ನಟ ಪುನೀತ್ರಾಜ್ಕುಮಾರ್ ನಮ್ಮನ್ನಗಲಿ ಎರಡು ವಾರಗಳು ಕಳೆಯುತ್ತಾ ಬಂದರೂ ಅಭಿಮಾನಿಗಳ ಅಳಲು ಇನ್ನೂ ತೀರಿಲ್ಲ.
ಹೌದು, ಅಪ್ಪು ಅಗಲಿ ಎರಡು ವಾರಗಳು ಕಳೆದರು ಅಭಿಮಾನಿಗಳು ತಮ್ಮ ಅಳಲನ್ನು ಒಂದಲ್ಲ ಒಂದು ರೀತಿ ತೋಡುಕೊಳ್ಳುತ್ತಿದ್ದಾರೆ. ಇನ್ನೂ ಅನೇಕರು ತಮ್ಮ ವಾಟ್ಸ್ ಆಪ್ ಸ್ಟೇಟಸ್ನಲ್ಲಿ ಅಪ್ಪು ವಿ ಮಿಸ್ ಯೂ, ನಿಮ್ಮನ್ನು ನಾವು ಕ್ಷಮಿಸೆವು ಅಪ್ಪು ನಮ್ಮನ್ನು ಯಾಕ್ ಬಿಟ್ಟು ಹೋದ್ರಿ ಎಂದೆಲ್ಲ ಬರೆದುಕೊಂಡು ಅವರ ಅಭಿನಯ ಮತ್ತು ಸಮಾಜಮುಖಿ ಕೆಲಸಗಳ ವಿಡಿಯೋವನ್ನು ಹಾಕಿಕೊಂಡಿದ್ದಾರೆ.
ಈ ನಡುವೆ ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ಬಸ್ವೊಂದರ ಮೇಲಿದ್ದ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ವೃದ್ದೆಯೊಬ್ಬರು, ಮುತ್ತಿಟ್ಟು ಕಣ್ಣೀರು ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.