ಪೆಟ್ರೋಲ್, ಡೀಸೆಲ್, ತರಕಾರಿ ದಿನನಿತ್ಯದ ಬಳಸುವ ವಸ್ತುಗಳು ಸಹ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದರೆ. ನಿನ್ನೆ ಅಷ್ಟೇ ಹೊಸ ಜಿಎಸ್ಟಿ ನೀತಿ ತಂದು ಸಿಕ್ಕ ಸಿಕ್ಕ ವಸ್ತುಗಳ ಮೇಲೆ ಜಿಎಸ್ಟಿ ಹಾಕಿದ್ದಾರೆ ಇದರ ಬೆನ್ನಲ್ಲೇ ಈಗ ಬೆಂಗಳೂರಿನ ನೈಸ್ ರಸ್ತೆ ಟೋಲ್ ದರವನ್ನು ಕೂಡ ಹೆಚ್ಚಳ ಮಾಡಲಾ. ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ.
ಯಾವ ಮಾರ್ಗದಲ್ಲಿ ಎಷ್ಟು ದರ?
ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ನೀವು ಸಂಚರಿಸುವ ಬೈಕ್ ಗಳಿಗೆ 20 ರೂ. ಟೋಲ್ ದರ ಫಿಕ್ಸ್ ಮಾಡಿದರೆ ಕಾರುಗಳಿಗೆ 45 ರೂ ಆಗಿದೆ.
ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ನೀವು ಸಂಚರಿಸುವ ಕಾರ್ ಗಳಿಗೆ 35, ಬೈಕ್ ಗಳಿಗೆ 12 ರೂ ಆಗಿದೆ.
ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ನೀವು ಸಂಚರಿಸುವ ಕಾರ್ ಗಳಿಗೆ 25, ಬೈಕ್ ಗಳಿಗೆ 8 ರೂ.
ಕ್ಲವರ್ ಲೀಫ್ ನಿಂದ ಮೈಸೂರು ರಸ್ತೆಯಲ್ಲಿ ನೀವು ಸಂಚರಿಸುವ ಕಾರ್ ಗೆ 20, ಬೈಕ್ ಗೆ 8 ರೂ.
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಯಲ್ಲಿ ನೀವು ಸಂಚರಿಸುವ ಕಾರ್ ಗಳಿಗೆ 45, ಬೈಕ್ ಗಳಿಗೆ 20 ರೂ.
ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಯಲ್ಲಿ ನೀವು ಸಂಚರಿಸುವ ಕಾರ್ ಗಳಿಗೆ 40, ಬೈಕ್ ಗಳಿಗೆ 12 ರೂ.
ಲಿಂಕ್ ರಸ್ತೆಯಲ್ಲಿ ನೀವು ಸಂಚರಿಸುವ ಕಾರ್ ಗಳಿಗೆ 50, ಬೈಕ್ ಗಳಿಗೆ 18 ರೂ. ಪಾವತಿಸಬೇಕಾಗುತ್ತದೆ.