ವಿಧಾನ ಪರಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಬುಧವಾರ ಸುದ್ದಿಗೋಷ್ಠಿ ನಡೆಸಿ ಯಾವುದೇ ಮೈತ್ರಿ ಒಪ್ಪಂದ ಇಲ್ಲ ಎಂದು ಎರಡು ಪಕ್ಷಗಳ ನಡುವೆ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಡನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಚುನಾವಣೆ ಘೋಷಣೆಯಾದ ದಿನದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುತ್ತಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದೆ ಮತ್ತು ಕಾಂಗ್ರೆಸ್ ನವರು ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಮ್, ನಮ್ಮನ್ನು ಸೋಲಿಸಲು ಈ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಹೇಳಿಯಲ್ಲಿ ಯಾವುದೇ ಹುರುಳಿಲ್ಲ ನಾವು ಗೆಲ್ಲಬಹುದಾದ 6 ಕ್ಷೇತ್ರದಲ್ಲಿ ಮಾತ್ರ ನಾವು ಸ್ಪರ್ಧೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿ ಸ್ಪರ್ಧಿಸದೇ ಇರುವ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬೆಂಬಲ ನೀಡಿ ಎಂದು ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾವು ಯಾರನ್ನು ಮೈತ್ರಿ ಕೇಳಿಲ್ಲ ಆದರೆ ಯಡಿಯೂರಪ್ಪನವರೇ ಸಾರ್ವಜನಿಕವಾಗಿ ನಮ್ಮ ಪಕ್ಷವನ್ನು ಬೆಂಬಸುಸಿ ಎಂದು ಹೇಳಿಕೊಂಡಿದ್ದರು ಆದರೆ ಇದಕ್ಕೆ ಸಿಎಂ ಬೊಮ್ಮಾಯಿ ಈ ನಿರ್ಧಾರ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರ ವೈಯಕ್ತಿಕ ಬಿಜೆಪಿಯಿಂದ ಯಾವುದೇ ಬೆಂಬಲ ಇಲ್ಲ ಎಂದು ಹೇಳಿಕೊದ್ಧಾರೆ. ಹಾಗಾಗಿ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಯಬಹುದು.
ನಾವು ಸ್ಪರ್ಧಿಸಿರುವ ಆರು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇವೆ. ಎರಡು ರಾಷ್ಟ್ರ ಪಕ್ಷಗಳ ಜೊತೆ ನಮ್ಮ ಸಣ್ಣ ಪಕ್ಷ ಹೋರಾಟ ಮಾಡುತ್ತಿದೆ ಹೀಗಿದ್ದಮೇಲೆ ಮೈತ್ರಿಯ ಮಾತೆಲ್ಲಿ ಎಂದು ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೇಕಾದರು ಗೆಲ್ಲಿಸಬಹುದು ಸೋಲಿಸಬಹುದು ಎಂಬ ಶಕ್ತಿ ನಮ್ಮಲ್ಲಿದೆ. ಉದಾಹಾರಣೆಗೆ, ಚಿಕ್ಕಮಗಳೂರು, ಚಿತ್ರದುರ್ಗ,ಶಿವಮೊಗ್ಗ,ರಾಯಚೂರು, ಬಿಜಪುರ, ಕಲಬುರಗಿ ಮತ್ತು ಯಾದಗಿರಿ ಈ ಜಿಲ್ಲೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮತ ಶಕ್ತಿ ನಮ್ಮಲ್ಲಿದೆ ಎಂದು ಹೇಳುವ ಮೂಲಕ ಎರಡು ಪಕ್ಷಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ನಮ್ಮ ಗುರಿ ಮುಂಬರುವ ವಿಧಾನಸಭಾ ಚುನಾಚಣೆ –
ಮುಂಬರುವ 2023ರ ವಿಧಾನಸಭಾ ಚುನಾವಣೆ ಹಿತದೃಷ್ಠಿಯಿಂದ ಸ್ಥಳಿಯವಾಗಿ ನಾವು ಸಂಘಟನೆ ಮಾಡಲು ಕಾರ್ಯಕಾರ ಮಾಡಿದ್ದೇವೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ ಮುಂದಿನ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲಬೇಕು ಎಂಬ ಗುರಿ ಇದ್ದು ಅದಕ್ಕೆ ಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ವಿಧಾನ ಸಭಾ ಚುನಾವಣೆಯಲ್ಲಿ ನಾವು ಎಲಾ ಕ್ಷೇತ್ರದಲ್ಲೂ ಸ್ಪರ್ದಿಗಳನ್ನು ನಿಲ್ಲಿಸುತ್ತೇವೆ. ಇಲ್ಲಿ ಯಾವುದೇ ಮೈತ್ರಿಯ ವಿಚಾರವೇ ಇಲ್ಲ. ಯಾರು ಗೊಂದಲಕ್ಕೆ ಒಳಗಾಗದೇ ಕೆಲಸ ಮಾಡಿಕೊಂಡು ಹೋಗಿ ಎಂದು ಹೇಳಿದ್ದಾರೆ.