ಕಾಳಿ ನದಿ ಸೇತುವೆ ಕುಸಿತದಲ್ಲಿ ನದಿಗೆ ಬಿದ್ದಿದ್ದ ಲಾರಿಯನ್ನು ಮೇಲೆತ್ತಿದ ಸಾಹಸಿಗರು. ಈಶ್ವರ ಮಲ್ಪೆ ತಂಡ ಮತ್ತು ಸ್ಥಳೀಯ ಈಜು ಪಟುಗಳಿಂದ ಕಾರ್ಯಾಚರಣೆ ನಡೆದಿದ್ದು, ಲಾರಿಯನ್ನು ಮೇಲೆತ್ತಿದ್ದಾರೆ. ಗುರುವಾರ ಮುಂಜಾನೆ 7ಗಂಟೆಗೆ ಆರಂಭವಾಗಿದ್ದ ಕಾರ್ಯಾಚರಣೆ ಸತತ 12 ತಾಸುಗಳ ಕಾರ್ಯಾಚರಣೆ ಬಳಿಲ ಲಾರಿಯನ್ನು ಪತ್ತೆಮಾಡಿ ಮೇಲೆತ್ತಲಾಗಿದೆ.
ತಮಿಳುನಾಡು ಮೂಲದ ಲಾರಿ, ಸೇತುವೆ ಕುಸಿದ ಸಂದರ್ಭದಲ್ಲಿ ಕಾಳಿ ನದಿಗೆ ಉರುಳಿ ಬಿದ್ದಿತ್ತು.. ನೀರಿನ ಹರಿವಿನ ವೇಗ ಹೆಚ್ಚಿದ್ದರಿಂದ ಲಾರಿ ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಇವತ್ತು ನಡೆದ ಕಾರ್ಯಾಚರಣೆಯಲ್ಲಿ ಲಾರಿ ಮೇಲೆತ್ತುವಲ್ಲಿ ಯಶಸ್ವಿ ಆಗಿದ್ದಾರೆ. ಕಾಳಿ ನದಿ ದಡಕ್ಕೆ ತಂದು ಲಾರಿಯನ್ನು ಇಡಲಾಗಿದೆ. ನದಿಗೆ ಬಿದ್ದಿದ್ದ ಲಾರಿ ನೀರಿನ ಹರಿವಿಗೆ ಸಂಪೂರ್ಣ ಜಕಂ ಆಗಿದೆ..
ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ್ದಾರೆ ಲಾರಿ ಮಾಲೀಕ. ಕಾರವಾರದ ಕಾಳಿ ಸೇತುವೆ ಕುಸಿತದಿಂದ ಈ ಘಟನೆ ನಡೆದಿತ್ತು. ಸೇತುವೆಯಿಂದ ಕೆಳಗೆ ಬಿದ್ದಿದ್ದ ಲಾರಿ ಮೇಲಕ್ಕೆ ಸಾಧ್ಯವಾಗಿರಲಿಲ್ಲ. ಕಾರವಾರದ ಕೋಡಿಭಾಗ್ ತೀರದಿಂದ ಕ್ರೇನ್ ಮೂಲಕ ಲಾರಿ ಮೇಲಕ್ಕೆ ಎತ್ತಿದ್ದಾರೆ ಈಶ್ವರ ಮಲ್ಪೆ ತಂಡ. 3 ಕ್ರೇನ್, 1 ಹೈಡ್ರಾ ಹಾಗೂ 30ಕ್ಕೂ ಅಧಿಕ ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಕೃಷ್ಣಮಣಿ