ಪ್ರಪಂಚದಾದ್ಯಂತ ಕೋವಿಡ್ -19 ಸೋಂಕಿನ ಉಲ್ಬಣಕ್ಕೆ ಕಾರಣವಾಗಿರುವ ರೂಪಾಂತರಿ ವೈರಸ್ ಓಮಿಕ್ರಾನ್ ವಿರುದ್ಧ ಜಗತ್ತು ಹೋರಾಟ ನಡೆಸಿದ್ದರೆ ಇತ್ತ ಫ್ರಾನ್ಸ್ನ ವಿಜ್ಞಾನಿಗಳು ಕರೋನಾ ವೈರಸ್ ನ ಮತ್ತೊಂದು ಹೊಸ ರೂಪಾಂತರಿ ತಳಿಯನ್ನು ಗುರುತಿಸಿದ್ದಾರೆ.
ಫ್ರಾನ್ಸ್ನಲ್ಲಿ ಪತ್ತೆಯಾದ ಹೊಸ Covid-19 ರೂಪಾಂತರಿ ತಳಿಗೆ ‘IHU’ ಎಂದು ಹೆಸರಿಸಲಾಗಿದ್ದು, ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಎನ್ನಲಾಗಿದೆ. ಇದನ್ನು ಡಿಸೆಂಬರ್ 10 ರಂದು ಮೊದಲ ಬಾರಿಗೆ ಕಂಡುಹಿಡಿಯಲಾಗಿದೆ. ಆದರೆ WHO ತನಿಖೆಯ ಅಡಿಯಲ್ಲಿ ಒಂದು ರೂಪಾಂತರಿ ತಳಿ ಎಂದು ಲೇಬಲ್ ಮಾಡಿರುವುದಿಲ್ಲ. ಈ ಹೊಸ ರೂಪಾಂತರಿ ತಳಿಯ 12 ಪ್ರಕರಣಗಳು ಮಾರ್ಸಿಲ್ಲೆಸ್ ಬಳಿ ವರದಿಯಾಗಿದೆ.
IHU ಎಂದು ಹೆಸರಿಸಲಾದ ರೂಪಾಂತರಿ ತಳಿಯನ್ನು ಇನ್ಸ್ಟಿಟ್ಯೂಟ್ IHU ಮೆಡಿಟರೇನಿ ಇನ್ಫೆಕ್ಷನ್ ತಜ್ಞರು ಕಂಡುಹಿಡಿದಿದ್ದಾರೆ. ಇದು 46 ರೂಪಾಂತರಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆಫ್ರಿಕನ್ ದೇಶ ಕ್ಯಾಮರೂನ್ಗೆ ಪ್ರಯಾಣಿದ ಪ್ರಯಾಣಿಕರಲ್ಲಿ ಇದು ಕಂಡು ಬಂದಿದೆ.