ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಕನಸುಗಳನ್ನು ಹೊತ್ತುಬರುವ ಸಿನಿಮೋತ್ಸಾಹಿಗಳಿಗೇನು ಕೊರತೆ ಇಲ್ಲ. ಆದ್ರೆ ಆ ಸಿನಿಮೋತ್ಸಾಹಿಗಳ ಕಲೆಗೆ ಬೆಲೆ ಕೊಡುವ ನಿರ್ಮಾಪಕರು ಬೇಕು. ಸದ್ಯಕ್ಕೆ ಯುವ ಪ್ರತಿಭೆಗಳ, ಪ್ರತಿಭಾನ್ವಿತ ಕಲಾವಿದರಿಗೆ ಸಿನಿಮಾ ಮಾಡುವ ಹಂಬಲ ಕನಸು ಹೊತ್ತು ಎಸ್ ವಿಸಿ ಫಿಲ್ಮಂಸ್ ಎಂಬ ಪ್ರೊಡಕ್ಷನ್ ಹೌಸ್ ನಿರ್ಮಾಣಗೊಂಡಿದ್ದು, ಎಂ ಮುನೇಗೌಡ ಸಾರಥ್ಯದ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರ ಅನೌನ್ಸ್ ಆಗಿದೆ.
ಕನ್ನಡ ಚಿತ್ರರಂಗದ ಇಬ್ಬರು ಪ್ರತಿಭಾನ್ವಿತ ನಾಯಕರಿಗೆ ನಿರ್ಮಾಣ ಮಾಡುವ ಕೆಲಸಕ್ಕೆ ಎಂ ಮುನೇಗೌಡ ಮುಂದಾಗಿದ್ದು ಬುಧವಾರ ಎಸ್ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನ ಮೊದಲ ಚಿತ್ರದ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸ್ತಿರುವ ಸಿನಿಮಾಗೆ ಭುವನಂ ಗಗನಂ ಎಂಬ ಟೈಟಲ್ ಇಡಲಾಗಿದ್ದು, ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದ ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಪ್ರಮೋದ್, ಕ್ಲಾಸ್ ಲವ್ ಸ್ಟೋರಿ ಸಿನಿಮಾ ಹುಡುಕುತ್ತಿದ್ದೇ. ಈ ಕಥೆ ಕೇಳಿ ಏನೋ ಇಷ್ಟ ಆಗಿದೆ. ನಾನು ಈ ಸಿನಿಮಾದಲ್ಲಿ ಬೇರೆ ರೀತಿ ಕಾಣಿಸ್ತೇನೆ. ಇಡೀ ಸಿನಿಮಾ ನನಗೆ ಬೇರೆ ಮಜಲು ಕ್ರಿಯೇಟ್ ಮಾಡುತ್ತದೆ ಅನ್ನೋ ನಂಬಿಕೆ ಈ ಚಿತ್ರ ಒಪ್ಪಿಕೊಂಡಿದ್ದೇನೆ. ಈ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ಒಳ್ಳೆ ಸಿನಿಮಾವಾಗುತ್ತದೆ. ಎಲ್ಲರೂ ಸೇರಿ ಕೆಲಸ ಮಾಡೋಣಾ ಎಂದರು.

ಪೃಥ್ವಿ ಅಂಬಾರ್, ಯಾವುದೇ ಸಿನಿಮಾವಾಗಲಿ ಫ್ಯಾಷನೇಟೇಡ್ ನಿರ್ಮಾಪಕರು, ನಿರ್ದೇಶಕರು ಬೇಕು. ಈ ಸಿನಿಮಾದಲ್ಲಿ ಎರಡು ಇದೆ. ನಿರ್ದೇಶಕರ ಜೊತೆ ಈ ಹಿಂದೆ ಕೆಲಸ ಮಾಡಿದ್ದೇನೆ. ನನಗೆ ಟೈಟಲ್ ಬಹಳ ಇಷ್ಟವಾಯ್ತು. ನನ ಹೆಸ್ರು ಅರ್ಥ ಕೂಡ ಭುವನಂ ಗಗನಂ. ಕಥೆ ಕೇಳಿದಾಗ ನನಗೆ ಬಹಳ ಕನೆಕ್ಟ್ ಆಗಿತ್ತು. ಪ್ರಮೋದ್ ಅದ್ಭುತ ಕಲಾವಿದ. ಇಡೀ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ಕೊಡುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಿರ್ದೇಶಕ ಗಿರೀಶ್ ಮೂಲಿಮನಿ, ಈ ಹಿಂದೆ ರಾಜರು ಎಂಬ ಸಿನಿಮಾ ಮಾಡಿದ್ದೇನೆ. ಇದು ನನ್ನ ಎರಡನೇ ಸಿನಿಮಾ. ಎಸ್ವಿಸಿ ಬ್ಯಾನರ್ ಅಂದ್ರೆ ಅದು ಡ್ರೀಮ್. ಸಿನಿಮಾ ಮಾಡೋದು ಅವರ ಕನಸು. ಎಸ್ವಿಸಿ ಬ್ಯಾನರ್ ನಡಿ ನನಗೆ ಮೊದಲ ಸಿನಿಮಾ ಮಾಡಲು ಅವಕಾಶ ಸಿಕ್ಕಿರೋದು ಖುಷಿ. ನನ್ನ ಹೊಸ ಜರ್ನಿ ಸಕ್ಸಸ್ ಆಗುತ್ತೇ, ಒಂದೊಳ್ಳೆ ಸಿನಿಮಾ ನೀಡುತ್ತೇವೆ ಎಂಬ ನಂಬಿಕೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಎಂ ಮುನೇಗೌಡ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ನಿರ್ದೇಶಕರು ಹೇಳಿದ ಕಥೆ ವಿಭಿನ್ನ ಅನಿಸಿತು. ಒಳ್ಳೆ ಕಲಾವಿದರ ದಂಡೇ ಇದೆ. ಪ್ರತಿಯೊಬ್ಬರು ಸಿನಿಮಾಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.
ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ವಾಮನ ಸಿನಿಮಾದ ನಾಯಕಿ ರಚನಾ ರೈ ನಟಿಸ್ತಿದ್ದಾರೆ. ಬರುವ ಜುಲೈ 1ರಿಂದ ಸಿನಿಮಾದ ಶೂಟಿಂಗ್ ಶುರುವಾಗ್ತಿದ್ದು, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಈ ಸಿನಿಮಾಕ್ಕಿದೆ.
