• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭವಿಷ್ಯಕ್ಕಾಗಿ ನೀರು ಉಳಿಸುವುದು ನಮ್ಮೆಲ್ಲರ ಕರ್ತವ್ಯ:ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
February 18, 2025
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ಕರ್ನಾಟಕದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿ.

ADVERTISEMENT

“ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ “2047ರಲ್ಲಿ ಭಾರತ ಜಲ ಸಮೃದ್ಧಿ ರಾಷ್ಟ್ರ” ಎಂಬ 2ನೇ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.

“ಕರ್ನಾಟಕ ರಾಜ್ಯದ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಂಡು ಅನುಮತಿ ಕೊಡಿಸಬೇಕು. ಮೇಕೆದಾಟು ಯೋಜನೆಗೆ ಡಿಪಿಆರ್ ಪರಿಗಣಿಸಿ, ಅನುಮತಿ ನೀಡುವಂತೆ ಸಿಡಬ್ಲ್ಯೂಸಿಗೆ ನಿರ್ದೇಶನ ನೀಡಬೇಕು. ಇದರಿಂದ ತಮಿಳುನಾಡಿಗೆ ಪ್ರತಿ ತಿಂಗಳ ಲೆಕ್ಕಾಚಾರದ ನೀರು ನೀಡಬಹುದು. ಜತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“2023-24 ರ ಕೇಂದ್ರ ಬಜೆಟ್ನಲ್ಲಿ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದ್ದರೂ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಬೇಗನೆ ಯೋಜನೆ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡುವಂತೆ ಸಚಿವಾಲಯಕ್ಕೆ ವಿನಂತಿಸುತ್ತೇನೆ” ಎಂದರು.

“2011 ರ ಸೆಪ್ಟೆಂಬರ್ 16 ರಂದು ನೀಡಿರುವ ತೀರ್ಪಿನಲ್ಲಿ ಕೆಲವು ಬದಲಾವಣೆ ಮಾಡಲು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು (KWDT-II) 2010ರಲ್ಲಿ ನೀಡಿರುವ ತೀರ್ಪಿನ ಅನ್ವಯ ತನಗೆ ಮೀಸಲಾಗಿರುವ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ” ಎಂದು ಹೇಳಿದರು.

“ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮೇಲೆ ಒತ್ತಡ ತಂದು, 2018ರ ಆಗಸ್ಟ್ ನಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ನೀಡಿದ ತೀರ್ಪಿನ ಅನ್ವಯ ಕಳಸಾ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ದೊರಕಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಮೇಲೆ ಒತ್ತಡ ಹೇರಿ, ನದಿ ಜೋಡಣೆ ಯೋಜನೆಯಡಿ ಗೋದಾವರಿ- ಕಾವೇರಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪಾಲನ್ನು ಮರುಪರಿಶೀಲನೆ ಮಾಡಬೇಕು. ಈ ಯೋಜನೆಯಡಿ ಪ್ರಸ್ತುತ ಕರ್ನಾಟಕಕ್ಕೆ ಕೇವಲ 15.891 ಟಿಎಂಸಿ (ಶೇ. 10.74) ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆ” ಎಂದರು.

“ನಮ್ಮ ದೇಶವು ಪ್ರಪಂಚದ ಶೇ.18 ರಷ್ಟು ಜನಸಂಖ್ಯೆ ಹೊಂದಿದೆ. ಆದರೆ ಶೇ. 4 ರಷ್ಟು ಮಾತ್ರ ಶುದ್ದ ಕುಡಿಯುವ ನೀರಿನ ಮೂಲವನ್ನು ಹೊಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶವು ಸಾಕಷ್ಟು ಸವಾಲು ಎದುರಿಸಬೇಕಿದೆ. ಕೃಷಿ ಅಗತ್ಯಗಳಿಗೆ, ಬೆಳೆಯುತ್ತಿರುವ ಜನಸಂಖ್ಯೆಗೆ, ನಗರಗಳ ವಿಸ್ತರಣೆಗೆ, ಕೈಗಾರಿಕೆಗಳಿಗೆ ನೀರು ಬೇಡಿಕೆ ಪೂರೈಸಲು ಈಗಿನಿಂದಲೇ ಸನ್ನದ್ಧವಾಗಿರಬೇಕು” ಎಂದು ಹೇಳಿದರು.

“ದೇಶದಲ್ಲಿ ಈವರೆಗೆ ಸುಮಾರು 253 ಶತಕೋಟಿ ಘನ ಮೀಟರ್ (BCM) ನೀರಿನ ಸಂಗ್ರಹಣಾ ಸಾಮರ್ಥ್ಯವಿದೆ. ನಮ್ಮ ದೇಶವು ಸುಸ್ಥಿರ ಪ್ರಗತಿ ಸಾಧಿಸಲು ನೀರಿನ ಸಂಪನ್ಮೂಲ ಬಲಪಡಿಸುವ ಅಗತ್ಯವಿದೆ. ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಜಿಡಿಪಿ ಬೆಳವಣಿಗೆ ನಡುವೆ ನೇರ ಸಂಬಂಧವಿದೆ ಎಂದು ಅನೇಕ ತಜ್ಞರು ಹೇಳಿದ್ದಾರೆ” ಎಂದರು.

“ನೀರು ವಿಶಿಷ್ಟ ಸಂಪನ್ಮೂಲ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಮಾನವನ ಮೂಲಭೂತ ಅಗತ್ಯ ಪೂರೈಸಲು, ಪರಿಸರ ಸಮತೋಲನ ಕಾಯ್ದುಕೊಳ್ಳಲು ನೀರು ಮೂಲಾಧಾರ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ನೀರಿನ ಮಾಲಿನ್ಯ ಮತ್ತು ವಿವಿಧ ವಲಯಗಳು ಅಥವಾ ಬಳಕೆದಾರರ ನಡುವಿನ ಸ್ಪರ್ಧೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ” ಎಂದರು.

“ಕರ್ನಾಟಕವು ಪರಿಣಾಮಕಾರಿ ನಿರ್ವಹಣೆ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸಾಧಿಸಲು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ನೀರಾವರಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಂದ ಅಕ್ರಮವಾಗಿ ನೀರು ಬಳಸಿಕೊಳ್ಳುವುದನ್ನು ತಡೆಯಲು ಕರ್ನಾಟಕ ನೀರಾವರಿ ಕಾಯ್ದೆಗೆ 1965ಕ್ಕೆ, 2024ರ ಆಗಸ್ಟ್ ನಲ್ಲಿ ತಿದ್ದುಪಡಿ ಮಾಡಲಾಯಿತು. ಕಾಲುವೆಗಳ ಮೂಲಕ ಅಕ್ರಮವಾಗಿ ನೀರು ಮೇಲೆತ್ತುವುದನ್ನು ತಪ್ಪಿಸಿ, ಕಾಲುವೆ ಕೊನೆ ಭಾಗದ ರೈತರಿಗೆ ನೀರು ಹೋಗುವಂತೆ ಮಾಡಲು ಈ ತಿದ್ದುಪಡಿ ಮಾಡಲಾಗಿದೆ. ಇದರ ವ್ಯಾಜ್ಯಗಳ ವಿಚಾರಣೆಗೆ ನೀರಾವರಿ ನ್ಯಾಯಾಲಯ ಸ್ಥಾಪನೆಗೆ ಅಗತ್ಯ ಸೆಕ್ಷನ್ ಗಳನ್ನು ಕಾಯ್ದೆಯಲ್ಲಿ ಸೇರಿಸಲಾಗಿದೆ, ಅಕ್ರಮಗಳ ವಿಚಾರಣೆ ನಡೆಸಲು ಅಧಿಕಾರಿಗಳಿಗೆ ಸೂಕ್ತ ಅಧಿಕಾರ ನೀಡಲಾಗಿದ್ದು, ಪೊಲೀಸರನ್ನು ಒಳಗೊಂಡ ಕಾರ್ಯಪಡೆಗೆ ಅವಕಾಶ ನಿಡುವ ಕುರಿತು ಈ ತಿದ್ದುಪಡಿ ಮಾಡಲಾಗಿದೆ” ಎಂದು ತಿಳಿಸಿದರು.

“ನೀರಾವರಿ ವಲಯದ ಪರಿಣಾಮಕಾರಿ ನಿರ್ವಹಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ನೂತನ ರಾಜ್ಯ ಜಲ ನೀತಿಯನ್ನು 2022 ರಲ್ಲಿ ಜಾರಿಗೆ ತರಲಾಯಿತು. ಜಲ ಸಂರಕ್ಷಣೆ ಹಾಗೂ ಆರೋಗ್ಯ, ಆಹಾರ, ಇಂಧನ, ಪರಿಸರ ಉದ್ದೇಶಕ್ಕೆ ನೀರಿನ ಮೂಲಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅವುಗಳೆಂದರೆ, ಪ್ರಸ್ತುತ ಜಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 29 ವಿವಿಧ ಶಾಸನಗಳಿದ್ದು, ಆ ಪೈಕಿ 14 ಕೇಂದ್ರ ಸರ್ಕಾರ ಹಾಗೂ 15 ರಾಜ್ಯ ಸರ್ಕಾರಗಳ ಕಾಯ್ದೆಗಳಾಗಿವೆ. ಮುಂದಿನ ದಿನಗಳಲ್ಲಿ ನೀರಿನ ಪರಿಣಾಮಕಾರಿ ಬಳಕೆಗೆ ಇನ್ನಷ್ಟು ತಿದ್ದುಪಡಿ ಮಾಡುವುದರ ಜತೆಗೆ ಹೊಸ ಕಾಯ್ದೆಗಳನ್ನು ಜಾರಿಗೆ ತರಬೇಕು. ಅಧಿಕಾರಗಳು, ಪ್ರಾಧಿಕಾರಗಳು, ಸಿಬ್ಬಂದಿ ಮತ್ತು ಸಂಪನ್ಮೂಲಗಳೊಂದಿಗೆ ಹೊಸ ಆಡಳಿತ ಸಂಸ್ಥೆಗಳ ಸ್ಥಾಪನೆ ಮಾಡಬೇಕು. ಸರ್ಕಾರಿ ಇಲಾಖೆಗಳ, ಸಂಸ್ಥೆಗಳ ಪುನರ್ ರಚನೆ. ಇವುಗಳ ನಿರ್ವಹಣೆಗಾಗಿ ನೂತನ ನಿರ್ದಿಷ್ಟ ಕಾರ್ಯಾಚರಣಾ ಪ್ರಕ್ರಿಯೆಗಳ (Standard Operating Procedures) ಅಭಿವೃದ್ಧಿ ಮತ್ತು ಅಳವಡಿಕೆ ಮಾಡಿಕೊಳ್ಳಬೇಕಿದೆ” ಎಂದರು.

“ಮಾನ್ಯ ಕೇಂದ್ರ ಸಚಿವರು ಕರ್ನಾಟಕದ ಬಾಕಿ ಇರುವ ಸಮಸ್ಯೆಗಳನ್ನು ಪರಿಗಣಿಸಲು ಮತ್ತು ಪರಿಹರಿಸಬೇಕಾಗಿ ಮನವಿ ಮಾಡುತ್ತೇನೆ. ಉತ್ತಮ ಸಂದರ್ಭದಲ್ಲಿ ನೀರಿನ ಕುರಿತು ಜಲ ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಜಲಶಕ್ತಿ ಸಚಿವಾಲಯಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹೇಳಿದರು.

Tags: BJPBWSSBCental GovtCM SiddaramaiahCongreess govtcongressDK ShivakumarDKSGodavari KaveriKaveryMahadayi YojanaNarendra ModiRajastansiddaramaiahState Govt
Previous Post

ರಾಜ್ಯದ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ

Next Post

ಬಡವರ ಭಾಗ್ಯವಿಧಾತ ಪುಸ್ತಕ ಬೆವರಿನ ಮೌಲ್ಯ ತೆರೆದಿಟ್ಟಿದೆ: ಕೆ.ವಿ.ಪಿ

Related Posts

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ
Top Story

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ

by ಪ್ರತಿಧ್ವನಿ
July 12, 2026
0

ಬೆಂಗಳೂರು: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಹರಡಿರುವ ಸುದ್ದಿಗಳಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅಧೀಕೃತ ಸ್ಪಷ್ಟನೆ ನೀಡಿದೆ. https://youtu.be/bDNDeS0JMK0?si=wll7H9RZqriYtIzB ಈ ಬಗ್ಗೆ ಪ್ರಕಟಣೆ ಹೊರಡಿಸಿರುವ...

Read moreDetails
ಮಗನ ಅಗಲಿಕೆಯ ನೋವಿನಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್. ಜಾನಕಿ

ಮಗನ ಅಗಲಿಕೆಯ ನೋವಿನಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್. ಜಾನಕಿ

July 11, 2026
Boat Tragedy In Vietnam

BREAKING NEWS : ದೋಣಿ ಮುಳುಗಿ 15 ಭಾರತೀಯರ ದುರ್ಮರಣ : ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ..

July 11, 2026
DK Vs HDK

ಕಂಬಳದಿಂದ ವೈಶಿಷ್ಟ್ಯಪೂರ್ಣ ದಸರಾದ ಘನತೆಗೆ ಧಕ್ಕೆ ಬೇಡ : ಸರ್ಕಾರದ ನಡೆಗೆ HDK ವಿರೋಧ..!

July 11, 2026
Janardhan Reddy Vs Naidu

ಜನಾರ್ದನ ರೆಡ್ಡಿಗೆ ನಾಯ್ಡು ಸರ್ಕಾರದ ಶಾಕ್‌ : ಬ್ರಾಹ್ಮಣಿ ಸ್ಟೀಲ್ಸ್‌ಗೆ ನೀಡಿದ್ದ ಜಮೀನು ವಾಪಸ್..!

July 11, 2026
Next Post

ಬಡವರ ಭಾಗ್ಯವಿಧಾತ ಪುಸ್ತಕ ಬೆವರಿನ ಮೌಲ್ಯ ತೆರೆದಿಟ್ಟಿದೆ: ಕೆ.ವಿ.ಪಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada