ಮೈಸೂರಿನ ಜಯಪುರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ನಿಕೀಲ್ ಕುಮಾರ್ ಸ್ವಾಮಿ ಅವರಿಗೆ ಮೈಸೂರು ನಗರದಿಂದ ಜಯಪುರದ ವರೆಗೂ ಅದ್ದೂರಿ ಸ್ವಾಗತ ಮೆರವಣಿಗೆ. ಈ ಹಿನ್ನೆಲೆ ತಡವಾಗಿ ಆರಂಭವಾಗುತ್ತಿರುವ ಕಾರ್ಯಕ್ರಮ ಕಿಕ್ಕಿರಿದು ಸೇರಿರುವ ಜನಸ್ತೋಮ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಯುವನಾಯಕರ ಜನ್ಮದಿನೋತ್ಸವ ಸಮಾವೇಶ ವಾಗಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗು ಶಾಸಕ ಜಿಟಿ ದೇವೇಗೌಡ, ಜಿಡಿ ಹರೀಶ್ ಗೌಡ, ಶಾಸಕ ಅಶ್ವಿನ್ ಕುಮಾರ್, ಕೆ ಮಹದೇವ್, ಮಾಜಿ ಶಾಸಕ ಟಿಬಿ ಚಿಕ್ಕಣ್ಣ ಸೇರಿದಂತೆ ಮುಂತಾದ ಜೆಡಿಎಸ್ ಕಾರ್ಯಕರ್ತರುಗಳು ಭಾಗಿಯಾಗಿದ್ದರು, ಮತ್ತು ವೇದಿಕೆಯಲ್ಲಿ ನೂಕು ನುಗ್ಗುಲು ಪ್ರಾರಂಭವಾಗಿತ್ತು, ಕಾರ್ಯಕರ್ತರನ್ನು ತಡೆಯಲು ಶಾಸಕ ಜಿಟಿಡಿಯಿಂದ ಅರಸಾಹಸವಾಯಿತು ಕಾರ್ಯಕ್ರಮದಲ್ಲಿ ಬಂಡಾಯವೆದ್ದಿದ್ದ ಬೆಳವಾಡಿ ಶಿವಮೂರ್ತಿ ಭಾಗಿಯಾಗಿದ್ದರು, ವೇದಿಕೆಯಲ್ಲಿ ಭಾಷಣ ಆರಂಭಿಸಿದ ಜಿಟಿಡಿ. ಯಾರೋ ಹೇಳ್ತಿದ್ರು 20 ಸಾವಿರ ಜನ ಸೇರಿಸಿ ಅಂತ. ನೋಡಿ ಇಷ್ಟೆಲ್ಲ ಮಂದಿ ಸೇರಿದ್ದೀರಿ.ಇದೆ ಅವರಿಗೆ ಉತ್ತರ ಎಂದ ಶಾಸಕ ಜಿಟಿಡಿ ತಿಳಿಸಿದರು ಚಾಮುಂಡೇಶ್ವರಿ ಕ್ಷೇತ್ರದ ಜನ ಏನೆಂದು ನೀವೆಲ್ಲ ಹಿಂದೆಯೇ ತಿಳಿಸಿದ್ದೀರಿ ನಮ್ಮ ಜನ ಅಥವಾ ನಾನು ಯಾರು ಮಾತಾಡಿಲ್ಲ ಟೀಕಿಸಿದವರಿಗೆ ಉತ್ತರ ನೀವೆಲ್ಲ ನೆರೆದಿರುವುದು ಸುಮಾರು ಒಂದು ಲಕ್ಷ ಜನ ಸೇರಿದ್ದೀರಿ ಕ್ಷೇತ್ರದ ವಿವಿಧ ಭಾಗಗಳಿಂದ ಜನ ಆಗಮಿಸಿದ್ದೀರಿ ಇವೆಲ್ಲ ಜಿಟಿ ದೇವೇಗೌಡ, ಹರೀಶ್ ಗೌಡ ಬೇಕು ಎಂದು ಬಂದಿದ್ದೀರಿ ಹಣಕ್ಕಾಗಿ ಅಲ್ಲ.ಎರಡು ಬಾರಿ ನೀವು ಗೆಲ್ಲಿಸಿದ್ದೀರಿ ಮೂರನೇ ಬಾರಿಯು ಜೆಡಿಎಸ್ ಮತ ನೀಡಿ ಗೆಲ್ಲಿಸಿ ನೀವು ಹಾಕುವ ಒಂದೊಂದು ವೋಟು ಹೆಚ್ ಡಿ ದೇವೇಗೌಡರಿಗೆ ವಜ್ರದ ಹಾರದ ಹಾಗೆ. ನಿಮ್ಮ ವೋಟು ವಜ್ರದ ಹಾರ ಇದ್ದಂತೆ,
ಕೊರೊನದಲ್ಲಿ ಪ್ರತಿ ಮನೆಗೂ ಅಧಿಕಾರಿಗಳ ಮೂಲಕ ಅಗತ್ಯ ವಸ್ತುಗಳನ್ನ ತಲುಪಿಸಿದ್ದು ಜಿಟಿಡಿ. ಬಹಳ ಜನ ನನ್ನನ್ನ ಏನು ಮಾಡಿಲ್ಲ ಎನ್ನುತ್ತಾರೆ. ನಮಗೆ ಯಾರು ಸರಿಸಾಟಿ ಇಲ್ಲ ಎಂದು ನೀವು ಸಾಭಿತುಪಡಿಸಿದ್ದೀರಿ. ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯಾರ್ಥಿಗಳನ್ನ ಗೆಲ್ಲಿಸಬೇಕು ಮತ್ತೆ ಕುಮಾರಸ್ವಾಮಿಯನ್ನು ಸಿಎಂ ಮಾಡಬೇಕು. ಇನ್ನೂ ಕೆಲಸಗಳು ಬಾಕಿ ಇದೆ. ಊರುರಿಗೂ ಬರುತ್ತೇನೆ ಎಂದ ಶಾಸಕ ಜಿಟಿಡಿ ,ಹರೀಶ್ ಗೌಡ ಹುಣಸೂರಿನಲ್ಲಿ ಗೆದ್ದೇ ಗೆಲ್ಲುತ್ತಾರೆ ಹೆಚ್ಡಿಕೆ ನಿಖಿಲ್ ಇಬ್ಬರು ನನ್ನ ಇಬ್ಬರು ಕಣ್ಣುಗಳು ಈ ಇಬ್ಬರು ಲವ ಕುಶ ಇದ್ದಹಾಗೆ ನಿಖಿಲ್ ಮುಂದೆ ಬಲಿಷ್ಠ ನಾಯಕನಾಗುತ್ತಾನೆ. ಕಾರ್ಯಕ್ರಮದಲ್ಲಿ ಶಾಸಕ ಜಿಟಿಡಿ ಹೇಳಿಕೆ ನಿಡಿದರು,
ಚಾಮುಂಡೇಶ್ವರಿ ಕ್ಷೇತ್ರ ಒಂದು ಪವರ್ ಫುಲ್ ಕ್ಷೇತ್ರ ಟೀಕೆ ಮಾಡಿದವರ ಬಗ್ಗೆ ಜನ ತೀರ್ಮಾನ ಮಾಡಬೇಕು. ನನ್ನ ಚರಿತ್ರೆಯ ಬಗ್ಗೆ ಗುಣದ ಬಗ್ಗೆ ಸೇರ್ಟಿಫಿಕೇಟ್ ಕೊಡೋಕೆ ನೀವ್ ಇದ್ದೀರಿ.ದೇವಸ್ಥಾನಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಟಿಕೆ ಮಾಡಿದ್ದರು.ಬೇರೆ ಕ್ಷೇತ್ರದ ಜನರನ್ನ ಕರೆಸಿ ಸಮಾವೇಶ ಮಾಡೋದಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಜನರನ್ನ ಸೇರಿಸಿ ಸಮಾವೇಶ ಮಾಡಲಿ ಎಂದು ಸವಾಲ್ ಹಾಕಿದ್ದರು. ಅವರಿಗೆ ಇಂದು ನೀವೆಲ್ಲ ಉತ್ತರ ನೀಡಿದ್ದೀರಿ. ವೇದಿಕೆಯಲ್ಲಿ ಭಾಷಣದ ಉದ್ದಕ್ಕೂ ಮಾವಿನಹಳ್ಳಿ ಸಿದ್ದೇಗೌಡ ಟೀಮ್ ಬಗ್ಗೆ ವಾಗ್ದಾಳಿ ನಡೆಸಿದ ಜಿಟಿಡಿ ಪುತ್ರ ಹರೀಶ್ ಗೌಡ.