
ಇನ್ನು ಮುಂದೆ ನೀವು ಬಿಎಂಟಿಸಿ ಪಾಸ್ ಪಡೆಯಲು ಕಷ್ಟ ಪಡಬೇಕಾಗಿಲ್ಲ. ನೀವು ಬಿಎಂಟಿಸಿಯ ದಿನದ ಪಾಸ್, ವಾರದ ಪಾಸ್ ಹಾಗೂ ತಿಂಗಳಿನ ಪಾಸ್‌ಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಪಡೆಯಬಹುದಾಗಿದೆ.

ಸೆಪ್ಟೆಂಬರ್ 15ರಿಂದ ಡಿಜಿಟಲ್ ವ್ಯವಸ್ಥೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ಪಾಸ್ ಪಡೆದುಕೊಳ್ಳಬಹುದು. ಅದಕ್ಕಾಗಿ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಟುಮ್ಯಾಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿಯಾಗಬೇಕು.ಪ್ರಮುಖವಾಗಿ ನಗದು ರಹಿತ, ಕಾಗದ ರಹಿತ, ಸಂಪರ್ಕ ರಹಿತ ವಹಿವಾಟಿಗಾಗಿ ಆ್ಯಪ್ ಮೂಲಕವೇ ಪಾಸ್ ನೀಡುವ ವ್ಯವಸ್ಥೆಯನ್ನು ಬಿಎಂಟಿಸಿ ಜಾರಿ ಮಾಡುತ್ತಿದೆ.
— BMTC (@BMTC_BENGALURU) August 30, 2024
ಟುಮ್ಯಾಕ್ ಆ್ಯಪ್‌ನಲ್ಲಿ ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್ ಅನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರ ಆಯ್ಕೆ ಮಾಡಿ, ಶುಲ್ಕ ಪಾವತಿಸಿದರೆ ಪಾಸ್ ಸುಲಭವಾಗಿ ಲಭ್ಯವಾಗುತ್ತದೆ.ಪ್ರಯಾಣ ಮಾಡುವಾಗ ಬಸ್‌ಗಳಲ್ಲಿ ಅಂಟಿಸಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪಾಸಿನ ಮಾನ್ಯತೆಯನ್ನು ನಿರ್ವಾಹಕರಿಗೆ ತೋರಿಸಬೇಕು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ @BMTC_BENGALURU ಯಿಂದ 'ಡಿಜಿಟಲ್ ಪಾಸ್'@RLR_BTM @KSRTC_Journeys pic.twitter.com/gIFAsRkAhX
— eedina.com ಈ ದಿನ.ಕಾಮ್ (@eedinanews) August 30, 2024