ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳ ಸಮವಸ್ತ್ರದ ವಿಚಾರವಾಗಿ ವಿದ್ಯಾರ್ಥಿಗಳು ಹಿಜಾಬ್ ಅಥವಾ ಪೂರ್ಣ ತೋಳಿನ ಉಡುಪು ಧರಿಸಲು ಅನುಮತಿಸುವುದಿಲ್ಲ ಎಂದು ಕೇರಳ ಸರ್ಕಾರ ಶುಕ್ರವಾರ ಹೇಳಿದೆ. ರಾಜ್ಯ ಪೊಲೀಸರು ನಿರ್ವಹಿಸುವ ಶಾಲೆ ಇದಾಗಿದ್ದು, ಇಲಿ ಪೊಲೀಸ್ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಈ ಕುರಿತು scroll ವರದಿ ಮಾಡಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಮವಸ್ತ್ರದೊಂದಿಗೆ ಧಾರ್ಮಿಕ ವಿಷಯಗಳನ್ನು ಸೇರಿಸುವುದು ಬೇರೆಯರಿಗೆ ಮತ್ತೊಂದು ಬೇಡಿಕೆಗಳನ್ನು ಹುಟ್ಟುಹಾಕುತ್ತದೆ. ಇದು ಪಡೆಗಳ ಶಿಸ್ತು ಮತ್ತು ಜಾತ್ಯತೀತ ಅಸ್ತಿತ್ವವನ್ನು ಪ್ರಶ್ನಿಸುತ್ತದೆ. ಹಾಗಾಗಿ ಅನುಮತಿ ನೀಡಿರುವುದಿಲ್ಲ ಎಂದು ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಕೇರಳ ಹೈಕೋರ್ಟ್‌ನಲ್ಲಿ 8ನೇ ತರಗತಿ ಬಾಲಕಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರ ಈ ಆದೇಶ ಹೊರಡಿಸಿದೆ. ಹಿಜಾಬ್ ಧರಿಸುವುದು ಅವರ ಮೂಲಭೂತ ಹಕ್ಕು ಎಂದು ಹುಡುಗಿಯರು ವಾದಿಸಿದ್ದರು. ಈ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯ ಗೃಹ ಇಲಾಖೆಗೆ ನ್ಯಾಯಾಲಯ ಸೂಚಿಸಿತ್ತು.
ಶಾಲಾ ಸಿಬ್ಬಂದಿ ಒಂದೇ ಸಮವಸ್ತ್ರವನ್ನು ಧರಿಸುತ್ತಾರೆ ಮತ್ತು ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಅನುಮತಿಸಲಾಗಿಲ್ಲ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದಾರೆ. ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳಂತೆಯೇ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನಂತಹ ಯೋಜನೆಗಳು ಸಹ ಯಾವುದೇ ಧಾರ್ಮಿಕ ಡ್ರೆಸ್ ಕೋಡ್ ಹೊಂದಿಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳ ರಾಜ್ಯ ನೋಡಲ್ ಅಧಿಕಾರಿ ಕೂಡ ಧಾರ್ಮಿಕ ಚಿಹ್ನೆಗಳನ್ನು ಅನುಮತಿಸುವ ಪರವಾಗಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಾರ್ಯಕ್ರಮ ಆರಂಭವಾಗಿ 10 ವರ್ಷಗಳಾದರೂ ಯಾರೂ ಇಂತಹ ಬೇಡಿಕೆಗಳನ್ನು ಮುಂದಿಟ್ಟಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಸುಮಾರು 10% ರಿಂದ 12% ರಷ್ಟು ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಮತ್ತು ಯಾರೂ ಅಂತಹ ಬೇಡಿಕೆಯನ್ನು ಇಟ್ಟಿಲ್ಲ ಎಂದು ಗೃಹ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.













