ಬೆಂಗಳೂರು ಪಿಜಿಗಳಿಗೆ ಮಾರ್ಗಸೂಚಿ ನಿಗದಿ ಮಾಡಿದೆ ಬಿಬಿಎಂಪಿ. ಪಿಜಿಗಳಲ್ಲಿನ ಭದ್ರತೆ ಹಾಗೂ ಸುರಕ್ಷತೆ ಬಗ್ಗೆ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಹೊಸ ಪಿಜಿಗಳಿಗೆ ಗೈಡ್ ಲೈನ್ಸ್ ಜಾರಿ ಮಾಡಿದೆ ಪಾಲಿಕೆ. ಪೇಯಿಂಗ್ ಗೆಸ್ಟ್ ಹೌಸ್‌ಗಳ ಎಲ್ಲಾ ಗೇಟ್‌ಗಳಲ್ಲಿ CCTV ಕಡ್ಡಾಯ ಮಾಡಲಾಗಿದೆ.
ಪ್ರತಿ CCTV ಕ್ಯಾಮೆರಾದ ವಿಡಿಯೋ ಫುಟೇಜ್‌ಗಳನ್ನು 90 ದಿನಗಳವರೆಗೆ ಸೇವ್ ಮಾಡಬೇಕು. ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್‌ಹೌಸ್‌ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿ ನೀಡಬೇಕು. ಪಿಜಿಯಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯ ಒದಗಿಸಬೇಕು ಎಂದಿದ್ದಾರೆ.
ಪಿಜಿಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇರಬೇಕು. ಪ್ರತಿಯೊಬ್ಬ ವಾಸಿಗೆ 135 LPCD ನೀರಿನ ಲಭ್ಯತೆ ಖಚಿತ ಪಡಿಸಿಕೊಳ್ಳಬೇಕು. ಪಿಜಿಗಳ ಅಡುಗೆ ಮನೆಗಳಿಗೆ ಕಡ್ಡಾಯವಾಗಿ FSSAI ಪರವಾನಿಗೆ ಪಡೆದಿರಬೇಕು. ಮಾಲೀಕರು ಪಿಜಿಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಓರ್ವ ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ನಿಯೋಜಿಸಬೇಕು ಎನ್ನಲಾಗಿದೆ.
ಅಗ್ನಿ ದುರಂತ ನಡೆಯದಂತೆ ಪಿಜಿ ಮಾಲೀಕರು ಮುನ್ನಚರಿಕೆ ಕ್ರಮ ವಹಿಸಬೇಕು. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಹೌಸ್ ಕಟ್ಟಡದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ – 1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ – 101 ಫಲಕವನ್ನು ಪ್ರದರ್ಶನ ಮಾಡಬೇಕು.
ಪೇಯಿಂಗ್ ಗೆಸ್ಟ್ ಹೌಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ First Aid Kits ಆಳವಡಿಸಿಬೇಕು. ಪೇಯಿಂಗ್ ಗೆಸ್ಟ್‌ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಕೃಷ್ಣಮಣಿ