ಕಠಿಣ ಪರಿಶ್ರಮದಿಂದ UPSC ಪಾಸ್ ಆಗಿ ಮಹೋನ್ನತ ಹುದ್ದೆಯನ್ನ ಅಲಂಕರಿಸಿದ ಹಲವು ಮಹಿಳಾ ಅಧಿಕಾರಿಗಳಿದ್ಧಾರೆ. ಅವರು ತಮ್ಮ ವೃತ್ತಿ ಮಾತ್ರವಲ್ಲದೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರಾಗಿದ್ದಾರೆ. ಅಂತಹವರಲ್ಲಿ ಲೇಡಿ ಡಿಎಸ್ಪಿ ಪ್ರಿಯಾಂಕಾ ಬಾಜ್‌ಪೈ (DSP Priyanka Bajpai) ಒಬ್ಬರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 6th Rank (UPSC) ಪಡೆದಿರುವ ಇವರು ಸೌಂದರ್ಯದ ಮಾತ್ರವಲ್ಲದೆ ಬುದ್ಧಿವಂತಿಕೆಯಿಂದಲೂ ಫೇಮಸ್ ಆಗಿದ್ದಾರೆ.

ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಯುಪಿಎಸ್‌ಸಿ 2017 ರ ಬ್ಯಾಚ್‌ನ (UPSC 2017Batch) ಟಾಪರ್‌ಗಳಲ್ಲಿ ಒಬ್ಬರಾದ ಡಿಎಸ್‌ಪಿ ಪ್ರಿಯಾಂಕಾ ಬಾಜ್‌ಪೈ (DSP Priyanka Bajpai), ಅಸಾಧಾರಣ ಶೈಕ್ಷಣಿಕ ಸಾಧನೆಗಳೊಂದಿಗೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರಾಗಿದ್ದಾರೆ. ಲಕ್ನೋ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಇವರು ಚಿನ್ನದ ಪದಕವನ್ನು (Gold Medal) ಪಡೆದಿದ್ದಾರೆ.

ಡಿಎಸ್ಪಿ ಪ್ರಿಯಾಂಕಾ ಬಾಜ್ಪೈ (DSP Priyanka Bajpai) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದವರು. ಇದೀಗ ಇವರು ತಮ್ಮ ಬುದ್ಧಿವಂತಿಕೆ, ಸೌಂದರ್ಯದ ಜೊತೆಗೆ ಫಿಟ್ನೆಸ್ ರಾಣಿಯಾಗಿ ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಕನ್ನೌಜ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಖಡಕ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.

ಲಕ್ನೋ ನಿವಾಸಿ ಪ್ರಿಯಾಂಕಾ, ಲಕ್ನೋ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನೂ ಪಡೆದಿದ್ದಾರೆ. ಪಿಎಚ್‌ಡಿ(PHD) ಕೂಡ ಮಾಡಿದ್ದಾರೆ. 2016 ರಲ್ಲಿ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಅಬಕಾರಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಅವರು ಇನ್ನೊಂದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ 6 ಪಡೆಯುವ ಮೂಲಕ ಅವರು ಡಿಎಸ್‌ಪಿ (DSP) ಹುದ್ದೆಗೆ ಆಯ್ಕೆಯಾದರು.