆಡಳಿತದಿಂದ ತಲೆಮರೆಸಿಕೊಂಡ ಯಾರೂ ಓಡಿಹೋಗುವುತ್ತಿಲ್ಲ ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ನಡೆದ ತಬ್ಲೀಗಿ ಜಮಾತ್ ಸಮಾವೇಶ ಮತ್ತು ಕುಂಭ ಮೇಳದ ನಡುವಿನ ಯಾವುದೇ ಹೋಲಿಕೆಯನ್ನು ತಿರಸ್ಕರಿಸುವ ಕಳೆದ ಬಿಜೆಪಿಯ ಪ್ರಯತ್ನದ ಮುಂದುವರೆದ ಭಾಗವಾಗಿ ದತ್ ಅವರ ಟ್ವೀಟನ್ನು ಪರಿಗಣಿಸಲಾಗುತ್ತಿದೆ. ಹಾಗಾಗಿಯೇ ಅವರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬಿಂದ್ರಾ “ಅಥ್ಲೀಟ್‌ಗಳು ತಮ್ಮ ಗಮನವನ್ನು ಚೆಂಡಿನ ಮೇಲಿಡಬೇಕು, ಅವರ ಗಮನ ಅಚಲವಾಗಿರುವುದು, ಜೀವಗಳನ್ನು ಉಳಿಸುವುದು, ಕೆಲಸ ಮಾಡಬಲ್ಲ ಪರಿಹಾರಗಳನ್ನು ಕಂಡುಹಿಡಿಯುವುದು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಹಾನುಭೂತಿ ತೋರಿಸುವುದು ಅತ್ಯಂತ ಪ್ರಮುಖ ಸಂಗತಿಯಾಗಿರುತ್ತದೆ. ಇಂತಹ ಹೇಳಿಕೆಗಳ ಮೂಲಕ ಇಡೀ ಕ್ರೀಡಾ ಸಮುದಾಯವನ್ನು ನೀವು ಅವಮಾನಕ್ಕೀಡು ಮಾಡುತ್ತಿದ್ದೀರಿ “ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರವು ಜಾಹೀರಾತುಗಳ ಮೂಲಕ ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಯಾತ್ರಾರ್ಥಿಗಳನ್ನು ಆಹ್ವಾನಿಸಿತ್ತು. ಈಗ ಯು ಟರ್ನ್ ಹೊಡೆದಿರುವ ಸರ್ಕಾರವು ಈ ಉತ್ಸವದಲ್ಲಿ ಹಾಜರಾತಿ ‘ಸಾಂಕೇತಿಕ’ ಆಗಿರಬೇಕು ಎಂದು ಹೇಳುತ್ತಿದೆ. ಸರ್ಕಾರದ ಮನವಿಯನ್ನು ಅನುಸರಿಸಿ, ಹರಿದ್ವಾರದ ಜುನಾ ಅಖಾರಾದ ಸ್ವಾಮಿ ಅವ್ಧೇಶಾನಂದ್ ಅವರು COVID-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಕ್ತರು ಎಲ್ಲಾ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಮಧ್ಯಪ್ರದೇಶದ ಮಹಾ ನಿರ್ವಾಣಿ ಅಖಾರ ಮಹಾಮಂಡಲೇಶ್ವರ ಸ್ವಾಮಿ ಕಪಿಲ್ ದೇವ್ ಅವರು ಏಪ್ರಿಲ್ 13 ರಂದು COVID-19 ಗೆ ತುತ್ತಾದ ಹಿನ್ನೆಲೆಯಲ್ಲಿ ಮೋದಿ ಮತ್ತು ಅವಧೇಶಾನಂದ್ ಅವರ ಮನವಿ ಬಂದಿದೆ. ಅಖಿಲ್ ಭಾರತೀಯ ಅಖರಾ ಪರಿಷತ್ ಅಧ್ಯಕ್ಷ, ಮಹಂತ್ ನರೇಂದ್ರ ಗಿರಿ , ಕಳೆದ ವಾರ ಕೋವಿಡ್ ದೃಢಪಟ್ಟಿತ್ತು ಮತ್ತು ಅವರು ಈ ಸಂಬಂಧ ಹೃಷಿಕೇಶದ AIIMSಗೆ ದಾಖಲಾಗಿದ್ದರು.
ಉತ್ತರಾಖಂಡದ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ನಂಬಿಕೆ ಮತ್ತು ಗಂಗಾ ಮಾತೆ ಹರಿದ್ವಾರದಲ್ಲಿರುವ ಯಾತ್ರಿಕರನ್ನು ಕರೋನವೈರಸ್‌ನಿಂದ ರಕ್ಷಿಸುತ್ತದೆ ಎಂದು ಹೇಳಿದ್ದರು, ಇದೀಗ ಸ್ವತಃ ಅವರಿಗೇ COVID ದೃಢಪಟ್ಟಿದೆ.









