ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದ್ದು ಸಂಸದ ಶಶಿ ತರೂರ್ ಹಾಗೂ ಮಾಜಿ ಕೇಮದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ ಮತ್ತು ಉಭಯ ನಾಯಕರು ಈಗಾಗಲೇ ತಮ್ಮದೇ ಆದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು ತಿರುವನಂತಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ ತರೂರ್ ತಮ್ಮಗೆ ಹಿರಿಯ ನಾಯಕರ ಮತವನ್ನ ನಾನು ನಿರೀಕ್ಷಿಸುತ್ತಿಲ್ಲ ಆದರೆ ಅವರುಗಳ ಬೆಂಬಲವನ್ನ ನಿರೀಕ್ಷಯಲ್ಲಿದ್ದೇನೆ ಎಂದಿದ್ದಾರೆ.
ನಾನು ಸಾಮಾನ್ಯ ಮತದಾರರಿಂದ ಬೆಂಬಲವನ್ನ ನಿರೀಕ್ಷಿಸುತ್ತಿದ್ದೇನೆ. ಈಗಾಗಲೇ ಎರಡು ರಾಜ್ಯಗಳಲ್ಲಿ ಪ್ರಚಾರ ಮಾಡಿದ್ದೇನೆ ನನಗೆ ಬರುತ್ತಿರುವ ಕರೆಗಳು ಸಾಮಾನ್ಯ ವರ್ಗದ್ದೇ ಆಗಿದೆ ಎಂದು ತಿಳಿಸಿದ್ದಾರೆ.

ಮತ್ತೋರ್ವ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ ಹಿರಿಯ ನಾಯಕರು ನಿಲುವು ತಳೆಯುತ್ತಿರುವ ಬಗ್ಗೆ ತರೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು 19ರಂದು ಫಲಿತಾಂಶ ಹಿರಬೀಳಲಿದೆ.






