ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧಿಸಿದತೆ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ರೈತ ಸಂಘಟನೆಗಳು ಕರೆದಿರುವ ಬೆಂಗಳೂರು ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಏತನ್ಮಧ್ಯೆ, ಬಂದ್ ವೇಳೆ ರ‍್ಯಾಲಿಗಳನ್ನು ನಡೆಸಿದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ನೀಡಿರುವ ಎಚ್ಚರಿಕೆ ವಿಷಯದಲ್ಲಿ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ರೈತ ನಾಯಕ ಕುರುಬೂರು ಶಾಂತಕುಮಾರ್ , ಸರ್ಕಾರದ ಎಚ್ಚರಿಕೆಗೆ ಜಗ್ಗಲ್ಲ, ಬಗ್ಗಲ್ಲ ಎಂದು ಹೇಳಿದರು. ಕಳೆದ ವರ್ಷ ಕೊರೋನಾ ಪಿಡುಗು ಸಂದರ್ಭದಲ್ಲಿ ಲಾಕ್ ಡೌನ್ ಘೋಷಿಸಿ ಕಟ್ಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿದ್ದಾಗ ಡಿಕೆ ಶಿವಕುಮಾರ್ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಆಯೋಜಿಸಿದ್ದರು.
ಅವರನ್ನು ಆಗ ಬಂಧಿಸಲಾಗಿತ್ತೇ ಎಂದು ಕೇಳಿದ ಶಾಂತಕುಮಾರ್, ಜೈಲಿಗೆ ಹೋಗಬೇಕಾದ ಸ್ಥಿತಿ ಎದರಾದರೂ ಹೆದರಲ್ಲ ಅಂತ ಹೇಳಿದರು. ಇವತ್ತಿನ ಹೋರಾಟದ ರೂಪುರೇಷೆಗಳನ್ನು ವಿವರಿಸಿದ ಅವರು ನಗರದ ಟೌನ್ ಹಾಲ್ ಬಳಿ ಎಲ್ಲ ಸಂಘಟನೆಗಳ ಸದಸ್ಯರು ಸೇರಿ ಅಲ್ಲಿಂದ ಒಟ್ಟಾಗಿ ಫ್ರೀಡಂ ಪಾರ್ಕ್ಗೆ ಹೋಗಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಸಲಾಗುವುದು ಎಂದರು. ಕನ್ನಡ ಪರ ಸಂಘಟನೆಗಳು ಇವತ್ತಿನ ಬಂದ್ ಗೆ ಬೆಂಬಲ ನೀಡದಿರೋದು ಪ್ರತಿಭಟನೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಶಾಂತಕುಮಾರ್ ಹೇಳಿದರು.