• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೃಷಿ ಸಚಿವರಿಂದ ರೈತರ ನೆರವಿಗೆ ನೂತನ ಭೂಸಾರ ಆ್ಯಪ್ ಬಿಡುಗಡೆ..!!

ಪ್ರತಿಧ್ವನಿ by ಪ್ರತಿಧ್ವನಿ
August 8, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಕೃಷಿ ಸಚಿವರಿಂದ ರೈತರ ನೆರವಿಗೆ ನೂತನ ಭೂಸಾರ ಆ್ಯಪ್ ಬಿಡುಗಡೆ..!!
Share on WhatsAppShare on FacebookShare on Telegram

ಕೃಷಿ ಆಯುಕ್ತಾಲಯದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಹೊಸ ಕೃಷಿ ತಂತ್ರಜ್ಞಾನಗಳ ಕುರಿತ ಕಾರ್ಯಾಗಾರದಲ್ಲಿ ಸಚಿವ ಎನ್‌.ಚಲುವರಾಯಸ್ವಾಮಿ ಈ ಆ್ಯಪ್ ಬಿಡುಗಡೆ ಮಾಡಿ ಇದನ್ನು ಗರಿಷ್ಠ ಪ್ರಮಾಣದಲ್ಲಿ ಕೃಷಿಕರಿಗೆ ತಲುಪಿಸುವಂತೆ ಕರೆ ನೀಡಿದರು.

ADVERTISEMENT

ಅವೈಜ್ಞಾನಿಕ ಕೃಷಿ ಅತಿಯಾದ ರಸಾಯನಿಕ ಬಳಕೆ, ಮಣ್ಣಿನ ಸವಕಳಿಯಿಂದ ಫಲವತ್ತತೆ ಕಡಿಮೆಯಾಗುತ್ತಿದೆ. ಜೊತೆಗೆ ರೈತರಿಗೆ ತಮ್ಮ ಮಣ್ಣಿನ ಆರೋಗ್ಯದ ಬಗ್ಗೆ ಅರಿವಿನ ಕೊರತೆಯಿಂದ, ಅವೈಜ್ಞಾನಿಕವಾಗಿ ಗೊಬ್ಬರ ಮತ್ತು ಕೀಟನಾಶಕ ಬಳಸಿ ಮಣ್ಣಿನ ಸತ್ವ ಹಾಳು ಮಾಡುವುದರ ಜೊತೆಗೆ ನಷ್ಟವನ್ನು ಅನುಭವಿಸುತಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಭೂಸಾರ ಆ್ಯಪ್ ಪ್ರಯೋಜಕರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವರ್ಷ ಕನಿಷ್ಠ ಐದು ಲಕ್ಷ ರೈತರ ಜಮೀನಿನ ಮಣ್ಣು ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ ಜೊತೆಗೆ ಎಲ್ಲಾ ರೈತರಿಗೂ ಈ ತಂತ್ರಜ್ಞಾನದ ಅರಿವು ಮೂಡಿಸಬೇಕಿದೆ ಎಂದು ಸಚಿವರು ಕರೆ ನೀಡಿದರು.

ಕರ್ನಾಟಕ ರಾಜ್ಯ ಕೃಷಿ ಪ್ರಧಾನವಾಗಿದ್ದು ರೈತ ಸಬಲಿಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ, ಯಾಂತ್ರಿಕವಾಗಿ, ತಾಂತ್ರಿಕವಾಗಿ ಕೃಷಿಕರನ್ನು ಸದೃಡವನ್ನಾಗಿಸುವುದು ನಮ್ಮ ಗುರಿ ಎಂದು ಸಚಿವರು ಹೇಳಿದರು.

ಕೃಷಿ ತಜ್ಞರು ಪರಿಶೋಧಕರು, ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಗಳು ರೈತರ ಮನೆಬಾಗಿಲನ್ನು ಸುಲಭವಾಗಿ ತಲುಪಬೇಕು ಹಾಗೂ ಅವರಿಗೆ ತರಬೇತಿ ನೀಡಬೇಕು. ಕಾರ್ಯಗಾರಗಳ ಮೂಲಕ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಈ ಜ್ಞಾನವನ್ನು ಕೃಷಿಕರಿಗೆ ವರ್ಗಾಯಿಸಬೇಕಿದೆ ಎಂದು ಕೃಷಿ ಸಚಿವರು ಹೇಳಿದರು.

ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ಶೇಕಡಾ 100 ರಷ್ಟು ಗುರಿ ಸಾಧನೆ ಜೊತೆಗೆ ನಿಗಧಿಗಿಂತ ಹೆಚ್ಚಳ ಕೇಂದ್ರದ ಅನುದಾನ ಪಡೆದು ಕೃಷಿಕರಿಗೆ ತಲುಪಿಸಲಾಗಿದೆ. ಇದೇ ರೀತಿ ಈ ವರ್ಷವೂ ಹೆಚ್ಚಿನ ಕಾಳಜಿ ಹಾಗೂ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

ಇಲಾಖೆಯಲ್ಲಿ ನೆನಗುಧಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸುಮಾರು 950 ಹುದ್ದೆಗಳ ನೇರ ನೇಮಕಾತಿಗೂ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಕೃಷಿಗೆ ಇನ್ನಷ್ಟು ಹೆಚ್ಚಿನ ಆಧ್ಯತೆ ನೀಡಲಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸಹ ಬೆಳೆ ವಿಮೆ ಎನ್‌.ಡಿ.ಆರ್‌.ಎಫ್ ಪರಿಹಾರ ಹಾಗೂ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರೈತರ ಸಂಕಷ್ಟವನ್ನು ಕಡಿಮೆ ಮಾಡಿದೆ ಎಂದರು.

ಕರ್ತವ್ಯ ಲೋಪ, ನಿರ್ಲಕ್ಷ್ಯ ಸಲ್ಲ ಎಚ್ಚರಿಕೆ: ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ. ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದೆಂದು ಇದೇ ವೇಳೆ ಕೃಷಿ ಸಚಿವರು ಎಚ್ಚರಿಕೆ ನೀಡಿದರು.

ಕೃಷಿ ಆಯುಕ್ತ ವೈ.ಎಸ್.ಪಾಟೀಲ್ (Y S Patil) ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕೃಷಿ ಇಲಾಖೆಯ ಸಾಧನೆಗೆ ಸಚಿವರಾದ ಚಲುವರಾಯಸ್ವಾಮಿ(Minister Chaluvanarayaswamy) ರವರ ಪ್ರೋತ್ಸಾಹ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳೇ ಪ್ರಮುಖ ಕಾರಣವಾಗಿದೆ. ಅಭಿವೃಧ್ಧಿಗೆ ನೀಡಿದ ಮುಕ್ತ ಸ್ವಾತಂತ್ರ್ಯ ಅಧಿಕಾರಿಗಳ ಸಾಂಘಿಕ ಪ್ರಯತ್ನಕ್ಕೆ ಪ್ರಮುಖ ಪ್ರೇರಣೆಯಾಗಿದೆ ಎಂದರು.

ಕೃಷಿ ಇಲಾಖೆಯಲ್ಲಿ ಜಾರಿಗೊಳಿಸಿರುವ ಹೊಸ ಯೋಜನೆಗಳು ಮುಂದಿನ ಕಾರ್ಯಸೂಚಿಗಳ ಬಗ್ಗೆ ಅವರು ವಿವರಿಸಿದರು. ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ(Dr. G T Putra) , ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಪದ್ಮಯ್ಯನಾಯಕ್ (Padmayya Nayak) ಹಾಗೂ ಇಲಾಖೆಯ ಜಂಟಿ ನಿರ್ದೆಶಕರು, ಉಪ ನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಭೂಸಾರ ಆ್ಯಪ್ ವಿಶೇಷತೆ:- ರಾಜ್ಯಾದಾದ್ಯಂತ ಭೂಸಾರ ಮೊಬೈಲ್ ಆ್ಯಪ್ನ ಮೂಲಕ ಮಣ್ಣು ಮಾದರಿಗಳನ್ನು ಗ್ರಾಮಗಳ ಕೆಡಸ್ಟ್ರಲ್‌ ನಕ್ಷೆಗಳನ್ನು ಬಳಸಿಕೊಂಡು ಮಣ್ಣು ಮಾದರಿ ಸಂಗ್ರಹಿಸುವ ಜಮೀನಿನ ಭೌಗೋಳಿಕ ವಿವರಗಳನ್ನು ಹಾಗೂ ಸಂಬಂಧಿಸಿದ ರೈತರ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಿಂದ ಸೆಳೆದು ಬೆಳೆ ವಿವರ, ನೀರಾವರಿ ವಿವರ ಹಾಗೂ ಮಣ್ಣಿನ ವಿವಿಧ ವಿವರಗಳೊಂದಿಗೆ ಫೋಟೋ ಹಾಗೂ ವಿಡಿಯೋದ ಮಾಹಿತಿಯನ್ನು ದಾಖಲಿಸಬಹುದು. ಈ ತಂತ್ರಾಂಶದ ಮೂಲಕ ಸಂಗ್ರಹಿಸಿದ ಮಣ್ಣು ಮಾದರಿಗಳಿಗೆ ಪ್ರತ್ಯೇಕ ಐಡಿ ರಚನೆಯಾಗುತ್ತದೆ. ಸದರಿ ಪ್ರತ್ಯೇಕ ಐಡಿಗಳ ಪ್ರತಿಯಾಗಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಿದ ಮಣ್ಣು ಪರೀಕ್ಷಾ ಫಲಿತಾಂಶವನ್ನು ರೈತರ ಮಾಹಿತಿಯೊಂದಿಗೆ ಸಂಯೋಜಿಸಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ತಯಾರಿಸಲಾಗುತ್ತದೆ.

Tags: BhusaraBJPChaluvanarayanaswamyCongress PartyMandyaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮೋದಿ,ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ..!

Next Post

ಅಡುಗೆ ಮನೆಯಲ್ಲಿ ನೊಣಗಳ ಕಾಟ ಹೆಚ್ಚಿದ್ರೆ, ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!

Related Posts

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
0

ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ (Heart attack) ನಿಂದ ಸರಣಿ ಮುಂದುವರೆದಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಕೇಂದ್ರದ ಆರೋಗ್ಯ ಇಲಾಖೆಯಿಂದ (Central health department)...

Read moreDetails

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025
ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
Next Post
ಅಡುಗೆ ಮನೆಯಲ್ಲಿ ನೊಣಗಳ ಕಾಟ ಹೆಚ್ಚಿದ್ರೆ, ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!

ಅಡುಗೆ ಮನೆಯಲ್ಲಿ ನೊಣಗಳ ಕಾಟ ಹೆಚ್ಚಿದ್ರೆ, ಈ ಸಿಂಪಲ್ ಹ್ಯಾಕ್ ನ ಟ್ರೈ ಮಾಡಿ.!

Recent News

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
Top Story

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

by ಪ್ರತಿಧ್ವನಿ
July 2, 2025
ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ
Top Story

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

by Chetan
July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!