ಧಾರ್ಮಿಕ ಸ್ಥಳಗಳಲ್ಲಿ, ವಿಶೇಷವಾಗಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಹಾಡಿ ಹೊಗಳಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ನಮ್ಮಲ್ಲಿ ಈ ಕೆಲಸ ಮಾಡಿ ತೋರಿಸಲು ಯಾವ ಯೋಗಿ ಇಲ್ಲ ಇರುವುದೆಲ್ಲ ಬರೀ ಭೋಗಿಗಳೆ ಎಂದು ಮಾಹಾರಷ್ಟ್ರದ ಮೈತ್ರಿ ಸರ್ಕಾರವನ್ನು ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ರಾಜ್ ಠಾಕ್ರೆ, ಧಾರ್ಮಿಕ ಸ್ಥಗಳಿಂದ ವಿಶೇಷವಾಗಿ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಸಲು ಕ್ರಮ ಕೈಗೊಂಡ ಯೋಗಿ ಸರ್ಕಾರಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದು ಟ್ವೀಟ್ ಮಾಡಿ ಯೋಗಿ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಮುಂದುವರೆದು, ಮಹಾರಾಷ್ಟ್ರದಲ್ಲಿ ನಾವು ಯಾವುದೇ ಯೋಗಿಗಳನ್ನು ಹೊಂದಿಲ್ಲ ಇರುವವರೆಲ್ಲ ಬರಿ ಭೋಗಿಗಳೆ ಎಂದು ತಮ್ಮ ಸಹೋದರ ಸಂಬಂಧಿ ಮಾಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಮಹಾ ಸರ್ಕಾರಕ್ಕೆ ಧ್ವನಿವರ್ಧಲಗಳನ್ನು ತೆರವುಗೊಳಿಸಲು ಮೆ 3ರ ಗಡುವು ನೀಡಿರುವ ಠಾಕ್ರೆ ಒಂದು ವೇಳೆ ಸರ್ಕಾರ ವಿಫಲವಾದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಮಸೀದಿ ಮುಂದೆ ಪ್ರತಿನಿತ್ಯ 5 ಭಾರೀ ಹನುಮಾನ್ ಚಾಲೀಸವನ್ನು ಹಾಕುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಈ ಕುರಿತು ಟ್ವೀಟ್ ಮಾಡಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಐ ಭೋಗಿ ಯೋಗಿಯನ್ನು ನೋಡಿ ಏನಾದರು ಕಲಿ ಎಂದು ಟ್ವೀಟ್ ಮಾಡಿದ್ದಾರೆ.