NPRಗೆ ಭಾರತೀಯ ನಾಗರಿಕರ ಆಧಾರ್ ಸಂಖ್ಯೆಯನ್ನು ಕಲೆ ಹಾಕಲಾಗುತ್ತದೆ ಎಂಬ ಸುದ್ದಿಯನ್ನು ಪ್ರಕಟಿಸಿದ ಭಾರತದ ಪ್ರತಿಷ್ಟಿತ ದೈನಿಕವೊಂದರ ಸುದ್ದಿಯನ್ನು ʼಸರಿಯಲ್ಲʼ ಎಂದು ಅಲ್ಲಗೆಳೆದ ಕೇಂದ್ರ ಗೃಹ ಸಚಿವಾಲಯದ Office of Registrar General of India (ORGI) ಕಡತವೊಂದು ಎನ್‌ಪಿಆರ್ ಪ್ರಕ್ರಿಯೆಯಲ್ಲಿ ಇತರ ದಾಖಲೆಗಳ ಜೊತೆ ಆಧಾರ್ ಸಂಖ್ಯೆಯನ್ನು ಕೂಡ ಸಂಗ್ರಹಿಸಲಾಗುತ್ತದೆ ಎಂದು ಹೇಳಿದೆ. NPR ಡೇಟಾಬೇಸ್‌ನಲ್ಲಿ ಇಲ್ಲದಿರುವ ಆಧಾರ್ ಸಂಖ್ಯೆಗಳನ್ನು ಕೂಡ ಈ ವೇಳೆ ಕಲೆಹಾಕಲಾಗುವುದು ಎಂದು ಹೇಳಿದೆ.
ಜುಲೈ 9, 2019ರಂದು ದಾಖಲಾಗಿರುವ ಕಡತದಲ್ಲಿ NPR ಡೇಟಾಬೇಸ್‌ನಲ್ಲಿ ಇಲ್ಲದಿರುವ ಸಂಖ್ಯೆಗಳ ಜೊತೆಗೆ ಭಾರತದಲ್ಲಿ ವಾಸವಿರುವ ಎಲ್ಲರ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕೆಂದು ನಮೂದಿಸಲಾಗಿದೆ. ಆಂಗ್ಲ ಅಂತರ್ಜಾಲ ತಾಣ The Wireಗೆ ಲಭ್ಯವಾಗಿರುವ ಕಡತದಲ್ಲಿ, ಈವರೆಗೆ ಸುಮಾರು 60ಕೋಟಿ ಆಧಾರ್ ಸಂಖ್ಯೆಯನ್ನು NPR ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗಿದೆ ಎಂಬ ಅಂಶ ತಿಳಿದು ಬಂದಿದೆ.
2015ರಲ್ಲಿ ತಯಾರಿಸಲಾದ ಎನ್‌ಪಿಆರ್ ಜೊತೆಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿತ್ತು. ಈ ಸಮಯದಲ್ಲಿ ಮನೆಯ ಹೊಸ ಸದಸ್ಯರ ವಿವರಗಳನ್ನು ಕೂಡ ಸಂಗ್ರಹಿಸಲಾಗಿತ್ತು. ಒಟ್ಟು ಸುಮಾರು 60 ಕೋಟಿ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲಾಗಿತ್ತು, ಎಂದು ನಮೂದಿಸಲಾಗಿದೆ.
ಭಾರತದ ನಾಗರಿಕರಿಗೆ ರಾಷ್ಟ್ರೀಯ ಗುರುತಿನ ಚೀಟಿಯನ್ನು ವಿತರಿಸುವ ಸಲುವಾಗಿ 2010ರಲ್ಲಿ ORGI, NPR ಡೇಟಾವನ್ನು ಕಲೆಹಾಕಲು ಆರಂಭಿಸಿತ್ತು. ಈ ಪ್ರಕ್ರಿಯೆಯ ಜೊತೆಗೆ ಯುಡಿಎಐ ಕೂಡ ಇದೇ ಸಮಯದಲ್ಲಿ ಆಧಾರ್ ಸಂಖ್ಯೆಯನ್ನು ಕೂಡಾ ನೀಡಿತು. 2015ರಲ್ಲಿ NPR ಡೇಟಾ ಸಂಗ್ರಹಿಸುವಾಗ ಹಲವು ರಾಜ್ಯಗಳಿಂದ ದೊಡ್ಡ ಮೊತ್ತದ ಮಾಹಿತಿಯನ್ನು ಒಆರ್‌ಜಿಒ ಸಂಗ್ರಹಿಸಿತು. ಆದರೆ, ಅದೇ ರಾಜ್ಯಗಳು ಕೇಂದ್ರದಿಂದ ಮಾಹಿತಿಯನ್ನು ಕೇಳಿದಾಗ ʼಗೌಪ್ಯತೆ ಕಾಪಾಡುವʼ ಉದ್ದೇಶದಿಂದ ORGI ಮಾಹಿತಿ ನೀಡಲು ನಿರಾಕರಿಸಿತು. ನಂತರ ಸುಪ್ರಿಮ್ ಕೋರ್ಟ್‌ನಲ್ಲಿ ಆಧಾರ್ ಕಾರ್ಡ್‌ನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಆರಂಭವಾಯಿತು.
ಈ ವಿಚಾರಣೆಯ ತೀರ್ಪು ಹಾಗೂ ಪಾರ್ಲಿಮೆಂಟ್‌ನಲ್ಲಿ ಅಂಗೀಕಾರಗೊಂಡ ಆಧಾರ್ ಮತ್ತು ಇತರ ಕಾನೂನುಗಳ ತಿದ್ದುಪಡಿಯನ್ನು ಗಮನದಲ್ಲಿಟ್ಟುಕೊಂಡು ORGI ಭಾರತೀಯರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ವಿದ್ಯನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅನುಮತಿಯನ್ನು ಕೇಳಿತು.
The Wire ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, NPRನಲ್ಲಿ ಆಧಾರ್ ಸಂಖ್ಯೆಯ ಜೊತೆಗೆ ಸಂಗ್ರಹಿಸ ಬೇಕಾಗುವ ಇತರ ದಾಖಲೆಗಳು ಕೆಳಗಿನಂತಿವೆ:
· ಹೆತ್ತವರ ಜನನ ದಿನಾಂಕ ಮತ್ತು ಸ್ಥಳ
· ಹಿಂದಿನ ನಿವಾಸದ ವಿಳಾಸ
· ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದಲ್ಲಿ ಪಾಸ್‌ಪೋರ್ಟ್ ಸಂಖ್ಯೆ
· ಆಧಾರ್ ಸಂಖ್ಯೆ
· ಮೊಬೈಲ್ ಸಂಖ್ಯೆ
· ಪಾನ್ ಸಂಖ್ಯೆ
· ಡ್ರೈವಿಂಗ್ ಲೈಸನ್ಸ್ ಸಂಖ್ಯೆ
Times of India ದಿನ ಪತ್ರಿಕೆಯಲ್ಲಿ Have Aadhar, Passport? You’ll have to share details for NPR ಎಂಬ ತಲೆಬರಹದಲ್ಲಿ ಪ್ರಕಟವಾದ ಸುದ್ದಿಯೊಂದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರೀಯಿಸಿರುವ ಗೃಹ ಸಚಿವಾಲಯದ ವಕ್ತಾರ, ಇದೊಂದು ತಪ್ಪು ವರದಿ. ಈ ರೀತಿಯ ವರದಿಗಳು ಸಮಾಜಕ್ಕೆ NPR ಕುರಿತು ತಪ್ಪು ಗ್ರಹಿಕರಯನ್ನು ನೀಡುತ್ತವೆ ಎಂದು ಹೇಳಿದ್ದಾರೆ.
ಆದರೆ, ಈ ಮಾತುಗಳನ್ನು ಅಲ್ಲಗೆಳೆಯುವಂತೆ ಜುಲೈ 2019ರಲ್ಲಿ ನೀಡಲಾಗಿರುವ ಕಡತದಲ್ಲಿ ಈ ಎಲ್ಲಾ ದಾಖಲೆಗಳ ಸಲ್ಲಿಕೆ ಕಡ್ಡಾಯವಾಗಿದೆ ಎಂದು ಹೇಳಲಾಗಿದೆ. ಆದರೆ ಜನವರಿ 16ರಂದು ಗೃಹ ಸಚಿವಾಲಯದ ವಕ್ತಾರರು ತಮ್ಮ ಟ್ವಿಟರ್ ಖಾತೆಯಲ್ಲಿ NPRನಲ್ಲಿ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ, ಅಷ್ಟಕ್ಕೂ ಯಾರಾದರೂ ತಮ್ಮ ದಾಖಲೆಗಳನ್ನು ತೋರಿಸಿದರೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ORGI ಕಡತವು ಎನ್‌ಪಿಆರ್ ಸಮಯದಲ್ಲಿ ಪಾನ್ ಕಾರ್ಡ್ ಸಂಖ್ಯೆಯನ್ನು ಕೂಡ ಸಂಗ್ರಹಿಲಾಗುವುದು ಎಂದು ಹೇಳಿದ್ದರೂ, ಇತ್ತೀಚಿಗೆ ಮಾಧ್ಯಮಕ್ಕೆ ಗೃಹ ಸಚಿವಾಲಯವು ನೀಡಿದ ಹೇಳಿಕೆಯೊಂದರಲ್ಲಿ ಈ ಪ್ರಶ್ನೆಯನ್ನು ಕೈಬಿಡಲಾಗುವುದು ಎಂದು ತಿಳಿಸಿದೆ.
ಕೃಪೆ: ದಿ ವೈರ್