ಕರ್ನಾಟಕ ನೂತನ ಲೋಕಾಯುಕ್ತರಾಗಿ ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲರನ್ನು ನೇಮಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶಿಸಿದ್ದಾರೆ.
ನಿವೃತ್ತ ನ್ಯಾ.ಭೀಮನಗೌಡರನ್ನು ಮುಖ್ಯಮಂತ್ರಿಗಳು, ಕರ್ನಾಟಕ ವಿಧಾನಸಭೆ ಹಾಗು ವಿಧಾನಪರಿಷತ್ ಸಭಾಧ್ಯಕ್ಷರು, ಉಭಯ ಸದನಗಳ ವಿಪಕ್ಷ ನಾಯಕರು ಹಾಗು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಅನುಮೋದನೆ ಮೇರೆಗೆ ನೇಮಿಸಲಾಗಿದೆ.
2022 ಜನವರಿ 28ರಿಂದ ಖಾಲಿಯಿದ್ದ ಹುದ್ದೆಗೆ 5 ತಿಂಗಳ ಬಳಿಕ ನೂತನ ಲೋಕಾಯುಕ್ತರನ್ನ ನೇಮಿಸಿದೆ. ಒಟ್ಟು ಈ ವರೆಗೆ 8 ಲೋಕಾಯುಕ್ತರು ಕಾರ್ಯನಿರ್ವಹಿಸಿದ್ದಾರೆ. ನ್ಯಾ. ಬಿ.ಎಸ್.ಪಾಟೀಲರು 9 ನೇ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇವರು ಹೈಕೋರ್ಟ್ ನ್ಯಾಯಮೂರ್ತಿಗಳೂ ಆಗಿದ್ದರು.

ಈ ಹಿಂದೆ, 2017 ಜನವರಿ 28ರಿಂದ 2022 ಜನವರಿವರೆಗೆ ನ್ಯಾ. ವಿಶ್ವನಾಥ ಶೆಟ್ಟಿರವರು ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ಸ್ಥಾನಕ್ಕೆ ಉಪಲೋಕಾಯುಕ್ತರಾಗಿದ್ದ ನ್ಯಾ.ಬಿ.ಎಸ್.ಪಾಟೀಲ ಅವರು ನೇಮಕಗೊಂಡಿದ್ದಾರೆ.
ಮಾರ್ಚ್ ಕೊನೆಯಲ್ಲಿ ಇಬ್ಬರು ಉಪಲೋಕಾಯುಕ್ತರ ನೇಮಕವನ್ನ ರಾಜ್ಯಪಾಲರು ಮಾಡಿದ್ದರು.






