ಎರಡನೆಮಹಾಯುದ್ಧದಸಂದರ್ಭದಲ್ಲಿಜೆಕೋಸ್ಲೋವೇಕಿಯಾದ೬೬೯ಮಕ್ಕಳನ್ನುಹಿಟ್ಲರನನಾಝಿಗಳಿಂದ ರಕ್ಷಿಸಿದ ಮಹಾನ್ ಚೇತನ
ಮೂಲ : ನ್ಯೂಯಾರ್ಕ್ ಟೈಮ್ಸ್ ಜುಲೈ 1 2015
ಸಂಗ್ರಹಾನುವಾದ : ನಾ ದಿವಾಕರ
ವಿಂಟನ್ ನಿಕೋಲಸ್ ಜೀವನಗಾಥೆ
ವಿಂಟನ್ ನಿಕೋಲಸ್ ಮೇ 19, 1909 ರಂದು ಲಂಡನ್ನಲ್ಲಿ ನಿಕೋಲಸ್ ಜಾರ್ಜ್ ವರ್ತೈಮ್ ದಂಪತಿಗಳಿಗೆ ಜನಿಸಿದರು. ಅವರ ಪೋಷಕರು ಜರ್ಮನ್-ಯಹೂದಿ ಮೂಲದವರಾಗಿದ್ದರು ಆದರೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ಮತ್ತು ಕುಟುಂಬದ ಹೆಸರನ್ನು ವಿಂಟನ್ ಎಂದು ಬದಲಾಯಿಸಿದರು. ಅವರ ತಂದೆ ವ್ಯಾಪಾರಿ ಬ್ಯಾಂಕರ್ ಆಗಿದ್ದರು, ಮತ್ತು ನಿಕೋಲಸ್ ಮತ್ತು ಅವರ ಒಡಹುಟ್ಟಿದವರಾದ ಬಾಬಿ ಮತ್ತು ಷಾರ್ಲೆಟ್ ಲಂಡನ್ನಿನ ವೆಸ್ಟ್ ಹ್ಯಾಂಪ್ಸ್ಟೆಡ್ನಲ್ಲಿ 20 ಕೋಣೆಗಳ ಬಂಗಲೆಯಲ್ಲಿ ಬೆಳೆದರು. ಅವರು ಮತ್ತು ಬಾಬಿ ನುರಿತ ಫೆನ್ಸರ್ಗಳಾಗಿದ್ದರು. ತಮ್ಮ ಜೀವನದ ಕೊನೆಯಲ್ಲಿ ನಿಕೋಲಸ್ ಸ್ವತಃ ಫೆನ್ಸಿಂಗ್ ಕ್ರೀಡೆಯ ವಿಂಟನ್ ಕಪ್ ಸ್ಥಾಪಿಸಿದರು ಇಂದಿಗೂ ಇದು ಕ್ರೀಡಾ ವಲಯದಲ್ಲಿ ಪ್ರಮುಖ ಬ್ರಿಟಿಷ್ ಸ್ಪರ್ಧೆಯಾಗಿದೆ. ಬಂಕಿಂಗ್ಹ್ಯಾಮ್ನ ಸ್ಟೋವ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಿಕೋಲಸ್ ಲಂಡನ್ನ ಅಂತರರಾಷ್ಟ್ರೀಯ ಬ್ಯಾಂಕಿಂಗ್ನಲ್ಲಿ ತರಬೇತಿ ಪಡೆದ ನಂತರ ಹ್ಯಾಂಬರ್ಗ್ನ ಬೆಹ್ರೆನ್ಸ್ ಬ್ಯಾಂಕ್, ಬರ್ಲಿನ್ನ ವಾಸೆರ್ಮನ್ ಬ್ಯಾಂಕ್ ಮತ್ತು ಪ್ಯಾರಿಸ್ನ ಬ್ಯಾಂಕ್ ನ್ಯಾಷನಲ್ ಡಿ ಕ್ರೆಡಿಟ್ನಲ್ಲಿ ನೌಕರಿ ಮಾಡಿದ್ದರು. ವಿಂಟನ್ ೧೯೩೧ ರಲ್ಲಿ ಲಂಡನ್ಗೆ ಹಿಂದಿರುಗಿದಾಗ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ಮತ್ತು ಸ್ಟಾಕ್ ಬ್ರೋಕರ್ ಆಗಿ ಕಾರ್ಯನಿರ್ವಹಿಸಿದ್ದರು.
![](https://pratidhvani.com/wp-content/uploads/2023/08/D66y2V4WsAAMpXZ-1.jpg)
ಅವರು ಯುದ್ಧದಲ್ಲಿ ರಾಯಲ್ ಏರ್ ಫೋರ್ಸ್ ಅಧಿಕಾರಿಯಾಗಿದ್ದರು ಮತ್ತು ನಂತರ ನಿರಾಶ್ರಿತರ ಸಂಸ್ಥೆಗಳು ಮತ್ತು ವಯಸ್ಸಾದವರಿಗೆ ಸಹಾಯ ಮಾಡುವ ದತ್ತಿ ಸಂಸ್ಥೆಯಾದ ಅಬ್ಬೆಫೀಲ್ಡ್ ಸೊಸೈಟಿಗಾಗಿ ಕೆಲಸ ಮಾಡಿದರು. ಅವರು ಒಂದು ನಿಧಿ ಸಂಗ್ರಹ ಅಭಿಯಾನದಲ್ಲಿ ಒಂದು ಮಿಲಿಯನ್ ಪೌಂಡ್ಗಿಂತ ಹೆಚ್ಚು ಹಣವನ್ನು ಸಂಗ್ರಹಿಸಿದರು. 1983 ರಲ್ಲಿ ಅವರ ದತ್ತಿ ಕಾರ್ಯಗಳಿಗಾಗಿ ಅವರನ್ನು ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ನ ಸದಸ್ಯರನ್ನಾಗಿ ಮಾಡಲಾಯಿತು. ಆದರೆ 50 ವರ್ಷಗಳ ಕಾಲ ಅವರು ತಾವು ಕೈಗೊಂಡ ಮಕ್ಕಳ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಏನನ್ನೂ ಹೇಳಿರಲಿಲ್ಲ, 1948 ರಲ್ಲಿ ಅವರು ಮದುವೆಯಾದ ನಂತರವೂ ಸಹ ಪತ್ನಿ ಗ್ರೆಟ್ ಗೆಲ್ ಸ್ಟ್ರಪ್ ಅವರಿಗೂ ಯಾವುದೇ ವಿಷಯ ತಿಳಿಸಿರಲಿಲ್ಲ. ಅವರಿಗೆ ನಿಕೋಲಸ್, ಬಾರ್ಬರಾ ಮತ್ತು ರಾಬಿನ್ ಎಂಬ ಮೂವರು ಮಕ್ಕಳಿದ್ದರು. ರಾಬಿನ್ 1962 ರಲ್ಲಿ 7 ನೇ ವಯಸ್ಸಿನಲ್ಲಿ ನಿಧನರಾದರು. ವಿಂಟನ್ ಅವರ ಪತ್ನಿ 1999 ರಲ್ಲಿ ನಿಧನರಾದರು. ಅವರ ಸಾವಿನ ಸಮಯದಲ್ಲಿ ಅವರ ಮಗಳು ಬಾರ್ಬರಾ ಮತ್ತು ಇಬ್ಬರು ಮೊಮ್ಮಕ್ಕಳು ಅವರ ಪಕ್ಕದಲ್ಲಿದ್ದರು ಎಂದು ರೋಟರಿ ಕ್ಲಬ್ ಆಫ್ ಮೇಡನ್ಹೆಡ್ ಹೇಳಿದೆಯಾದರೂ ಅವರ ಬದುಕುಳಿದವರ ಬಗ್ಗೆ ಸಂಪೂರ್ಣ ಮಾಹಿತಿ ತಕ್ಷಣ ಲಭ್ಯವಿಲ್ಲ.
ಹೆಸರುಗಳು, ಚಿತ್ರಗಳು, ಕುಟುಂಬಗಳಿಂದ ಬಂದ ಪತ್ರಗಳು, ಪ್ರಯಾಣದ ದಾಖಲೆಗಳು ಮತ್ತು ಅವರ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವ ಟಿಪ್ಪಣಿಗಳಿಂದ ತುಂಬಿದ್ದ ಅವರ ದೀರ್ಘಕಾಲದ ಗುಪ್ತ Scrap book ಕಂಡುಕೊಂಡ ನಂತರ ಅವರ ಪತ್ನಿ ನಡೆದ ಘಟನೆಗಳ ವಿವರ ಕೇಳಿದ್ದರೂ ಹೆಚ್ಚಿನ ಮಾಹಿತಿ ನೀಡದ ವಿಂಟನ್ ನಿಕೋಲಸ್ ಆ ಕಡತಗಳಿಗೆ ಯಾವುದೇ ಮೌಲ್ಯವಿಲ್ಲ ಎಂದು ಭಾವಿಸಿದುದೇ ಅಲ್ಲದೆ ಅವುಗಳನ್ನು ನಿರ್ಲಕ್ಷಿಸಲು ಹೇಳಿದ್ದರು. ಆದರೆ ಆ ಕಡತಗಳನ್ನು ಎಸೆಯಲು ನಿರಾಕರಿಸಿದ ಪತ್ನಿ ಸಂರಕ್ಷಿಸಿದ್ದರು. “ಸಂಭವಿಸಿದ ಆ ಘಟನೆಗಳು ಯಾರಿಗಾದರೂ ಆಸಕ್ತಿದಾಯಕವಾಗಿರುತ್ತವೆ ಎಂಬ ಆಲೋಚನೆಯೇ ನನಗಿರಲಿಲ್ಲ” ಎಂದು ಹೇಳುತ್ತಿದ್ದ ವಿಂಟನ್ ಒಲ್ಲದ ಮನಸ್ಸಿನಿಂದ ಅವುಗಳನ್ನು ಶೋಧಿಸಲು ಪತ್ನಿಗೆ ಅನುಮತಿ ನೀಡಿದ್ದರು. Scrap book ಪುಸ್ತಕವನ್ನು ಇತಿಹಾಸಕಾರರಿಗೆ ನೀಡಿದ ವಿಂಟನ್ ಅವರ ಪತ್ನಿಯ ಪ್ರಯತ್ನದಿಂದ ಪತ್ರಿಕೆಯಲ್ಲಿ ಈ ಕುರಿತ ಲೇಖನವೊಂದು ಪ್ರಕಟವಾಗಿತ್ತು. ನಂತರ ಬಿಬಿಸಿ ದೂರದರ್ಶನ ಕಾರ್ಯಕ್ರಮವು ಅವರ ರಕ್ಷಣೆಯ ಸಾಹಸಗಾಥೆಯನ್ನು ಪ್ರಸಾರ ಮಾಡುವ ಮೂಲಕ ವಿಶ್ವದಾದ್ಯಂತ ಪ್ರಚಾರ ಮಾಡಿತ್ತು
![](https://pratidhvani.com/wp-content/uploads/2023/08/young-Nicholas-Winton-with-rescued-child-e1401445882977-640x400-2.jpg)
ಜೆಕ್ ಗಣರಾಜ್ಯದ ಅತ್ಯುನ್ನತ ಪ್ರಶಸ್ತಿ, ಪ್ರಾಗ್ನ ಗೌರವ ಪೌರತ್ವ, ಅಮೆರಿಕದ ಕಾಂಗ್ರೆಸ್ ಗೌರವ ನಿರ್ಣಯ, ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್, ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಇಸ್ರೇಲ್ ಮಾಜಿ ಅಧ್ಯಕ್ಷ ಎಜರ್ ವೀಜ್ಮನ್ ಮತ್ತು ವಿಶ್ವದಾದ್ಯಂತದ ಜನರಿಂದ ಪ್ರಶಂಸಾ ಪತ್ರಗಳನ್ನು ಪಡೆದಿದ್ದ ವಿಂಟನ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಂತೆ ಜೆಕ್ ಗಣರಾಜ್ಯದಿಂದ ನಾಮನಿರ್ದೇಶನ ಮಾಡಲಾಗಿತ್ತು. ಅವರ Scrap book ಇಸ್ರೇಲ್ನ ಹತ್ಯಾಕಾಂಡ ಸ್ಮಾರಕವಾದ ಯಾದ್ ವಾಶೆಮ್ಗೆ ತಲುಪಿತ್ತು. ರಸ್ತೆಗಳು ಮತ್ತು ಶಾಲೆಗಳಿಗೆ ಅವರ ಹೆಸರನ್ನು ಇಡಲಾಯಿತು. ಪ್ರಾಗ್ ಮತ್ತು ಲಂಡನ್ ನಲ್ಲಿ ಪ್ರತಿಮೆಗಳು ತಲೆಯೆತ್ತಿದವು. ಲೇಖಕಿ ಗಿಸ್ಸಿಂಗ್ ಹಾಗೂ ಮ್ಯೂರಿಯಲ್ ಇಮ್ಯಾನ್ಯುಯೆಲ್ ಅವರ Nicholas Winton and the Rescued Generation: Save One Life, Save the World (2001) ಪುಸ್ತಕದಲ್ಲಿ ಹೇಳುವಂತೆ ವಿಂಟನ್ ಅವರ ಖ್ಯಾತಿಯನ್ನು ಖುದ್ದು ನಂಬುತ್ತಿರಲಿಲ್ಲ. ಆಸ್ಕರ್ ಷಿಂಡ್ಲರ್ ಮತ್ತು ರೌಲ್ ವಾಲೆನ್ಬರ್ಗ್ ಅವರಿಗೆ ಹೋಲಿಸಿವುದನ್ನು ವಿಂಟನ್ ನಿಕೋಲಸ್ ಒಪ್ಪುತ್ತಲೇ ಇರಲಿಲ್ಲ ಎಂದು ಈ ಲೇಖಕರು ಹೇಳುತ್ತಾರೆ. ಆದಾಗ್ಯೂ”ಮಾನವ ಜನಾಂಗಕ್ಕೆ ಅವರ ಕೊಡುಗೆ ಅಪಾರ ಎಂದು ಲೇಖಕರು ಪ್ರತಿಪಾದಿಸುತ್ತಾರೆ.
![](https://pratidhvani.com/wp-content/uploads/2023/08/download-2-1.jpg)
ಸ್ಲೋವಾಕ್ ನಿರ್ದೇಶಕ ಮ್ಯಾಟೆಜ್ ಮಿನಾಕ್ ಅವರ ಮೂರು ಚಲನಚಿತ್ರಗಳಲ್ಲಿ ಈ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅನ್ವೇಷಿಸಲಾಗಿದೆ: ಕಾಲ್ಪನಿಕ “ಆಲ್ ಮೈ ಲವ್ಡ್ ಒನ್ಸ್” (1999); “ದಿ ಪವರ್ ಆಫ್ ಗುಡ್: ನಿಕೋಲಸ್ ವಿಂಟನ್” (2002) ಎಂಬ ಸಾಕ್ಷ್ಯಚಿತ್ರ; ಮತ್ತು “ನಿಕಿಸ್ ಫ್ಯಾಮಿಲಿ” (2011), ಮತ್ತು ಮಿಸ್ಟರ್ ಮಿನಾಕ್ ಅವರ ಪುಸ್ತಕ, “ನಿಕೋಲಸ್ ವಿಂಟನ್ಸ್ ಲಾಟರಿ ಆಫ್ ಲೈಫ್” (2007) ಈ ಸಾಹಸಗಾಥೆಯನ್ನು ದಾಖಲಿಸಿರುವ ಮೂಲಗಳು. ಸೆಪ್ಟೆಂಬರ್ 1, 2009 ರಂದು ಯುದ್ಧ ಪ್ರಾರಂಭವಾದ 70 ವರ್ಷಗಳ ನಂತರ 1930ರ ದಶಕದ ಲೋಕೋಮೋಟಿವ್ ಮತ್ತು ಗಾಡಿಗಳನ್ನು ಹೊಂದಿರುವ ವಿಶೇಷ ರೈಲು 1939ರ ಅಪಾಯಕಾರಿ ಪ್ರಯಾಣಗಳನ್ನು ಮರುಸೃಷ್ಟಿಸಲು ಪ್ರಾಗ್ನಿಂದ ಹೊರಟಿತು. ಹಡಗಿನಲ್ಲಿ ಕೆಲವು ವಿಂಟನ್ ನಿಕೋಲಸ್ ಅವರ ಮೂಲ ಸಂತತಿ ಮತ್ತು ಅವರ ಅನೇಕ ವಂಶಸ್ಥರು ಇದ್ದರು. ಅವರ ಸಂಖ್ಯೆ ಈಗ 6,000 ಮೀರಿದೆ. ವಿಂಟನ್ ನಿಕೋಲಸ್ ತಮ್ಮ 106ನೆಯ ವಯಸ್ಸಿನಲ್ಲಿ ಜುಲೈ 1 , 2015ರಂದು ಕೊನೆಯುಸಿರೆಳೆದರು.
ವಿಂಟನ್ ನಮ್ಮ ನಡುವೆ ಇಲ್ಲವಾದರೂ 669 ಅಮೂಲ್ಯ ಜೀವಗಳನ್ನು ಉಳಿಸಿದ ಅವರ ಸಾಹಸಗಾಥೆ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ.
ಅಡಿ ಟಿಪ್ಪಣಿ ಜೆಕೊಸ್ಲೋವೇಕಿಯಾದ ಶಾಲಾ ಮಕ್ಕಳು ವಿಂಟನ್ ಅವರ 103ನೆಯ ವಯಸ್ಸಿನಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವಂತೆ ಒತ್ತಾಯಿಸಿ 1 ಲಕ್ಷ 70 ಸಾವಿರ ಜನರ ಸಹಿ ಸಂಗ್ರಹ ಮಾಡಿ ಜೆಕೊಸ್ಲೋವೇಕಿಯಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ವಿಂಟನ್ ಅವರಿಗೆ ನೊಬೆಲ್ ಒದಗಿಬರಲಿಲ್ಲ. ವಿಂಟನ್ ನಿಕೋಲಸ್ ಕಾಪಾಡಿದ ಮಕ್ಕಳ ಪೈಕಿ ಕೆಲವು ಪ್ರಮುಖ ಪ್ರತಿಷ್ಠಿತರ ಹೆಸರುಗಳು ಇಲ್ಲಿವೆ : ಲೆಸ್ಲೀ ಬರೂಚ್ ಬ್ರೆಂಟ್ (1925-2019) ಇಮ್ಯುನಾಲಜಿಸ್ಟ್ ಆಲ್ಫ್ ಡಬ್ಸ್-ಬೇರನ್ ಡಬ್ಸ್ (1932) ಬ್ರಿಟನ್ನಿನ ಲೇಬರ್ ಪಕ್ಷದ ಮಾಜಿ ಸಂಸದ ಹೀನೀ ಹಾಲ್ಬರ್ಸ್ಟಾಮ್ ( 1926-2014) ಗಣಿತಜ್ಞ ರೆನಾಟಾ ಲ್ಯಾಕ್ಷೋವಾ ( 1931-2020) ಶಿಶುವೈದ್ಯಕೀಯ ತಳಿವಿಜ್ಞಾನಿ ಇಸಿ ಮೆಟ್ಜ್ಸ್ಟೀನ್ ( 1928-2012) ಆಧುನಿಕ ವಾಸ್ತುಶಿಲ್ಪ ತಜ್ಞರು ಗೆರ್ಡಾ ಮೇಯೆರ್ ( 1927-2021) ಕವಿ ಕೇರೆಲ್ ರೀಝ್ (1926-2002) ಸಿನೆಮಾ ನಿರ್ಮಾಪಕರು ಜೋ ಷ್ಲೀಸಿಂಗರ್ (1928-2019) ಕೆನಡಾದ ಟಿವಿ ಪತ್ರಕರ್ತರು-ಲೇಖಕರು ಯಿಷೋಕ್ ಟುವಿಯಾವೀಸ್ (1926-2022) ಜೆರುಸೆಲಮ್ನ Edah HaChareidisನ ಮುಖ್ಯಸ್ಥರು ವೆರಾ ಗಿಸ್ಸಿಂಗ್ ( 1928-2022) ಲೇಖಕರು-ಅನುವಾದಕರು. |