• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಇಂದಿರಾಗಾಂಧಿ, ರಾಜೀವ್ ಗಾಂಧಿ ಫೋಟೋ ಇಲ್ಲದೇ ಎನ್ ಎಸ್ ಯು ಐ ಬ್ಯಾನರ್ ಇರಬಾರದು –ಡಿಕೆ ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
August 31, 2021
in ಕರ್ನಾಟಕ
0
ಇಂದಿರಾಗಾಂಧಿ, ರಾಜೀವ್ ಗಾಂಧಿ ಫೋಟೋ ಇಲ್ಲದೇ ಎನ್ ಎಸ್ ಯು ಐ ಬ್ಯಾನರ್ ಇರಬಾರದು –ಡಿಕೆ ಶಿವಕುಮಾರ್
Share on WhatsAppShare on FacebookShare on Telegram

ನಾನು ಎಸ್ ಜೆಆರ್ ಸಿ ಕಾಲೇಜಿನಲ್ಲಿದ್ದಾಗ ಎನ್ ಎಸ್ ಯು ಐ ಚುನಾವಣೆಗೆ ನನಗೆ ಟಿಕೆಟ್ ನೀಡಲಿಲ್ಲ. ಆಗ ದೇಶದ ಪ್ರಧಾನಿಯಾಗಿ ಇಂದಿರಾಗಾಂಧಿ ಅವರಿದ್ದರು. ಆಗ ಬೇರೆ ಪಕ್ಷದಿಂದ ಆಹ್ವಾನ ಬಂದಿತ್ತು. ಆಗ ನಾನು ನನ್ನ ಸಿದ್ಧಾಂತವೇ ಬೇರೆ, ಹೀಗಾಗಿ ನಾನು ಕಾಂಗ್ರೆಸಿನಲ್ಲೇ ಇರುತ್ತೇನೆ ಎಂದು ಹೇಳಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ADVERTISEMENT

NSUI ನೂತನ ಅಧ್ಯಕ್ಷರಾದ ಕೀರ್ತಿ ಗಣೇಶ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ನೀಡಲಾಗಿದೆ. ಮೊದಲು ಸದಸ್ಯತ್ವ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ನೀವು ಕೊಡುಗೆ ನೀಡಬೇಕು ಎಂದು ಇಚ್ಛೆ ಇದ್ದರೆ, ನಾಯಕರಾಗಬೇಕಾದರೆ ಸದಸ್ಯತ್ವ ಮಾಡಿಸಬೇಕು. ಸದಸ್ಯತ್ವ ಮಾಡಿಸಿದರೆ ನೀವು ನಾಯಕರಾಗಿ ಬೆಳೆಯಲು ಸಾಧ್ಯ ಎಂದು ಹೇಳಿದ್ದಾರೆ.

“ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 100 ವರ್ಷಗಳ ಹಿಂದೆ ಇರಲಿಲ್ಲ. ಆಗ ಕೆಪಿಸಿಸಿ ಸಮಿತಿ ಇತ್ತು. ನಾಗ್ಪುರ ಅಧಿವೇಶನದಲ್ಲಿ ಕರ್ನಾಟಕ ಪ್ರಾವೀನ್ಷಿಯಲ್ ಕಾಂಗ್ರೆಸ್ ಸಮಿತಿ ಎಂದು ಘೋಷಿಸಿದರು. ಅದಕ್ಕೀಗ 100 ವರ್ಷವಾಗಿದೆ.  ಕನ್ನಡ ಮಾತಾನಾಡುವವರನ್ನು ಸೇರಿಸಿ ಈ ಸಮಿತಿ ರಚಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದು, ಈ ವರ್ಷ ನೀವು 75 ಸಾವಿರ ನೂತನ ಸದಸ್ಯತ್ವ ಮಾಡಿಸಬೇಕು. ನೀವು ಒಬ್ಬ ನಾಯಕ 1 ಸಾವಿರ ಸದಸ್ಯತ್ವ ಮಾಡಿಸಲಿಲ್ಲ ಎಂದರೆ ನೀವು ನಾಯಕರಾಗಲು  ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ಕಾಲೇಜು ಉಸ್ತುವಾರಿ ವಹಿಸಿಕೊಳ್ಳಲಿ.”

“ಎನ್ ಎಸ್ ಯು ಐ ನಮ್ಮ ಬೇರು. ಮುಂದೆ ಫಲ ಅನುಭವಿಸಬೇಕು ಎಂದರೆ ನಮ್ಮ ಬೇರು ಗಟ್ಟಿಗೊಳಿಸಬೇಕು. ನೀವು ಮೊದಲು ಕನಸು ಕಾಣಬೇಕು, ಆ ಕನಸನ್ನು ಇಷ್ಟಪಡಬೇಕು. ಅದನ್ನು ಸಾಕಾರಗೊಳಿಸಲು ನಿರ್ಧರಿಸಬೇಕು. ಜತೆಗೆ ಶಿಸ್ತು ಬೆಳೆಸಿಕೊಳ್ಳಬೇಕು. ನೀವು ಸಾವಿರ ಸದಸ್ಯತ್ವ ಮಾಡಿಕೊಂಡು ಬನ್ನಿ, ನಿಮ್ಮನ್ನು ಆಹ್ವಾನ ಕೊಟ್ಟು ನಾನೇ ಕರೆಯುತ್ತೇನೆ. ಎನ್ ಎಸ್ ಯು ಐ ಆರಂಭಿಸಿದ್ದು ಇಂದಿರಾಗಾಂಧಿ ಅವರು. ಯುವಕರಿಗೆ ಆದ್ಯತೆ ಕೊಟ್ಟಿದ್ದು ರಾಜೀವ್ ಗಾಂಧಿ ಅವರು. ಇವರಿಬ್ಬರು ಇಲ್ಲದೇ ಎನ್ ಎಸ್ ಯು ಐ ಬ್ಯಾನರ್ ಇರಬಾರದು.”

“ಪಕ್ಷದ ಪೋಸ್ಟರ್ ಗಳಲ್ಲಿ ಯಾರ ಫೋಟೋ ಇರಬೇಕು, ಇರಬಾರದು ಎಂಬ ನಿಯಮ ಸಿದ್ಧಪಡಿಸುತ್ತಿದ್ದೇವೆ. ನಿಮ್ಮ ಹೋರಾಟದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಬರಬೇಕು. ಅಂತಹ ಹೋರಾಟಗಳನ್ನು ರೂಪಿಸಬೇಕು. ಆಗ ನೀವು ನಾಯಕರಾಗಲು ಸಾಧ್ಯ. ಕೇಂದ್ರ ಸರ್ಕಾರ 2 ಕೋಟಿ ಕೆಲಸ ಕೊಡ್ತೀವಿ ಅಂತು. ಯಾರೆಲ್ಲಾ ಕೆಲಸ ಕಳೆದುಕೊಂಡಿದ್ದಾರೋ ಅವರ ಪದವಿಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಸರಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ನಾನು ಈ ಹೋರಾಟ ಬೆಂಬಲಿಸುತ್ತೇನೆ.

ಬರೀ ಡಿಕೆ ಡಿಕೆ ಅಂದ್ರೆ ಏನು ಬೆಳೆಯೋದಿಲ್ಲ, ಬ್ಯಾನರ್‌, ವಾಲ್‌ ಪೋಸ್ಟ್‌ ಇಳಿಸಿ ಮೊದಲು - DK Shivakumar #NSUI

ನೀವು ಕೆಲಸ ಕಳೆದು ಕೊಂಡವರ ಪದವಿ ಪ್ರಮಾಣಪತ್ರ 3 ಪ್ರತಿ ಮಾಡಿಸಿ, ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ನಮಗೆ ಕಳುಹಿಸಿಕೊಡಿ. ಬಿಜೆಪಿ ಸರ್ಕಾರ ಬಂದ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ದೊಡ್ಡ, ದೊಡ್ಡ ವ್ಯಕ್ತಿಗಳು ಅತ್ಯಾಚಾರ ಮಾಡುತ್ತಿದ್ದಾರೆ. ಮೈಸೂರು ವಿವಿಯ ಕುಲಸಚಿವರು ಹೆಣ್ಣು ಮಕ್ಕಳು ಸಂಜೆ 6.30ರ ನಂತರ ವಿವಿ ಆವರಣದಲ್ಲಿ ಓಡಾಡಬಾರದು ಅಂತಾ ಆದೇಶ ಹೊರಡಿಸಿದ್ದಾರೆ. ಅವರಿಗೆ ಹೊಸ ಡಾಕ್ಟರೇಟ್ ಕೊಡಬೇಕು.

ಇದರ ವಿರುದ್ಧ ನೀವು ಹೋರಾಟ ಮಾಡಬೇಕು. ನೀವು ವಿದ್ಯಾರ್ಥಿಗಳ ಸಮಸ್ಯೆಯ ಧ್ವನಿ ಆಗಿ. ಈ ದೇಶದಲ್ಲಿ ಬದಲಾವಣೆ ಆಗಬೇಕಾದರೆ ಅದು ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರಿಂದ ಸಾಧ್ಯ.ಸಾವಿರ ಸದಸ್ಯತ್ವ ಮಾಡಿಸಿ ನಾನು ನಿಮಗೆ ಪದಾಧಿಕಾರಿ ಹುದ್ದೆ ನೀಡುತ್ತೇನೆ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ವಿದ್ಯಾರ್ಥಿ ನಾಯಕರೇ ನಮ್ಮ ಆಸ್ತಿ. ತ್ರಿವರ್ಣ ಧ್ವಜ ನಮ್ಮ ಶಕ್ತಿ. ನೀವು ಬದಲಾವಣೆ, ಅಭಿವೃದ್ಧಿ ಹಾಗೂ ವಿಜಯದ ಭಾಗವಾಗಬೇಕು.

ನಿಮ್ಮ ಬದ್ಧತೆ ಮುಖ್ಯ. ನೀವು ಬೇಗ ಸಾಗಬೇಕಾದರೆ ಏಕಾಂಗಿಯಾಗಿ ಸಾಗಿ, ನೀವು ದೂರ ಸಾಗಬೇಕಾದರೆ ಎಲ್ಲರ ಒಟ್ಟಿಗೆ ಸಾಗಿ. ಜತೆಗೂಡುವುದು ಆರಂಭ, ಜತೆಯಾಗಿ ಯೋಚಿಸುವುದು ಪ್ರಗತಿ, ಜತೆಯಾಗಿ ಕೆಲಸ ಮಾಡುವುದು ಯಶಸ್ಸು. ನೀವು ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಶೇ.80 ರಷ್ಟು ಇಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.

ರಾಜ್ಯದಲ್ಲಿ 200 ಇಂಜಿನಿಯರಿಂಗ್ ಕಾಲೇಜುಗಳು ಇವೆ. ನಮ್ಮ ರಾಜ್ಯ ತಂತ್ರಜ್ಞಾನ ಕ್ಷೇತ್ರದ ಕೇಂದ್ರ ಸ್ಥಾನ. ಇಲ್ಲೇ ನಿರುದ್ಯೋಗ ಹೆಚ್ಚಾಗಿರುವಾಗ ಇನ್ನು ದೇಶದ ಕತೆ ಏನು? ನಾವು ಸರ್ಕಾರಿ ಉದ್ಯೋಗ ನೀಡಿ ಎನ್ನುತ್ತಿಲ್ಲ. ಇದಕ್ಕೆ ನಾವು ಏನು ಮಾಡಬಹುದು ಎಂದು ನೀವೆಲ್ಲ ಸೇರಿ ನನಗೆ ಸಲಹೆ ನೀಡಿ. ಪಕ್ಷದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ ಧ್ವನಿ, ಪಕ್ಷದ ಧ್ವನಿ ಇರಲಿದೆ.

ರಾಹುಲ್ ಗಾಂಧಿ ಅವರು ರಾಷ್ಟ್ರ ಧ್ವಜ ನನ್ನ ಧರ್ಮ ಎಂದರು. ಈ ರೀತಿ ಬಿಜೆಪಿಯ ಯಾರಾದರೂ ಒಬ್ಬ ನಾಯಕ ಹೇಳಿದ್ದಾನಾ? ಇದು ಕಾಂಗ್ರೆಸ್ ಇತಿಹಾಸ ಹಾಗೂ ಸಂಸ್ಕೃತಿ. ಧಾರವಾಡದಲ್ಲಿ ರಾಷ್ಟ್ರ ಧ್ವಜ ತಯಾರು ಮಾಡುತ್ತಾರೆ. ಅಂತಹ ತ್ರಿವರ್ಣ ಧ್ವಜ ನಿಮ್ಮ ಮೈಮೇಲಿದೆ. ಇದನ್ನು ಬಿಟ್ಟುಕೊಡಬೇಡಿ. ಎನ್ ಎಸ್ ಯು ಐ ಸದಸ್ಯ ಎಂದಿಗೂ ಪಕ್ಷ ಬದಲಿಸುವುದಿಲ್ಲ. ಈ ದೇಶ, ರಾಜ್ಯಕ್ಕೆ ಒಳ್ಳೆಯದಾಗ ಬೇಕು ಎಂದರೆ ನೀವುಗಳು ಗಟ್ಟಿಯಾಗಬೇಕು ಎಂದು ಅವರು ಹೇಳಿದ್ದಾರೆ.

Tags: BJPCongress PartyNo NSUI banner without Indira Gandhiಬಿಜೆಪಿಸಿದ್ದರಾಮಯ್ಯ
Previous Post

ಆಪರೇಷನ್ ಹಸ್ತಕ್ಕೆ ಮುಂದಾದ ಸಿದ್ದರಾಮಯ್ಯ, ಡಿಕೆಶಿ; ಹಿರಿಯ ಕಾಂಗ್ರೆಸ್ ನಾಯಕರಿಂದಲೇ ತೀವ್ರ ವಿರೋಧ

Next Post

ಬಿಜೆಪಿಯಿಂದ ದೇಶ ಮಾರಾಟ ಆಗದಂತೆ ತಡೆಯಬೇಕು: ಸಿದ್ದರಾಮಯ್ಯ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿಲ್ಲ-  ಸಿದ್ದರಾಮಯ್ಯ

ಬಿಜೆಪಿಯಿಂದ ದೇಶ ಮಾರಾಟ ಆಗದಂತೆ ತಡೆಯಬೇಕು: ಸಿದ್ದರಾಮಯ್ಯ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada