ಕೇಂದ್ರ ಸರ್ಕಾರದಿಂದ ನಿರಂತರ ದ್ರೋಹ, ವಂಚನೆಯಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್ನಲ್ಲಿಂದು ಪ್ರತಿಭಟನೆ ಮಾಡಿದೆ. ಇದೀಗ ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಪ್ರತಿಕ್ರಿಯಿಸಿ, ಕರ್ನಾಟಕದ ಜಿಎಸ್ಟಿಯ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ. ಬರಪರಿಹಾರವೂ ಸೇರಿದಂತೆ ಪ್ರಕೃತಿ ವಿಕೋಪ ನಿಧಿಯಡಿ ಮುಂಗಡವಾಗಿ 6196 ಕೋಟಿ ರೂ, ಹಣ ನೀಡಲಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಒಂದು ರುಪಾಯಿ ನೀಡಲ್ಲ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇಲ್ಲಿಯವರೆಗೆ ಒಟ್ಟು 12,476 ಕೋಟಿ ರೂ.ಗಳಲ್ಲಿ 6196 ಕೋಟಿ ರೂ. ನೀಡಲಾಗಿದೆ ಎಂದು ಅಂಕಿ-ಸಂಖ್ಯೆ ಮೂಲಕ ಸ್ಪಷ್ಟಿಕರಣ ನೀಡಿದ್ದಾರೆ.
![](https://pratidhvani.com/wp-content/uploads/2024/02/Union_Minister_of_Finance_Smt._Nirmala_Sitharaman_addressing_a_press_conference_in_July_2023-1024x678.webp)
ಕಾಂಗ್ರೆಸ್ ಪ್ರತಿಭಟನೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ” ತೆರಿಗೆ ಕಟ್ಟುತ್ತಿರುವುದಕ್ಕೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಆದ್ರೆ, ರಾಜಕೀಯ ಪಕ್ಷದ ನೇತೃತ್ವದ ಸರಕಾರ ಈ ಪ್ರಶ್ನೆ ಎತ್ತಿದೆ. ಕರ್ನಾಟಕ ಸರಕಾರ ಮಾತಾಡುತ್ತಿರುವ ಭಾಷೆ ಜನವಿರೋಧಿಯಾಗಿದೆ. ಕರ್ನಾಟಕಕ್ಕೆ ಕೇಂದ್ರ ತಾರತಮ್ಯ ಮಾಡಿದೆ ಎಂಬುದು ತಪ್ಪು ಮಾಹಿತಿ ನೀಡುತ್ತಿದೆ. ಕುಟುಂಬವಾದದಲ್ಲೇ ಮುಳುಗಿರುವ ಕಾಂಗ್ರೆಸ್ ಭಾಷೆ ದೇಶವನ್ನು ದಾರಿ ತಪ್ಪಿಸುತ್ತಿದೆ “ಎಂದು ವಾಗ್ದಾಳಿ ನಡೆಸಿದರು.
![](https://pratidhvani.com/wp-content/uploads/2024/02/nirmala-sitharaman-2-1024x576.webp)
ಆಯೋಗದ ಐದು ವರ್ಷಗಳ ನಿಗದಿತ ಅವಧಿಯಲ್ಲಿ ಕರ್ನಾಟಕವು 1,51,309 ಕೋಟಿ ರೂ. ತೆರಿಗೆ ಹಂಚಿಕೆ ಪಡೆದಿದೆ ಪ್ರಸ್ತುತ 15 ನೇ ಹಣಕಾಸು ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ, ಅಂದರೆ ಮಾರ್ಚ್, 2024 ರ ವೇಳೆಗೆ ಕರ್ನಾಟಕವು ಈಗಾಗಲೇ 1,29,854 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಭಾರತ ಸರ್ಕಾರವು ಮಧ್ಯಂತರ ಬಜೆಟ್ನಲ್ಲಿ 44,485 ಕೋಟಿ ರೂ.ಗಳನ್ನು ಮತ್ತಷ್ಟು ಬಿಡುಗಡೆ ಮಾಡಲು ಯೋಜಿಸಿದೆ. ಹಣಕಾಸು ವರ್ಷ 2024-25 ಸೇರಿ ಐದು ವರ್ಷಗಳಲ್ಲಿ ಒಟ್ಟು 1,74,339 ಕೋಟಿ ರೂಪಾಯಿ ಕರ್ನಾಟಕ ಪಡೆದಂತಾಗಲಿದೆ “ಎಂದು ಸ್ಪಷ್ಟಪಡಿಸಿದರು.
#Nirmalaseetharaman #Modi #Centralgovernament #Tax #GST #Siddaramiah #Dkshivakumar