ದರ್ಶನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 4 ಸೆಕೆಂಡುಗಳ ಟೀಸರ್‌ನಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.. ಪಬ್ ಒಂದ್ರಲ್ಲಿ ನಡೆಯೋ ಆ್ಯಕ್ಷನ್ ಸೀಕ್ವೆನ್ಸ್ ಒಂದರ ಝಲಕ್ ಇದರಲ್ಲಿ ಇದ್ದು ದರ್ಶನ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.. ಚಾಲೆಂಜ್.. ಹೂಂ ಅಂತಷ್ಟೇ ಡೈಲಾಗ್ ಇದ್ದು, ಅಭಿಮಾನಿಗಳಿಗೆ ಇದೊಂದೇ ಡೈಲಾಗ್ ಹುಚ್ಚಿಡಿಸುವಂತಿದೆ.. ಡೆವಿಲ್ ಸಿನಿಮಾಗೆ ಮಿಲನ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಜಯಮಾತಾ ಕಂಬೈನ್ಸ್ ಮೂಲಕ ಪ್ರಕಾಶ್ ಅವರೇ ಈ ಸಿನಿಮಾಗೆ ಬಂಡವಾಳ ಹಾಕಿದ್ದು, ದರ್ಶನ್ ಜೊತೆ ನಾಯಕಿಯಾಗಿ ಹೊಸ ಹುಡುಗಿ ರಚನಾ ರೈ ನಟಿಸಲಿದ್ದಾರೆ.

ಜೈಲಿಗೋಗಿ ಬಂದ ಮೇಲೂ ದರ್ಶನ್ ಡಿಮ್ಯಾಂಡ್ ಕಡಿಮೆ ಆಗಿಲ್ಲ. ದರ್ಶನ್ ಕೈಯಲ್ಲಿ ಈಗ ಒಟ್ಟು 9 ಸಿನಿಮಾಗಳಿವೆ. ಬರ್ತ್ ಡೇ ಸಂದರ್ಭದಲ್ಲಿ 9 ಸಿನಿಮಾ ಅನೌನ್ಸ್ ಮಾಡಲಾಗಿದೆ. ಸದ್ಯ ಡೆವಿಲ್ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಇದಾದ ನಂತರ ತರುಣ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ. ಪ್ರೇಮ್ ನಿರ್ದೇಶನದ ಒಂದು ಸಿನಿಮಾ, ರಾಮ್ ಮೂರ್ತಿ ನಿರ್ಮಾಣದ ಒಂದು ಸಿನಿಮಾ ಹಾಗೆ ಇನ್ನು ಐದು ಹೊಸ ಸಿನಿಮಾಗಳು ಬರ್ತಡೇ ಸಂಭ್ರಮದಲ್ಲಿ ಅನೌನ್ಸ್ ಆಗಿವೆ.

ನಟ ದರ್ಶನ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಫೆಬ್ರವರಿ 16 ಬಂದ್ರೆ RR ನಗರದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು.. ದರ್ಶನ್ ನಿವಾಸಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬರ್ತಿತ್ತು.. ನಾಡಿನ ಮೂಲೆ ಮೂಲೆಯಿಂದ ಬರ್ತಿದ್ದ ಫ್ಯಾನ್ಸ್ ಕೈಯಲ್ಲಿ ಪೋಸ್ಟರ್ ಹಿಡಿದು ಜೈಕಾರ ಹಾಕಿ ಜಾತ್ರೆ ಮಾಡ್ತಿದ್ರು.. ಆದ್ರೆ ಈ ಬಾರಿ ಸಡಗರ ಸಂಭ್ರಮದ ಹುಟ್ಟುಹಬ್ಬಕ್ಕೆ ಕಾಟೇರ ಬ್ರೇಕ್ ಹಾಕಿದ್ದಾರೆ. ಬೆನ್ನು ನೋವಿನ ಕಾರಣ ಕೊಟ್ಟು ನಾನು ಸಿಗಲ್ಲ ಅಂತ ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದರು. ಕುಟುಂಬದ ಜೊತೆ ಸರಳವಾಗಿ ಸೆಲೆಬ್ರೇಟ್ ಮಾಡ್ಕೊಂಡಿರುವ ದಾಸ, ಯಾರನ್ನೂ ಭೇಟಿ ಮಾಡಿಲ್ಲ. ಆದರೂ ಅಭಿಮಾನಿಗಳು ದಾಸನ ಹುಟ್ಟುಹಬ್ಬ ಮಾಡಿದ್ದಾರೆ..

ದರ್ಶನ್ ಹುಟ್ಟುಹಬ್ಬದ ದಿನವೇ ದರ್ಶನ್ಗೆ ವಿಶ್ ಮಾಡಿದ್ದ ಬ್ಯಾನರ್ ತೆರವು ಮಾಡಲಾಗಿದೆ. ಹೊಸಕೋಟೆಯ ನಗರಸಭೆ ಸಿಬ್ಬಂದಿ ಬ್ಯಾನರ್ ತೆರವು ಮಾಡಿಸಿದ್ದಾರೆ. ಹೊಸಕೋಟೆ ಸ್ಕೈವಾಕ್ ಬಳಿ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬದ ಹಿನ್ನೆಲೆ ದರ್ಶನ್ಗೆ ವಿಶ್ ಮಾಡಿದ್ದ ಬ್ಯಾನರ್ ಹಾಕಿದ್ರು. ಅನುಮತಿ ಪಡೆಯದೇ ಬ್ಯಾನರ್ ಅಳವಡಿಕೆ ಮಾಡದ ಹಿನ್ನೆಲೆ ಬ್ಯಾನರ್ ತೆರವು ಮಾಡಲಾಗಿದೆ. ಆ ಬಳಿಕ ನಗರಸಭೆಗೆ ದರ್ಶನ್ ಅಭಿಮಾನಿಗಳು ತೆರಳಿ ಅನುಮತಿ ಪಡೆದ ಬಳಿಕ ಹೊಸ ಬ್ಯಾನರ್ ಅಳವಡಿಸಿದ್ದಾರೆ.